ಮೈಸೂರು ನ.03: ಔಷಧಿಗಳನ್ನು ಖಾಸಗಿ ಮೆಡಿಕಲ್ ಸ್ಟೋರ್ನಿಂದಲೇ (Medical Store) ತರುವಂತೆ ಚೀಟಿ ಬರೆದು ಕೊಡುವ ಮೂಲಕ ಸರ್ಕಾರಿ ವೈದ್ಯ (Government Doctor) ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಇಬ್ಬರು ರೋಗಿಗಳು ಮೂಲವ್ಯಾದಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಪಿರಿಯಾಪಟ್ಟಣದ (Periyapatna) ಸಾರ್ವಜನಿಕ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ಮಾಡುವ ಸಲುವಾಗಿ ವೈದ್ಯರು ಒಳ ರೋಗಿಗಳಾಗಿ ದಾಖಲು ಮಾಡಿಕೊಂಡಿದ್ದರು. ಚಿಕಿತ್ಸೆಗೆ ಆಸ್ಪತ್ರೆಯ ಎದುರಿನ ಖಾಸಗಿ, ಶಿವು ಮೆಡಿಕಲ್ಸ್ ಸ್ಟೋರ್ನಿಂದಲೇ ಇಂಜೆಕ್ಷನ್ ತರುವಂತೆ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಫೃಥ್ವಿ ಚೀಟಿ ಬರೆದುಕೊಟ್ಟಿದ್ದರು.
ವೈದ್ಯರ ಸೂಚನೆ ಮೇರೆಗೆ ರೋಗಿಯ ಸಂಬಂಧಿಕರು ಇಂಜೆಕ್ಷನ್ ಖರೀದಿಸಲು ಮೆಡಿಕಲ್ಸ್ಟೋರ್ಗೆ ಹೋಗಿದ್ದರು. ಮೆಡಿಕಲ್ ಸ್ಟೋರ್ನಲ್ಲಿ ಸಿಬ್ಬಂದಿ, ಒಬ್ಬರಿಗೆ 5,500 ರೂ. ಮತ್ತೊಬ್ಬರಿಗೆ 5 ಸಾವಿರ ರೂ. ಹಣ ಪಡೆದನು. ಅನುಮಾನಗೊಂಡ ರೋಗಿಯ ಸಂಬಂಧಿಕರು ಒಂದೇ ಇಂಜೆಕ್ಷನ್ಗೇ ಹೀಗೇಕೆ ಬೇರೆ ಬೇರೆ ದರ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: HIV ಸೋಂಕಿತ ಎಂದು ಹೇಳದೇ ಇದ್ದುದಕ್ಕೆ ರೋಗಿಗೆ ಥಳಿಸಿದ ವೈದ್ಯ ಅಮಾನತು
ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಈ ಔಷಧಿಯನ್ನು ಆಸ್ಪತ್ರೆಯಲ್ಲಿಯೇ ಕೊಡಬೇಕು ಎಂಬ ನಿಯಮವಿದೆ ಆದರೂ ಹೊರಗಡೆಯಿಂದ ತರಸಲಾಗುತ್ತಿದೆ. ನೀವು ಅಕ್ರಮವಾಗಿ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದೀರಿ, ಇದಕ್ಕೆ ರಸೀದಿ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ತಬ್ಬಿಬ್ಬುಗೊಂಡ ಮೆಡಿಕಲ್ ಸ್ಟೋರ್ ಸಿಬ್ಬಂದಿ ವೈದ್ಯರು ಹೇಳಿದ್ದರಿಂದ ಈ ಇಂಜೆಕ್ಷನ್ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.
ವೈದ್ಯರ ಶಿಫಾರಸು ಚೀಟಿ ಇಲ್ಲದೆ ಮತ್ತು ಔಷಧಿ ನೀಡಿರುವುದಕ್ಕೆ ರಸೀದಿ ನೀಡದೆ ಹಣ ಪಡೆಯುತ್ತಿರುವುದು ಅಕ್ರಮ ಎಂದು ರೋಗಿಯ ಕಡೆಯವರು ತರಾಟೆಗೆ ತೆಗೆದುಕೊಂಡಿದ್ದಾರೆ. ತಕ್ಷಣ ಮೆಡಿಕಲ್ ಸ್ಟೋರ್ನ ಸಿಬ್ಬಂದಿಗಳು ಇಬ್ಬರಿಗೂ ಹಣ ವಾಪಸ್ ನೀಡಿದ್ದಾರೆ. ಇದು ನಮ್ಮ ತಪ್ಪಲ್ಲವೆಂದು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ