AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಖಾಸಗಿ ಮೆಡಿಕಲ್ ಸ್ಟೋರ್​​ನಿಂದ ಔಷಧಿ ತರುವಂತೆ ಚೀಟಿ ಬರೆದುಕೊಟ್ಟು ಸಿಕ್ಕಿ‌ ಬಿದ್ದ ಸರ್ಕಾರಿ ವೈದ್ಯ

ಚಿಕಿತ್ಸೆಗೆ ಆಸ್ಪತ್ರೆಯ ಎದುರಿನ ಖಾಸಗಿ, ಶಿವು ಮೆಡಿಕಲ್ಸ್​​ ಸ್ಟೋರ್​​ನಿಂದಲೇ ಇಂಜೆಕ್ಷನ್ ತರುವಂತೆ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಫೃಥ್ವಿ ಚೀಟಿ ಬರೆದುಕೊಟ್ಟಿದ್ದರು. ವೈದ್ಯರ ಸೂಚನೆ ಮೇರೆಗೆ ರೋಗಿಯ ಸಂಬಂಧಿಕರು ಇಂಜೆಕ್ಷನ್ ಖರೀದಿಸಲು ಮೆಡಿಕಲ್​ಸ್ಟೋರ್​ಗೆ ಹೋಗಿದ್ದರು. ಮುಂದೇನಾಯ್ತು ಈ ಸ್ಟೋರಿ ಓದಿ

ಮೈಸೂರು: ಖಾಸಗಿ ಮೆಡಿಕಲ್ ಸ್ಟೋರ್​​ನಿಂದ ಔಷಧಿ ತರುವಂತೆ ಚೀಟಿ ಬರೆದುಕೊಟ್ಟು ಸಿಕ್ಕಿ‌ ಬಿದ್ದ ಸರ್ಕಾರಿ ವೈದ್ಯ
ಖಾಸಗಿ ಮೆಡಿಕಲ್​ ಸ್ಟೋರ್​ ಸಿಬ್ಬಂದಿ
ದಿಲೀಪ್​, ಚೌಡಹಳ್ಳಿ
| Edited By: |

Updated on: Nov 03, 2023 | 8:28 AM

Share

ಮೈಸೂರು ನ.03: ಔಷಧಿಗಳನ್ನು ಖಾಸಗಿ ಮೆಡಿಕಲ್​​​ ಸ್ಟೋರ್​ನಿಂದಲೇ (Medical Store) ತರುವಂತೆ ಚೀಟಿ ಬರೆದು ಕೊಡುವ ಮೂಲಕ ಸರ್ಕಾರಿ ವೈದ್ಯ (Government Doctor) ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಇಬ್ಬರು ರೋಗಿಗಳು ಮೂಲವ್ಯಾದಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಪಿರಿಯಾಪಟ್ಟಣದ (Periyapatna) ಸಾರ್ವಜನಿಕ ಆಸ್ಪತ್ರೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ಮಾಡುವ ಸಲುವಾಗಿ ವೈದ್ಯರು ಒಳ ರೋಗಿಗಳಾಗಿ ದಾಖಲು ಮಾಡಿಕೊಂಡಿದ್ದರು. ಚಿಕಿತ್ಸೆಗೆ ಆಸ್ಪತ್ರೆಯ ಎದುರಿನ ಖಾಸಗಿ, ಶಿವು ಮೆಡಿಕಲ್ಸ್​​ ಸ್ಟೋರ್​​ನಿಂದಲೇ ಇಂಜೆಕ್ಷನ್ ತರುವಂತೆ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಫೃಥ್ವಿ ಚೀಟಿ ಬರೆದುಕೊಟ್ಟಿದ್ದರು.

ವೈದ್ಯರ ಸೂಚನೆ ಮೇರೆಗೆ ರೋಗಿಯ ಸಂಬಂಧಿಕರು ಇಂಜೆಕ್ಷನ್ ಖರೀದಿಸಲು ಮೆಡಿಕಲ್​ಸ್ಟೋರ್​ಗೆ ಹೋಗಿದ್ದರು. ಮೆಡಿಕಲ್ ಸ್ಟೋರ್​ನಲ್ಲಿ ಸಿಬ್ಬಂದಿ, ಒಬ್ಬರಿಗೆ 5,500 ರೂ. ಮತ್ತೊಬ್ಬರಿಗೆ 5 ಸಾವಿರ ರೂ. ಹಣ ಪಡೆದನು. ಅನುಮಾನಗೊಂಡ ರೋಗಿಯ ಸಂಬಂಧಿಕರು ಒಂದೇ ಇಂಜೆಕ್ಷನ್​ಗೇ ಹೀಗೇಕೆ ಬೇರೆ ಬೇರೆ ದರ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: HIV ಸೋಂಕಿತ ಎಂದು ಹೇಳದೇ ಇದ್ದುದಕ್ಕೆ ರೋಗಿಗೆ ಥಳಿಸಿದ ವೈದ್ಯ ಅಮಾನತು

ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಈ ಔಷಧಿಯನ್ನು ಆಸ್ಪತ್ರೆಯಲ್ಲಿಯೇ ಕೊಡಬೇಕು ಎಂಬ ನಿಯಮವಿದೆ ಆದರೂ ಹೊರಗಡೆಯಿಂದ ತರಸಲಾಗುತ್ತಿದೆ. ನೀವು ಅಕ್ರಮವಾಗಿ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದೀರಿ, ಇದಕ್ಕೆ ರಸೀದಿ ನೀಡಿ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ತಬ್ಬಿಬ್ಬುಗೊಂಡ ಮೆಡಿಕಲ್ ಸ್ಟೋರ್ ಸಿಬ್ಬಂದಿ ವೈದ್ಯರು ಹೇಳಿದ್ದರಿಂದ ಈ ಇಂಜೆಕ್ಷನ್ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.

ವೈದ್ಯರ ಶಿಫಾರಸು ಚೀಟಿ ಇಲ್ಲದೆ ಮತ್ತು ಔಷಧಿ ನೀಡಿರುವುದಕ್ಕೆ ರಸೀದಿ ನೀಡದೆ ಹಣ ಪಡೆಯುತ್ತಿರುವುದು ಅಕ್ರಮ ಎಂದು ರೋಗಿಯ ಕಡೆಯವರು ತರಾಟೆಗೆ ತೆಗೆದುಕೊಂಡಿದ್ದಾರೆ. ತಕ್ಷಣ ಮೆಡಿಕಲ್ ಸ್ಟೋರ್​ನ ಸಿಬ್ಬಂದಿಗಳು ಇಬ್ಬರಿಗೂ ಹಣ ವಾಪಸ್ ನೀಡಿದ್ದಾರೆ. ಇದು ನಮ್ಮ ತಪ್ಪಲ್ಲವೆಂದು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ