ಕಲಬುರಗಿಯಲ್ಲಿ ಜಾನವಾರು ಕಳ್ಳತನ ಗ್ಯಾಂಗ್: ಹೈಫೈ ಕಾರಲ್ಲಿ ಬರ್ತಾರೆ ಎತ್ತಾಕೊಂಡು ಹೋಗ್ತಾರೆ..!

ಕಲಬುರಗಿ ನಗರದಲ್ಲಿ ಇತ್ತೀಚೆಗೆ ಮನೆಗಳ್ಳತನ, ಚೈನ್ ಸ್ನ್ಯಾಚರ್ ಹಾವಳಿ ಹೆಚ್ಚಾಗಿದೆ. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕಳ್ಳರ ಕೈಚಳಕಕ್ಕೆ ಬ್ರೇಕ್​​​​ ಹಾಕಲು ಆಗುತ್ತಿಲ್ಲ. ಇದರ ಮಧ್ಯೆ ನಗರದಲ್ಲಿ ಮತ್ತೊಂದು ಗ್ಯಾಂಗ್​ ಆ್ಯಕ್ಟೀವ್​ ಆಗಿದೆ.

ಕಲಬುರಗಿಯಲ್ಲಿ ಜಾನವಾರು ಕಳ್ಳತನ ಗ್ಯಾಂಗ್: ಹೈಫೈ ಕಾರಲ್ಲಿ ಬರ್ತಾರೆ ಎತ್ತಾಕೊಂಡು ಹೋಗ್ತಾರೆ..!
ಸಾಂದರ್ಭಿಕ ಚಿತ್ರ
Follow us
ರಮೇಶ್ ಬಿ. ಜವಳಗೇರಾ
|

Updated on: May 22, 2023 | 7:36 AM

ಕಲಬುರಗಿ: ಚಿನ್ನ ಹಣವನ್ನು ಕಳ್ಳತನ ಮಾಡುವ ಗ್ಯಾಂಗ್​​​​ಗಳಿವೆ. ಆದ್ರೆ, ಕಲಬುರಗಿ(Kalaburagi) ನಗರದಲ್ಲಿ ಜಾನುವಾರು ಕಳ್ಳತನಕ್ಕಾಗಿಯೇ ಸಪರೇಟ್​​​​​ ಗ್ಯಾಂಗ್(cattle Thieves Gang )​​​​​ ಇದೆ. ರಾತ್ರಿ ವೇಳೆ ರಸ್ತೆಯಲ್ಲಿರುವ ಜಾನುವಾರುಗಳನ್ನೇ ಎತ್ತಾಕೊಂಡು ಹೋಗಿ​ಸಾವಿರಾರು ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಹೌದು.. ಅದು ನಡುರಾತ್ರಿ 2 ಗಂಟೆ ಸಮಯ. ರಸ್ತೆಯಲ್ಲಿ ಕರುವಿನೊಂದಿಗೆ ಹಸು ಇತ್ತು. ಕಾರ್​​ನಲ್ಲಿ ಬರುವ ದುಷ್ಕರ್ಮಿಗಳು ದಿಢೀರನೇ ಕರುವನ್ನು ಎತ್ತಿಕೊಂಡಿದ್ದಾರೆ. ಆಗ ಹಸು ಪ್ರತಿರೋಧ ತೋರುತ್ತೆ. ಆದ್ರೆ ಕರುಣೆ ಇಲ್ಲದ ಕಟುಕರು ಕರುವನ್ನು ಹಾಕೊಂಡು ಕೆಲವೇ ಕ್ಷಣಗಳಲ್ಲಿ ಎಸ್ಕೇಪ್ ಆಗಿದ್ದಾರೆ. ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಇನ್ನು ಇಂತಹದೆಂದು ಘಟನೆ ನಡೆದಿದ್ದು, ಕಲಬುರಗಿ ನಗರದ ಜೇವರ್ಗಿ ಕಾಲೋನಿಯಲ್ಲಿ.

ಕಲಬುರಗಿ ನಗರದಲ್ಲಿ ಇತ್ತೀಚೆಗೆ ಮನೆಗಳ್ಳತನ, ಚೈನ್ ಸ್ನ್ಯಾಚರ್ ಹಾವಳಿ ಹೆಚ್ಚಾಗಿದೆ. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕಳ್ಳರ ಕೈಚಳಕಕ್ಕೆ ಬ್ರೇಕ್​​​​ ಹಾಕಲು ಆಗುತ್ತಿಲ್ಲ. ಇದರ ಮಧ್ಯೆ ನಗರದಲ್ಲಿ ಮತ್ತೊಂದು ಗ್ಯಾಂಗ್​ ಆ್ಯಕ್ಟೀವ್​ ಆಗಿದೆ. ಮೂಕ ಪ್ರಾಣಿಗಳಿಗೂ ಇದೀಗ ಕಳ್ಳರ ಕಾಟ ಶುರುವಾಗಿದೆ. ರಾತ್ರಿ ವೇಳೆ ಬಿಡಾಡಿ ಜಾನುವಾರು ಕದಿಯೋ ಖದೀಮರು ಗೂಡ್ಸ್ ವಾಹನದಲ್ಲಿ ಬಂದ್ರೆ ಪೊಲೀಸರಿಗೆ ಸಿಕ್ಕಿ  ಬೀಳುತ್ತೇವೆ ಎಂದು ಹೊಸ ಟೆಕ್ನಿಕ್​​ ಮಾಡಿದ್ದಾರೆ. ರಾತ್ರಿವೇಳೆ ಹೈಫೈ ಕಾರಿನಲ್ಲಿ ಬರುವ ಖದೀಮರು ಬೀಡಾಡಿ ಜಾನುವಾರುಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ.

ಕಾರ್​​ಗಳಲ್ಲಿ ಬರೋ ದುಷ್ಕರ್ಮಿಗಳು ಜಾನುವಾರುಗಳನ್ನು ಕದ್ದು, ಮನೆಯಲ್ಲಿ ಸಾಕಲು ತಗೆದುಕೊಂಡ ಹೋಗುತ್ತಿಲ್ಲ. ಕಸಾಯಿಖಾನೆಗೆ ಕೊಟ್ಟು ಸಾವಿರಾರು ರೂಪಾಯಿಗೆ ಮಾರಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಕಲಬುರಗಿ ನಗರದಲ್ಲಿ ಜಾನುವಾರುಗಳನ್ನು ಕದಿಯುವ ಕಳ್ಳರು, ಸ್ಥಳಿಯವಾಗಿ ಇಲ್ಲವೇ‌ ತೆಲಂಗಾಣ ರಾಜ್ಯದಲ್ಲಿ ಇರೋ ಕಸಾಯಿಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರಂತೆ. ಮನೆಯಲ್ಲಿರೋ ಜಾನುವಾರುಗಳಾದ್ರೆ ಪೊಲೀಸರಿಗೆ ದೂರು ಕೊಡ್ತಾರೆ.. ಇಲ್ಲವೇ ಹುಡುಕ್ತಾರೆ. ಆದ್ರಿಂದ ಬೀಡಾಡಿ ಜಾನುವಾರುಗಳನ್ನು ಕದ್ದರೆ ಯಾರು ಕೇರ್ ಮಾಡಲ್ಲ ಅಂತ ತಿಳಿದಿರಬೇಕು.

ಜೇವರ್ಗಿ ಕಾಲೋನಿಯಲ್ಲಿ ನಡೆದ ಕರುವಿನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದ್ರೆ, ಪೊಲೀಸರು ಹಣದಾಸೆಗೆ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಅನ್ನೋ ಆರೋಪ ಕೂಡಾ ಕೇಳಿ ಬರ್ತಿವೆ. ಕಾನೂನು ರಕ್ಷಕರು ಮೂಕ ಪ್ರಾಣಿಗಳನ್ನು ಕದ್ದು ಮಾರಾಟ ಮಾಡ್ತಿರೋ ದುಷ್ಟರನ್ನು ಪತ್ತೆ ಮಾಡಿ, ಕಠಿಣ ಶಿಕ್ಷೆಯಾಗುವಂತೆ ಮಾಡಬೇಕಿದೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್