ಇಂದೋರ್: HIV ಸೋಂಕಿತ ಎಂದು ಹೇಳದೇ ಇದ್ದುದಕ್ಕೆ ರೋಗಿಗೆ ಥಳಿಸಿದ ವೈದ್ಯ ಅಮಾನತು

ಎಂವೈಎಚ್ ನಗರದ ಸರ್ಕಾರಿ ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನೊಂದಿಗೆ ಸಂಯೋಜಿತವಾಗಿದೆ, ಅದರ ಡೀನ್ ಡಾ. ಸಂಜಯ್ ದೀಕ್ಷಿತ್ ಅವರು ಪ್ರಕರಣದ ತನಿಖೆ ಮತ್ತು ಮೂರು ದಿನಗಳಲ್ಲಿ ವರದಿಯನ್ನು ಸಲ್ಲಿಸಲು ಮೂರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ ಎಂದು ಡಾ ಠಾಕೂರ್ ಹೇಳಿದರು.

ಇಂದೋರ್: HIV ಸೋಂಕಿತ ಎಂದು ಹೇಳದೇ ಇದ್ದುದಕ್ಕೆ ರೋಗಿಗೆ ಥಳಿಸಿದ ವೈದ್ಯ ಅಮಾನತು
ಮಹಾರಾಜ ಯಶವಂತರಾವ್ ಆಸ್ಪತ್ರೆ
Follow us
ರಶ್ಮಿ ಕಲ್ಲಕಟ್ಟ
|

Updated on: Oct 28, 2023 | 9:37 PM

ಇಂದೋರ್ ಅಕ್ಟೋಬರ್ 28: ಇಂದೋರ್‌ನಲ್ಲಿರುವ (Indore) ಸರ್ಕಾರಿ ಸ್ವಾಮ್ಯದ ಮಹಾರಾಜ ಯಶವಂತರಾವ್ ಆಸ್ಪತ್ರೆಯ (MYH) ಕಿರಿಯ ವೈದ್ಯರೊಬ್ಬರು ಎಚ್‌ಐವಿ ಸೋಂಕಿತ (HIV-infected) ವ್ಯಕ್ತಿಗೆ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೊ ಶನಿವಾರ ವೈರಲ್ ಆದ ನಂತರ ವೈದ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 45 ವರ್ಷದ ಎಚ್‌ಐವಿ ಸೋಂಕಿತ ವ್ಯಕ್ತಿಯನ್ನು ಉಜ್ಜಯಿನಿಯ ಆಸ್ಪತ್ರೆಯಿಂದ ಎಂವೈಎಚ್‌ಗೆ ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡಲು ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮೂಳೆ ಮುರಿತದ ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು ಎಚ್‌ಐವಿ ಸೋಂಕಿನ ಬಗ್ಗೆ ರೋಗಿ ಅಥವಾ ಆತನ ಕುಟುಂಬದವರ ಹೇಳದಿದ್ದಕ್ಕಾಗಿ ಕಿರಿಯ ವೈದ್ಯರು ಕೋಪಗೊಂಡಿದ್ದಾರೆ. ಕಿರಿಯ ವೈದ್ಯರು ರೋಗಿಗೆ ಸ್ಟ್ರೆಚರ್‌ನಲ್ಲಿ ನಿರಂತರವಾಗಿ ಕಪಾಳಮೋಕ್ಷ ಮಾಡಿ ಬೈಯುತ್ತಿರುವುದು ವಿಡಿಯೊದಲ್ಲಿದೆ. ಆರ್ಥೋಪೆಡಿಕ್ಸ್ ಮತ್ತು ಟ್ರಾಮಾಟಾಲಜಿ ವಿಭಾಗದಲ್ಲಿ ನೇಮಕಗೊಂಡ ವೈದ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಎಂವೈಎಚ್ ಅಧೀಕ್ಷಕ ಡಾ.ಪ್ರಮೇಂದ್ರ ಠಾಕೂರ್ ಹೇಳಿದ್ದಾರೆ.

ಎಂವೈಎಚ್ ನಗರದ ಸರ್ಕಾರಿ ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನೊಂದಿಗೆ ಸಂಯೋಜಿತವಾಗಿದೆ, ಅದರ ಡೀನ್ ಡಾ. ಸಂಜಯ್ ದೀಕ್ಷಿತ್ ಅವರು ಪ್ರಕರಣದ ತನಿಖೆ ಮತ್ತು ಮೂರು ದಿನಗಳಲ್ಲಿ ವರದಿಯನ್ನು ಸಲ್ಲಿಸಲು ಮೂರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ ಎಂದು ಡಾ ಠಾಕೂರ್ ಹೇಳಿದರು.

ಇದನ್ನೂ ಓದಿ: ಸೂರತ್: ಕೊಟ್ಟ ಸಾಲ ವಾಪಸ್ ಸಿಗದೆ ಆರ್ಥಿಕ ಸಂಕಷ್ಟದಿಂದ ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ

ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡಲು ನಾವು ರೋಗಿಯನ್ನು ಎಂವೈಎಚ್‌ಗೆ ಕರೆತಂದಿದ್ದೇವೆ. ಆತನಿಗೆ ಈಗಾಗಲೇ ಎಚ್‌ಐವಿ ಸೋಂಕು ತಗುಲಿದೆ. ಎಚ್‌ಐವಿ ಸೋಂಕಿನ ಬಗ್ಗೆ ಹೇಳದಿದ್ದಕ್ಕೆ ಕಿರಿಯ ವೈದ್ಯರು ಆತನಿಗೆ ಥಳಿಸಿದ್ದಾರೆ. ಹಲ್ಲೆ ತಡೆಯಲು ಮಧ್ಯಪ್ರವೇಶಿಸಿದಾಗ ನನಗೂ ಪೆಟ್ಟು ಬಿದ್ದಿದೆ ಎಂದು ರೋಗಿಯ ಸಂಬಂಧಿ ಹೇಳಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಸಹಾಯವಾಣಿಗೆ ದೂರು ಸಲ್ಲಿಸಿರುವುದಾಗಿ ಅವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!