AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಕ್ಷಣ ಇಲಾಖೆ ವಿರುದ್ಧ ಚಾಟಿ ಬೀಸಿದ ಮಕ್ಕಳ ಹಕ್ಕುಗಳ ಆಯೋಗ; ನರ್ಸರಿ ಶಾಲೆಗಳ ಕಡಿವಾಣಕ್ಕೆ ಒತ್ತಾಯ

ಮಕ್ಕಳ ಬದುಕು ರೂಪಿಸಬೇಕಾಗಿರುವ ವಿದ್ಯಾ ದೇಗುಲಗಳು ಮಕ್ಕಳ ಭವಿಷ್ಯದ ಜೊತೆ ಚಲ್ಲಾಟವಾಡ್ತಿವೆ. ಪೋಷಕರ ನೂರಾರು ಕನಸುಗಳು ನುಚ್ಚು ನೂರು ಮಾಡ್ತಿವೆ. ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳ ಹಾವಳಿ ಶುರವಾಗಿದೆ. ಬೆಂಗಳೂರಿನಲ್ಲಿ ಅನಧಿಕೃತ LKG, UKG ಪ್ರೀ ನರ್ಸರಿ ಶಾಲೆಗಳು ಪೋಷಕರ ವಂಚನೆಗೆ ಮುಂದಾಗಿವೆ. ಆದ್ರೆ ಶಿಕ್ಷಣ ಇಲಾಖೆ ಮಾತ್ರ ಗಪ್ ಚುಪ್ ಅಂತಿದ್ದು ಮಕ್ಕಳ ಹಕ್ಕುಗಳ ಆಯೋಗ ಚಾಟಿ ಬೀಸಿದೆ.

ಶಿಕ್ಷಣ ಇಲಾಖೆ ವಿರುದ್ಧ ಚಾಟಿ ಬೀಸಿದ ಮಕ್ಕಳ ಹಕ್ಕುಗಳ ಆಯೋಗ; ನರ್ಸರಿ ಶಾಲೆಗಳ ಕಡಿವಾಣಕ್ಕೆ ಒತ್ತಾಯ
ಸಾಂದರ್ಭಿಕ ಚಿತ್ರ
Vinay Kashappanavar
| Updated By: ಆಯೇಷಾ ಬಾನು|

Updated on: May 16, 2024 | 8:57 AM

Share

ಬೆಂಗಳೂರು, ಮೇ.16: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ನಾಯಿ ಕೊಡೆಗಳಂತೆ ನರ್ಸರಿ LKG & UKG ಶಾಲೆಗಳು ತಲೆ ಎತ್ತುತ್ತಿವೆ. ಪೂರ್ವ ಪ್ರಾಥಮಿಕ ಶಾಲೆಗಳ ಹೆಸರಲ್ಲಿ ಪೋಷಕರ ಬಳಿ ಲಕ್ಷ ಲಕ್ಷ ಸುಲಿಗೆ ಮಾಡ್ತಿವೆ. ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೆಯೇ ಯಾವುದೇ ಮಾನದಂಡಗಳಿಲ್ಲದೇ ಶಾಲೆಗಳ ಆರಂಭವಾಗುತ್ತಿರುವುದರಿಂದ ನರ್ಸರಿಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು ಹಾಗೂ ಹಲ್ಲೆ ಹೆಚ್ಚಾಗುತ್ತಿವೆ. ಸದ್ಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಇವುಗಳಿಗೆ ಯಾವುದೇ ಕಠಿಣವಾದ ಮಾರ್ಗಸೂಚಿಗಳಿಲ್ಲ. ಪೂರ್ವ ಪ್ರಾಥಮಿಕ ಶಾಲೆಗಳ ನೊಂದಣಿ ಕಡ್ಡಾಯ ಮಾಡಿರುವುದು ಬಿಟ್ರೆ ಯಾವುದೇ ಮಾನದಂಡ ಇಲ್ಲ. ಇನ್ನೂ ಈ ಶಾಲೆಗಳು ಯಾವುದೇ. ರೂಲ್ಸ್ ಫಾಲೋ ಕೂಡಾ ಮಾಡ್ತಿಲ್ಲ.

2018 ಶಿಕ್ಷಣ ಕಾಯ್ದೆಯ ಪ್ರಕಾರ ನರ್ಸರಿ ಶಾಲೆಗಳು ಕಡ್ಡಾಯ ನೊಂದಣಿಯಾಗಬೇಕು. ಆದರೆ ಶಿಕ್ಷಣ ಇಲಾಖೆಯ STATS ನಲ್ಲಿ ಈ ನರ್ಸರಿ ಶಾಲೆಗಳು ರಿಜಿಸ್ಟರ್ ಆಗೋದಿಲ್ಲ. ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಓಪನ್ ಆಗ್ತಿವೆ, ಕ್ಲೋಸ್ ಆಗ್ತಿವೆ. ಆದ್ರೆ ನೊಂದಣಿಯಾಗ್ತಿಲ್ಲ. ಯಾವುದೇ ನಿಯಮ ಪಾಲನೆ ಮಾಡ್ತಿಲ್ಲ. ಹೀಗಾಗಿ ಮಕ್ಕಳ ಹಕ್ಕುಗಳ ಆಯೋಗ ಈ ಬಗ್ಗೆ ಶಿಕ್ಷಣ ಇಲಾಖೆಗೆ ಪತ್ರ ಬರೆದು ವರದಿ ಕೇಳಿದೆ. ಅಷ್ಟೇ ಅಲ್ಲದೆ ಸದ್ಯ ನರ್ಸರಿಗಳಲ್ಲಿ ಮಕ್ಕಳ ರಕ್ಷಣೆ ಹಾಗೂ ಮೂಲಭೂತ ಸೌಕರ್ಯ ಇಲ್ಲ. ಇನ್ನು ಹಲವೆಡೆ ದೌರ್ಜನ್ಯ ಹಲ್ಲೆ ಹೆಚ್ಚಾಗುತ್ತಿವೆ.

ನರ್ಸರಿಗಳ ಆರಂಭಕ್ಕೆ ಬೇಕಾದ ಸೌಕರ್ಯ ಮಾನದಂಡಗಳಿಲ್ಲದೆ ಇರುವುದರಿಂದ ಎಲ್ಲಡೆ ನರ್ಸರಿಗಳ ತಲೆ ಎತ್ತಿ ಸುಲಿಗೆಗೆ ಮುಂದಾಗಿವೆ. ಹೀಗಾಗಿ ಶಿಕ್ಷಣ ಇಲಾಖೆ ಮಕ್ಕಳ ಸುರಕ್ಷಿತ ದೃಷ್ಟಿಯಿಂದ ಯಾವುದೇ ಭದ್ರತೆ ತೆಗೆದುಕೊಳ್ಳದೆ ತಲೆ ಎತ್ತುತ್ತಿರುವ ನರ್ಸರಿ ಶಾಲೆಗಳ ಮೇಲೆ ಸೂಕ್ತ ಕ್ರಮವಹಿಸುವಂತೆ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಇರುವ ಕನಿಷ್ಠ ಮಾನದಂಡಗಳನ್ನ ನರ್ಸರಿ ಶಾಲೆಗಳ ಆರಂಭಕ್ಕೆ ನಿಗಧಿ ಮಾಡುವಂತೆ ಮಕ್ಕಳ ಹಕ್ಕುಗಳ ಆಯೋಗ ಚಾಟಿ ಬೀಸಿದೆ.

ಇದನ್ನೂ ಓದಿ: ಮೈಸೂರು ಸರ್ಕಾರಿ ಆಸ್ಪತ್ರೆಯಲ್ಲಿ ನೀರು, ವಿದ್ಯುತ್ ಸಮಸ್ಯೆ; ಸರಿಯಾದ ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ

ಪೂರ್ವ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಕಠಿಣವಾದ ಮಾನದಂಡಗಳಿಲ್ಲದೆ ಇರುವುದರಿಂದ ಎಲ್ಲೆಡೆ ನರ್ಸರಿಗಳು ತಲೆ ಎತ್ತಿ ಸುಲಿಗೆಗೆ ಮುಂದಾಗಿವೆ. ಹೀಗಾಗಿ ಶಿಕ್ಷಣ ಇಲಾಖೆ ಮಕ್ಕಳ ಸುರಕ್ಷಿತ ದೃಷ್ಟಿಯಿಂದ ಯಾವುದೇ ಭದ್ರತೆ ತೆಗೆದುಕೊಳ್ಳದೆ ತಲೆ ಎತ್ತುತ್ತಿರುವ ನರ್ಸರಿ ಶಾಲೆಗಳ ಮೇಲೆ ಸೂಕ್ತ ಕ್ರಮವಹಿಸುವಂತೆ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಇರುವ ಕನಿಷ್ಠ ಮಾನದಂಡಗಳನ್ನ ನರ್ಸರಿ ಶಾಲೆಗಳ ಆರಂಭಕ್ಕೆ ನಿಗದಿ ಮಾಡುವಂತೆ ಖಾಸಗಿ ಶಾಲೆಗಳ ಒಕ್ಕೂಟ ಒತ್ತಾಯಿಸಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಿಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹೇಳಿದರು.

ಪೂರ್ವ ಪ್ರಾಥಮಿಕ ಶಾಲೆಗಳ ಗೈಡ್ ಲೈನ್ಸ್ ಏನು?

  • ಕಡ್ಡಾಯವಾಗಿ ಶಿಕ್ಷಣ ಇಲಾಖೆಯ ನೋಂದಣಿ ಮಾಡಿಸಬೇಕು
  • ಯಾವ ಯಾವ ತರಗತಿ ಆರಂಭಕ್ಕೆ ಅಂತಾ ಮಾನ್ಯತೆ ಪಡೆಯಬೇಕು
  • ಪೂರ್ವ ಪ್ರಾಥಮಿಕ ಶಾಲೆಗಳಿಗೆ ಕೊಠಡಿಗೆ ನಿಗದಿತ ವಿದ್ಯಾರ್ಥಿಗಳ ಮಾನದಂಡವಿದೆ
  • ಯಾವ ಯಾವ ವಯಸ್ಸಿನ ಮಕ್ಕಳಿಗೆ LKG, UKG ಹಾಗೂ ನರ್ಸರಿ ಅಂತಾ ವಯಸ್ಸು ನಿಗದಿ ಮಾಡಲಾಗಿದೆ
  • ಕೊಠಡಿಗೆ ಒಬ್ಬ ಶಿಕ್ಷಕ/ ಶಿಕ್ಷಕಿ ಒಬ್ಬರು ಆಯಾ ಇರಬೇಕು
  • ಮಕ್ಕಳ ಸುರಕ್ಷಿತ ಕ್ರಮಗಳ ಬಗ್ಗೆ ಮಾರ್ಗಸೂಚಿ ಫಾಲೋ ಮಾಡಬೇಕು
  • ಮಕ್ಕಳ ಚಟುವಟಿಕೆ ಮೇಲೆ ನಿಗಾವಹಿಸಿ ಎಚ್ಚರಿಕೆ ವಹಿಸಲು ಕೊಠಡಿಗೆ ಒಬ್ರು ಸಹಾಯಕರನ್ನು ನೇಮಿಸಬೇಕು.
  • ಶಾಲೆಗಳ ಭದ್ರತೆ ಹಾಗೂ ರಕ್ಷಣೆಗೆ ಪೂರಕವಾಗಿರಬೇಕು
  • ಬಹು ಅಂತಸ್ಥಿನ ಕಟ್ಟಡಗಳಲ್ಲಿ ನರ್ಸರಿ ಶಾಲೆ ಆರಂಭಿಸುವಂತಿಲ್ಲ. ಆರಂಭ ಮಾಡಿದ್ರು ಶಾಲೆ ಮೊದಲ ಮಹಡಿಯಲ್ಲಿಯೇ ಇರಬೇಕು.
  • ಮಕ್ಕಳ ಆರೋಗ್ಯದ ಮೇಲೆ ವಿಶೇಷ ಗಮನ ಇರಬೇಕು
  • ವಿಶೇಷ ಚಟುವಟಿಕೆಯನ್ನ ಆರಂಭದಲ್ಲಿಯೇ ಪತ್ತೆ ಹಚ್ಚಲು ಶಾಲೆಗೆ ಕನಿಷ್ಠ ಒಬ್ಬ ಆಪ್ತಸಮಾಲೋಚಕರು ಇರಬೇಕು ( ಕಡ್ಡಾಯವಲ್ಲ )
  • ಮಕ್ಕಳ ಕೈಗೆ ಅಪಾಯಕಾರಿ ವಸ್ತುಗಳು ಸಿಗದಂತೆ ಎಚ್ಚರ ವಹಿಸಬೇಕು
  • ಕಲಿಕೆಯಲ್ಲಿ ಹಿಂದುಳಿದ ಮಗುವಿಗೆ ಒತ್ತಡ ಅಥವಾ ಶಿಕ್ಷ ನೀಡಬಾರದು

    ಒಟ್ನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಅನಧಿಕೃತ ನರ್ಸರಿ ಹಾಗೂ LKG, UKG ಗಳಿಗೆ ಬ್ರೇಕ್ ಹಾಕಬೇಕಿದೆ. ಕನಿಷ್ಠ ಮಾನದಂಡಗಳ ಮಾರ್ಗಸೂಚಿಗಳನ್ನಾದರೂ ಈ ಶಾಲೆಗಳಿಗೆ ಕಡ್ಡಾಯ ಮಾಡಬೇಕಿದೆ. ನಿಯಮ ಉಲ್ಲಂಘಿಸುವ ಶಾಲೆಗಳಿಗೆ ನರ್ಸರಿಗಳಿಗೆ ಬ್ರೇಕ್ ಹಾಕಬೇಕಿದೆ. ಇಲ್ಲದೆ ಇದ್ರೆ ಪೂರ್ವ ಪ್ರಾಥಮಿಕ ಶಾಲೆಗಳು ಶಿಕ್ಷಣಕ್ಕಿಂತ ಸುಲಿಗೆಯನ್ನೆ ಬಂಡವಾಳ ಮಾಡಿಕೊಂಡು ಗಲ್ಲಿ ಗಲ್ಲಿಗೊಂದು ತಲೆ ಎತ್ತೋದರಲ್ಲಿ ಯಾವುದೇ ಅನುಮಾನ ಇಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ