ಕಳುವಾಗಿದ್ದ 9 ಲಕ್ಷ ಮೌಲ್ಯದ 50 ಮೊಬೈಲ್​ ಜಪ್ತಿ, ವಾರಸುದಾರರಿಗೆ ಹಸ್ತಾಂತರ: ಎಸ್​ಪಿ ಸೀಮಾ ಲಾಟ್ಕರ್

|

Updated on: May 23, 2023 | 7:09 PM

ಮೈಸೂರು ಜಿಲ್ಲೆಯಲ್ಲಿ ಕಳುವಾಗಿದ್ದ 9 ಲಕ್ಷ ಮೌಲ್ಯದ 50 ಮೊಬೈಲ್​ ಜಪ್ತಿ ಮಾಡಿದ್ದು, 5 ಲಕ್ಷ ರೂ. ಮೌಲ್ಯದ 30 ಮೊಬೈಲ್​ ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸೀಮಾಲಾಟ್ಕರ್​ ಹೇಳಿದರು.

ಕಳುವಾಗಿದ್ದ 9 ಲಕ್ಷ ಮೌಲ್ಯದ 50 ಮೊಬೈಲ್​ ಜಪ್ತಿ, ವಾರಸುದಾರರಿಗೆ ಹಸ್ತಾಂತರ: ಎಸ್​ಪಿ ಸೀಮಾ ಲಾಟ್ಕರ್
ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸೀಮಾಲಾಟ್ಕರ್​
Follow us on

ಮೈಸೂರು: ಜಿಲ್ಲೆಯಲ್ಲಿ ಕಳುವಾಗಿದ್ದ 9 ಲಕ್ಷ ಮೌಲ್ಯದ 50 ಮೊಬೈಲ್​ ಜಪ್ತಿ (seized) ಮಾಡಿದ್ದು, 5 ಲಕ್ಷ ರೂ. ಮೌಲ್ಯದ 30 ಮೊಬೈಲ್​ ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸೀಮಾಲಾಟ್ಕರ್​ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, CEIR ಪೋರ್ಟ್ ಮೂಲಕ ಮೊಬೈಲ್​ ಮಾಲೀಕರು ದೂರು ದಾಖಲಿಸಿದ್ದರು. ಕೇರಳ, ಮಹಾರಾಷ್ಟ್ರ, ತೆಲಂಗಾಣದಲ್ಲಿ ಮೊಬೈಲ್​ ಜಪ್ತಿ ಮಾಡಿದ್ದೇವೆ. ಮೇ 18ರಂದು ಡ್ರಾಪ್ ಕೇಳುವ ನೆಪದಲ್ಲಿ ಆಟೋ ಚಾಲಕನನ್ನು ಸುಲಿಗೆ ಮಾಡಿದ್ದವರ ಪೈಕಿ ಒಬ್ಬನ ಬಂಧನ ಮಾಡಲಾಗಿದೆ ಎಂದು ಹೇಳಿದರು.

ಚಾಕು ತೋರಿಸಿ ಆಟೋ, ಮೊಬೈಲ್, 2 ಸಾವಿರ ನಗದು ದರೋಡೆ ಮಾಡಿದ್ದು, ವರುಣ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕ ಪ್ರಕರಣ ದಾಖಲಿಸಿದ್ದ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಕಲಬುರಗಿಯಲ್ಲಿ ಜಾನವಾರು ಕಳ್ಳತನ ಗ್ಯಾಂಗ್: ಹೈಫೈ ಕಾರಲ್ಲಿ ಬರ್ತಾರೆ ಎತ್ತಾಕೊಂಡು ಹೋಗ್ತಾರೆ..!

ಬೈಕ್​ ಕಳವು ಮಾಡುತ್ತಿದ್ದ 7 ಜನ ಅಂತಾರಾಜ್ಯ ಕಳ್ಳರ ಬಂಧನ

ಬೆಂಗಳೂರು: ಬೈಕ್​ಗಳನ್ನು ಕದಿಯುತ್ತಿದ್ದ ಖತರ್ನಾಕ್ ಆರೋಪಿಗಳ ಗ್ಯಾಂಗ್ ಇದೀಗ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದೆ. ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರು ಮತ್ತು ತಮಿಳುನಾಡಿನಲ್ಲಿ ಬೈಕ್​ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಬೈಕ್​ ಕಳವು ಮಾಡುತ್ತಿದ್ದ 7 ಆರೋಪಿಗಳ ಸಹಿತ 1.20 ಕೋಟಿಗೂ ಹೆಚ್ಚು ಮೌಲ್ಯದ 72 ಬೈಕ್​ಗಳನ್ನು ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: Bangalore news: ಮೋಜು ಮಸ್ತಿಗಾಗಿ ಬೆಂಗಳೂರು, ತಮಿಳುನಾಡಿನಲ್ಲಿ ಬೈಕ್ ಕಳವು ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್

ಬೈಕ್​ಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳು, ನಂತರ ಆ ಬೈಕ್​ಗಳನ್ನು ತಮಿಳುನಾಡು ರಾಜ್ಯಕ್ಕೆ ಕಡಿಮೆ ಬೆಲೆಗೆ ಮಾರಿ ಮೋಜು ಮಸ್ತಿ ಮಾಡುತ್ತಿದ್ದರು. ಕಳವು ಮಾಡಿದ 2 ಲಕ್ಷ ಮೌಲ್ಯದ ಬೈಕ್​ಗಳನ್ನ ಕೇವಲ 25 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಹೊಸೂರು ಟೋಲ್​ನಲ್ಲಿ 100 ರೂಪಾಯಿ ಕೊಟ್ಟು ತಮಿಳುನಾಡಿಗೆ ಕಂಡೊಯ್ದು ಅಲ್ಲಿನ ರಿಜಿಸ್ಟ್ರೇಷನ್ ನಂಬರ್ ಹಾಕಿಸಿ ಮಾರಾಟ ಮಾಡುತ್ತಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:06 pm, Tue, 23 May 23