ಮೈಸೂರಿನಲ್ಲಿ ಅಪಘಾತ, ಇಬ್ಬರು ಸಾವು; KSRTC ಬಸ್ನಲ್ಲಿ ಪ್ರಯಾಣಿಕನಿಗೆ ಹೃದಯಾಘಾತ
ಬೈಕ್ಗೆ ಬೊಲೆರೋ ವಾಹನ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ಪೊಲೀಸ್ ಬಡಾವಣೆ ರಿಂಗ್ ರಸ್ತೆ ಸಮೀಪ ನಡೆದಿದೆ. ಇನ್ನೊಂದೆಡೆ, ನಂಜನಗೂಡು ತಾಲೂಕಿನ ವೀರದೇವನಹಳ್ಳಿಯಲ್ಲಿ KSRTC ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.

ಮೈಸೂರು, ನ.3: ಬೈಕ್ಗೆ ಬೊಲೆರೋ ವಾಹನ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು (Mysuru) ಪೊಲೀಸ್ ಬಡಾವಣೆ ರಿಂಗ್ ರಸ್ತೆ ಸಮೀಪ ನಡೆದಿದೆ. ಇನ್ನೊಂದೆಡೆ, ನಂಜನಗೂಡು ತಾಲೂಕಿನ ವೀರದೇವನಹಳ್ಳಿಯಲ್ಲಿ KSRTC ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಬೊಲೆರೋ ವಾಹನ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ಬಳಿಕ ಬೊಲೆರೋ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೈಸೂರು: ಖಾಸಗಿ ಮೆಡಿಕಲ್ ಸ್ಟೋರ್ನಿಂದ ಔಷಧಿ ತರುವಂತೆ ಚೀಟಿ ಬರೆದುಕೊಟ್ಟು ಸಿಕ್ಕಿ ಬಿದ್ದ ಸರ್ಕಾರಿ ವೈದ್ಯ
KSRTC ಬಸ್ನಲ್ಲಿ ಹೃದಯಾಘಾತ
ನಂಜನಗೂಡು ತಾಲೂಕಿನ ವೀರದೇವನಹಳ್ಳಿಯಲ್ಲಿ KSRTC ಬಸ್ನಲ್ಲಿ ಹೃದಯಾಘಾತದಿಂದ ಪ್ರಯಾಣಿಕರೊಬ್ಬರು ಸಾವನ್ನಪ್ಪಿದ್ದಾರೆ. ಚುಂಚನಹಳ್ಳಿ ನಿವಾಸಿ ಸುರೇಶ್ (50) ಮೃತ ವ್ಯಕ್ತಿ. ನಂಜನಗೂಡಿನಿಂದ ಚುಂಚನಹಳ್ಳಿಗೆ ತೆರಳುತ್ತಿದ್ದ ವೇಳೆ ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೃದಯಾಘಾತವಾಗಿದೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ