ಮೈಸೂರು ಜಿಲ್ಲೆಯಲ್ಲಿ 3 ಪ್ರತ್ಯೇಕ ಅಪಘಾತ: ಒಟ್ಟು ನಾಲ್ವರು ಸಾವು

| Updated By: ವಿವೇಕ ಬಿರಾದಾರ

Updated on: Nov 10, 2023 | 7:21 AM

ಮೈಸೂರು ಜಿಲ್ಲೆಯಲ್ಲಿ ಮೂರು ಪ್ರತ್ಯೇಕ ಅಪಘಾತ ನಡೆದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಹುಣಸೂರು ತಾಲೂಕಿನ ಅರಸು ಕಲ್ಲಹಳ್ಳಿ ಬಳಿ ಬೈಕ್​ ಮತ್ತು ಬೊಲೆರೊ ವಾಹನದ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ 3 ಪ್ರತ್ಯೇಕ ಅಪಘಾತ: ಒಟ್ಟು ನಾಲ್ವರು ಸಾವು
ಮಗುವಿನ ಮೇಲೆ ಹರಿದ ಶಾಲಾ ವಾಹನ
Follow us on

ಮೈಸೂರು ನ.10: ಮೈಸೂರು (Mysore) ಜಿಲ್ಲೆಯಲ್ಲಿ ಮೂರು ಪ್ರತ್ಯೇಕ ಅಪಘಾತ (Accident) ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಹುಣಸೂರು (Hunasuru) ತಾಲೂಕಿನ ಅರಸು ಕಲ್ಲಹಳ್ಳಿ ಬಳಿ ಬೈಕ್​ ಮತ್ತು ಬೊಲೆರೊ ವಾಹನದ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ತಡರಾತ್ರಿ ಮೈಸೂರಿನ ಯಾದವಗಿರಿ ಸಮೀಪ ನಿಯಂತ್ರಣ ತಪ್ಪಿ ಬೈಕ್​ನಿಂದ ಬಿದ್ದು ಇಬ್ಬರು ಸ್ಥಳದಲ್ಲೇ ದುರ್ಮರಣರಾಗಿದ್ದಾರೆ. ಹುಣಸೂರು ತಾಲೂಕಿನ ಮಂಜುನಾಥ ಬಡಾವಣೆಯಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಶಾಲಾ ವಾಹನ ಮಗುವಿನ ಮೇಲೆ ಹರಿದಿದೆ.

ಬೈಕ್​-ಬೊಲೆರೊ ವಾಹನದ ನಡುವೆ ಅಪಘಾತ

ಆಂಧ್ರಪ್ರದೇಶ ಮೂಲದ ಬೊಲೆರೋ ವಾಹನ ಪಿರಿಯಾಪಟ್ಟಣ ಕಡೆಯಿಂದ ಹುಣಸೂರಿಗೆ ತೆರಳುತ್ತಿತ್ತು. ಹುಣಸೂರಿನಿಂದ ಅತ್ತಿ ಗುಪ್ಪೆ ಕಡೆ ಬರುತ್ತಿತ್ತು. ಅರಸು ಕಲ್ಲಹಳ್ಳಿ ಗೇಟ್ ಬಳಿ ಎರಡು ವಾಹನಗಳು ಮುಖಾ ಮುಖಿ ಡಿಕ್ಕಿಯಾಗಿವೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತ್ತಿಗುಪ್ಪೆ ಗ್ರಾಮದ ಕರಿಯಪ್ಪ(40), ನಾಗರಾಜು(57) ಮೃತದುರ್ದೈವಿಗಳು. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 2022 ರ ರಸ್ತೆ ಅಪಘಾತಗಳ ಆತಂಕಕಾರಿ ವರದಿ ಪ್ರಕಟ- ಹೆಚ್ಚಿನ ಸಾವು ಸಂಭವಿಸಲು ಇದೇ ಕಾರಣವಂತೆ..

ಬೈಕ್​ನಿಂದ ಬಿದ್ದು ಇಬ್ಬರು ಸ್ಥಳದಲ್ಲೇ ದುರ್ಮರಣ

ತಡರಾತ್ರಿ ಮೈಸೂರಿನ ಯಾದವಗಿರಿ ಸಮೀಪ ನಿಯಂತ್ರಣ ತಪ್ಪಿ ಬೈಕ್​ನಿಂದ ಬಿದ್ದು ಇಬ್ಬರು ಸ್ಥಳದಲ್ಲೇ ದುರ್ಮರಣರಾಗಿದ್ದಾರೆ. ಗೋಕುಲಂ ನಿವಾಸಿಗಳಾದ ಸಿದ್ದರಾಜು (20), ನಿರಂಜನ್(20) ಮೃತದುರ್ದೈವಿಗಳು. ಬೈಕ್​ನಲ್ಲಿದ್ದ ಮತ್ತೋರ್ವನಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿವಿ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗುವಿನ ಮೇಲೆ ಹರಿದ ಶಾಲಾ ವಾಹನ

ನಿನ್ನೆ (ನ.10) ಹುಣಸೂರು ತಾಲೂಕಿನ ಮಂಜುನಾಥ ಬಡಾವಣೆಯಲ್ಲಿ ಮಗು ಶಾಲಾ ವಾಹನದಿಂದ ಇಳಿದೆ. ಮನೆಗೆ ಹೋಗುವಾಗ ಚಾಲಕನ ನಿರ್ಲಕ್ಷ್ಯದಿಂದ ವಾಹನ ಮಗುವಿನ ಮೇಲೆ ಹರಿದಿದೆ. ಘಟನೆಯಲ್ಲಿ ಮಗುವಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿಸಿದೆ. ಮಗುವಿನ ಮೇಲೆ ಶಾಲಾ ವಾಹನ ಹರಿದ ದೃಶ್ಯ ಸಿಸಿ‌ಟಿವಿಯಲ್ಲಿ ಸೆರೆಯಾಗಿದೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ