Mysore News: ರೌಡಿಶೀಟರ್‌ ಚಂದ್ರು ಹತ್ಯೆ ಪ್ರಕರಣ; ಮತ್ತೆ ಐವರನ್ನು ಬಂಧಿಸಿದ ಪೊಲೀಸರು

ರೌಡಿಶೀಟರ್​ ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 5 ಜನರನ್ನ ಬಂಧಿಸಿದ್ದಾರೆ. ವರುಣ್, ದರ್ಶನ್, ಅನಿಲ್, ಸಚಿನ್, ವೆಂಕಟೇಶ್ ಬಂಧಿತ ಆರೋಪಿಗಳು.

Mysore News: ರೌಡಿಶೀಟರ್‌ ಚಂದ್ರು ಹತ್ಯೆ ಪ್ರಕರಣ; ಮತ್ತೆ ಐವರನ್ನು ಬಂಧಿಸಿದ ಪೊಲೀಸರು
ಪ್ರಾತಿನಿಧಿಕ ಚಿತ್ರ
Follow us
ಕಿರಣ್ ಹನುಮಂತ್​ ಮಾದಾರ್
|

Updated on:May 24, 2023 | 8:32 AM

ಮೈಸೂರು: ಆತ ರೌಡಿ ಶೀಟರ್ ಡಬಲ್‌ ಮರ್ಡರ್​​ ಕೇಸಿನಲ್ಲಿ ಜೈಲು ಸೇರಿದ್ದ. ಆದರೆ ಆರೋಪ ಸಾಭೀತಾಗದ ಕಾರಣ ಕೆಲ ತಿಂಗಳ ಹಿಂದೆಯಷ್ಟೇ ಜೈಲಿನಿಂದ ಹೊರಬಂದಿದ್ದ. ಹಳೆಯದೆಲ್ಲವನ್ನೂ ಮರೆತು ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಹೊಸ ಜೀವನ ಆರಂಭಿಸಿದ್ದ. ಆದ್ರೆ, ಬದಲಾಗಿದ್ದು ಈತ ಮಾತ್ರ. ಈತನ ವಿರೋಧಿಗಳಲ್ಲ. ಎಲ್ಲ ಬಿಟ್ಟವನನ್ನು, ಬಿಡದವರು ಮಾತ್ರ ವಿರೋಧಿಗಳು. ಕೊನೆಗೂ ಕೊಚ್ಚಿ ಕೊಲೆ‌ ಮಾಡಿದ್ದರು. ಹೌದು ಇದೀಗ ರೌಡಿ ಶೀಟರ್(Rowdy sheeter)​ ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 5 ಜನರನ್ನ ಬಂಧಿಸಿದ್ದಾರೆ. ವರುಣ್, ದರ್ಶನ್, ಅನಿಲ್, ಸಚಿನ್, ವೆಂಕಟೇಶ್ ಬಂಧಿತ ಆರೋಪಿಗಳು. ಇನ್ನು ಗುರುವಾರ 4 ದ್ವಿಚಕ್ರ ವಾಹನದಲ್ಲಿ ಬಂದು 11 ಜನರು ಈ ಕೃತ್ಯ ಎಸಗಿದ್ದರು. ಅದರಲ್ಲಿ 7 ಜನರನ್ನು ಪೊಲೀಸರು ಬಂಧಿಸಿದ್ದರು. ಈಗ ನಾಲ್ವರು ಮತ್ತು ತಲೆ ಮರೆಸಿಕೊಳ್ಳಲು ಸಹಕರಿಸಿದ ಚಾಲಕ ಸೇರಿ ಐವರನ್ನ ಬಂಧಿಸಿದ್ದಾರೆ.

2016 ರಲ್ಲಿ ನಡೆದ ಕೊಲೆಗೆ ಪ್ರತಿಕಾರ ಚಂದು ಹತ್ಯೆ

ಚಂದು ಕೊಲೆ 2016ರಲ್ಲಿ ನಡೆದ ಪಡುವಾರಹಳ್ಳಿ ದೇವು ಮರ್ಡರ್ ಗೆ ಪ್ರತಿಕಾರವಾಗಿ ನಡೆದಿದೆ ಎನ್ನಲಾಗುತ್ತಿದೆ. ಚಂದು ಕೆಲ ತಿಂಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದ. ಹುಣಸೂರಿನಲ್ಲಿ ನಡೆದಿದ್ದ ಡಬಲ್ ಮರ್ಡರ್ ಕೇಸ್ ನಲ್ಲಿ ಖುಲಾಸೆಯಾಗಿ ಬಂದಿದ್ದ. ಚಂದ ಹುಣಸೂರು ಜೋಡಿ ಕೊಲೆ ಮಾತ್ರವಲ್ಲ ಪಡುವಾರಹಳ್ಳಿ ದೇವು ಹತ್ಯೆ ಪ್ರಕರಣದಲ್ಲೂ ದೋಷಮುಕ್ತನಾಗಿ ಜೈಲಿನಿಂದ ಹೊರಬಂದಿದ್ದ. ಜೈಲಿನಿಂದ ಬಂದವನು ಯಾವುದಕ್ಕೂ  ತಲೆಹಾಕದೆ ತಾನಾಯ್ತು ತನ್ನ ಮನೆಯಾಯ್ತು ಅಂತಾ ಅರಾಮಾಗಿದ್ದ. ಚಂದ್ರು ಒಂಟಿಕೊಪ್ಪಲಿನ ತನ್ನ ಮನೆ ಬಳಿ ಟೈಲರ್ ಅಂಗಡಿ ಮುಂಭಾಗ ಸಂಜೆ 5 ಗಂಟೆ ವೇಳೆಗೆ ಮಾತನಾಡುತ್ತ ಕುಳಿತಿದ್ದ. ಈ ವೇಳೆ ದ್ವಿಚಕ್ರ ವಾಹನಗಳಲ್ಲಿ ಬಂದ ಹಂತಕರ ತಂಡ ಲಾಂಗು ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿ ಸ್ಥಳದಿಂದ ಎಸ್ಕೇಪ್ ಆಗಿತ್ತು. ಕೂಡಲೇ ಸಂಬಂಧಿಕರು ಹಲ್ಲೆಗೊಳಗಾದ ಚಂದ್ರುವನ್ನು ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದರು. ಆದ್ರೆ, ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಚಂದ್ರು ಸಾವನ್ನಪ್ಪಿದ್ದ. ಇನ್ನೂ ವಿಚಾರ ತಿಳಿದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿ ಮುತ್ತುರಾಜ್ ಸಿಬ್ಬಂದಿ ಜೊತೆ ಸ್ಥಳ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ:ಕಲಬುರಗಿಯಲ್ಲಿ ನೇಣು ಬಿಗಿದುಕೊಂಡು ಹೆಡ್ ಕಾನ್ಸಟೇಬಲ್ ಆತ್ಮಹತ್ಯೆ

ಇನ್ನು 2008 ರ ಮೇ 15 ರಂದು ಹುಣಸೂರಿನ ಎಪಿಎಂಸಿ ಬಳಿಯ ತೋಟದ ಮನೆಯಲ್ಲಿ ಇಬ್ಬರ ಹತ್ಯೆಯಾಗಿತ್ತು. ಹಾಗೆಯೇ 2016 ರಲ್ಲಿ ಮೇ 5 ರಂದು ಪಡುವಾರಹಳ್ಳಿ ದೇವು ಹತ್ಯೆಯಾಗಿತ್ತು. ಈ ಎರಡೂ ಪ್ರಕರಣದ ಆರೋಪಿಯಾಗಿದ್ದ ಚಂದ್ರು ಪಾಲಿಕೆ ಮಾಜಿ ಸದಸ್ಯ ಅವ್ವ ಮಾದೇಶ್ ಜೊತೆಗೆ ಜೈಲು ಸೇರಿ ಇತ್ತೀಚೆಗೆ ದೋಷಮುಕ್ತನಾಗಿ ಹೊರಬಂದಿದ್ದ. ಬಂದ ಬಳಿಕ ಫಾಸ್ಟ್ ಫುಡ್ ನಡೆಸುತ್ತಿದ್ದ ತನ್ನ ಹೆಂಡತಿಗೆ ಸಹಾಯ ಮಾಡ್ತ ಸಣ್ಣ ಪುಟ್ಟ ಫೈನಾನ್ಸ್ ಮಾಡ್ಕೊಂಡು ಅರಾಮಾಗಿಯೇ ಇದ್ದ. ಯಾವುದೇ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗದೇ ತಾನಾಯ್ತು ತನ್ನ ಕುಟುಂಬವಾಯ್ತು ಅಂತಾ ಜೀವನ ಸಾಗಿಸುತ್ತಿದ್ದ ಆದ್ರೆ ಐನಾತಿಗಳು ಹಾಕಿದ ಸ್ಕೇಚ್ ಗೆ ಜೀವ ಬಿಟ್ಟಿದ್ದ.

ಒಟ್ಟಿನಲ್ಲಿ, ಹುಣಸೂರು ಡಬ್ಬಲ್ ಮರ್ಡರ್, ಪಡುವಾರಹಳ್ಳಿ ದೇವು ಹತ್ಯೆ ಮೇ ತಿಂಗಳಲ್ಲೇ ಆಗಿತ್ತು. ಇದೀಗ ಚಂದ್ರು ಮರ್ಡರ್ ಸಹಾ ಮೇ ತಿಂಗಳಿನಲ್ಲಿಯೇ ನಡೆದಿದೆ. ಇದೆಲ್ಲವನ್ನೂ ಗಮನಿಸಿದ್ರೆ ಪಡುವಾರಹಳ್ಳಿ ದೇವು ಮರ್ಡರ್ ಗೆ ಪ್ರತಿಕಾರವಾಗಿ ಚಂದ್ರು ಹತ್ಯೆ ನಡೆದಿದ್ಯಾ ಅನ್ನೋ ಅನುಮಾನ ವ್ಯಕ್ತವಾಗಿದೆ. ಇದೀಗ ವಿವಿ ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಾತಕಿಗಳನ್ನ ಪತ್ತೆ ಹಚ್ಚಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:31 am, Wed, 24 May 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್