AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮಗನಿಂದಲೇ ತಂದೆ ಹತ್ಯೆಗೆ ಸುಫಾರಿ ಪ್ರಕರಣ; ಚಾರ್ಜ್ ಶೀಟ್​ನಲ್ಲಿ ಬಯಲಾಯ್ತು ಕಾರಣ

ಪೆಬ್ರವರಿ 13 ರಂದು ತಂದೆ ನಾರಾಯಣ ಸ್ವಾಮಿಯನ್ನ ಸ್ವಂತ ಮಗ ಮಣಿಕಂಠ ಎಂಬಾತ ಹತ್ಯೆ ಮಾಡಿಸಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮಗ ಮಣಿಕಂಠನ ಮೇಲೆ ಅನುಮಾನದಿಂದ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿಸಿರುವುದು ಬಾಯಿ ಬಿಟ್ಟಿದ್ದ, ಬಳಿಕ ಕೊಲೆಗೆ ಕಾರಣ ಕೇಳಿ ಪೊಲೀಸರೇ ದಂಗಾಗಿದ್ದರು.

ಬೆಂಗಳೂರು: ಮಗನಿಂದಲೇ ತಂದೆ ಹತ್ಯೆಗೆ ಸುಫಾರಿ ಪ್ರಕರಣ; ಚಾರ್ಜ್ ಶೀಟ್​ನಲ್ಲಿ ಬಯಲಾಯ್ತು ಕಾರಣ
ಮಗ ಮಣಿಕಂಠ ಸುಫಾರಿ ನೀಡಿದ್ದ ಚಿಟ್ಟಿ ಬಾಬು
ಕಿರಣ್ ಹನುಮಂತ್​ ಮಾದಾರ್
|

Updated on: May 21, 2023 | 8:22 AM

Share

ಬೆಂಗಳೂರು: ಬದಲಾಗುತ್ತಿರುವ ಜೀವನಶೈಲಿಯಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಹೊತ್ತು ಹೆತ್ತು ಸಾಕಿದ ತಂದೆ ತಾಯಿಯನ್ನೇ ಆಸ್ತಿಗೋಸ್ಕರ ಕೊಲೆ ಮಾಡುವ ಮಟ್ಟಿಗೆ ಇಂದಿನ ಸಮಾಜ ಬಂದುನಿಂತಿದ್ದು ಶೋಕನೀಯ. ಹೌದು ಪೆಬ್ರವರಿ 13 ರಂದು ತಂದೆ ನಾರಾಯಣ ಸ್ವಾಮಿಯನ್ನ ಸ್ವಂತ ಮಗ ಮಣಿಕಂಠ ಎಂಬಾತ ಹತ್ಯೆ ಮಾಡಿಸಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸ(Police)ರು ಮಗ ಮಣಿಕಂಠನ ಮೇಲೆ ಅನುಮಾನದಿಂದ ವಿಚಾರಣೆ ನಡೆಸಿದಾಗ ತಾನೇ ಕೊಲೆ (Murder) ಮಾಡಿಸಿರುವುದು ಬಾಯಿ ಬಿಟ್ಟಿದ್ದ, ಇದಾದ ಬಳಿಕ ಕೊಲೆ ಮಾಡಲು ಕಾರಣವೇನು ಕೇಳಿದಾಗ, ಒಮ್ಮೆ ಪೊಲೀಸರೇ ದಂಗಾಗಿ ಹೋಗಿದ್ದರು. ಇಂತಹ ಮಕ್ಕಳು ಕೂಡ ಇರುತ್ತಾರಾ ಎಂಬ ಪ್ರಶ್ನೆ ಮೂಡಿತ್ತು.

ಆರೋಪಿ ಮಗ ಬಾಯ್ಬಿಟ್ಟ ಸತ್ಯವೇನು?

ತಂದೆ ಕೊಲೆ ಪ್ರಕರಣದಲ್ಲಿ ಇತನನ್ನ ವಿಚಾರಣೆ ನಡೆಸಿದಾಗ ಚಾರ್ಜ್ ಶೀಟ್​ನಲ್ಲಿ ತಂದೆ ಹತ್ಯೆಗೆ ಕಾರಣ ಬಯಲಾಗಿದೆ. ತನಿಖೆ ವೇಳೆ ಪೊಲೀಸರು ಆರೋಪಿ ಮಣಿಕಂಠನಿಗೆ ‘ನಿನ್ನ ತಂದೆ ಸತ್ತ ನಂತರ ಆಸ್ತಿ ನಿನಗೊಬ್ಬನಿಗೆ ಸೇರುತಿತ್ತು ಅದ್ರೂ ಯಾಕೆ ಕೊಂದೆ ಎಂದು ಕೇಳಿದ್ದಾರೆ. ಈ ವೇಳೆ ಪಾಪಿ ಮಗ ‘ನನ್ನ ತಂದೆ ರಾಗಿ ಮುದ್ದೆ ತಿಂದು ಇನ್ನೂ ಗಟ್ಟಿ ಮುಟ್ಟಾಗಿ ಇದ್ದ. ಇನ್ನೂ ಇಪ್ಪತ್ತು ವರ್ಷ ಆತ ಸಾಯುತ್ತಿರಲಿಲ್ಲ, ಖರ್ಚಿಗೆ ಹಣವೂ ಕೊಡ್ತಿರಲಿಲ್ಲ. 20 ವರ್ಷದ ನಂತರ ನನ್ನ ಜೀವನದಲ್ಲಿ ಎಂಜಾಯ್ ಮಾಡೋಕೆ ಏನಿರುತ್ತೆ. ಹಾಗಾಗಿ ಕೊಲೆ ಮಾಡಿದ್ರೆ, ನಾನೇ ಆರಾಮವಾಗಿ ಲೈಫ್ ಎಂಜಾಯ್ ಮಾಡಬಹುದು ಎಂದಿದ್ದಾನೆ. ಇತನ ಹೇಳಿಕೆ ಕೇಳಿ ಪೊಲೀಸರು ಶಾಕ್​ ಆಗಿದ್ದಾರೆ. ಇಂತಹ ಮಗ ಯಾರಿಗೂ ಬೇಡವೆಂದು ಶಫಿಸುತ್ತಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ನಟೋರಿಯಸ್ ರೌಡಿಶೀಟರ್ ಅಲ್ಯೂಮಿನಿಯಂ ಬಾಬು ಹತ್ಯೆ; ಕಿಡ್ನಾಪ್ ಮಾಡಿ ಕೊಲೆ ಮಾಡಿರುವ ಶಂಕೆ

ತಂದೆ ಹತ್ಯೆಗೆ ಸುಫಾರಿ ಕೊಡುವಾಗ 2 ಹಂತದ ಫ್ಲಾನ್ ಮಾಡಿದ್ದ ಮಣಿಕಂಠ

ಹೌದು ಮೊದಲನೇ ಹೆಂಡತಿ ಕೊಲೆ ಮಾಡಿ ಜೈಲು ಸೇರಿದ್ದ ಮಣಿಕಂಠನಿಗೆ ಜೈಲಿನಲ್ಲಿ ನಡವತ್ತಿ ಶಿವು ಗ್ಯಾಂಗ್ ಪರಿಚಯವಾಗಿತ್ತು. ನಡವತ್ತಿ ಶಿವು ಗ್ಯಾಂಗ್ ನಾವು ಕೊಲೆ ಮಾಡೊಲ್ಲ ಆದ್ರೆ, ಸರೆಂಡರ್ ಅಗ್ತೀವಿ. ನಮಗೆ ಜೈಲಿನಲ್ಲಿದ್ದು ಅಭ್ಯಾಸವಿದೆ ನೀನು ಬೇರೆಯವರ ಬಳಿ ಕೊಲೆ ಮಾಡಿಸು ಅಂದಿದ್ದ. ಅದರಂತೆ ಮಣಿಕಂಠ ಚಿಟ್ಟಿ ಬಾಬುಗೆ ಕೊಲೆಯ ಸುಫಾರಿ ಕೊಟ್ಟಿದ್ದ. ಒಟ್ಟು ಒಂದು ಫ್ಲಾಟ್ ಸೇರಿ ಸುಮಾರ್ ಒಂದು ಕೋಟಿಗೆ ಸುಫಾರಿ ನೀಡಿದ್ದ ಪಾಪಿ ಮಗ. ಇನ್ನು ಚಿಟ್ಟಿ ಬಾಬು ಕೊಲೆ ಮಾಡ್ತಿದ್ದಂತೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ ನಡುವತ್ತಿ ಶಿವು ಗ್ಯಾಂಗ್. ಆದ್ರೆ, ಚಿಟ್ಟಿಬಾಬು ಜೊತೆ ಬೈಕ್​ನಲ್ಲಿ ಬಂದಿದ್ದವನಿಗೆ ಈ ಸರೆಂಡರ್ ಫ್ಲಾನ್ ಗೊತ್ತಿರಲಿಲ್ಲ. ತನಿಖೆ ವೇಳೆ ಈತ ಕೊಟ್ಟ ಮಾಹಿತಿ ಆಧಾರದ ಮೇಲೆ ಅಸಲಿ ಸತ್ಯ ಹೊರಬಂದಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ