ಒಡಿಶಾ: ಮಾರ್ಗ ಮಧ್ಯೆ ಬಸ್​ ಚಾಲಕನಿಗೆ ಕಾಣಿಸಿಕೊಂಡ ಎದೆನೋವು, ಸಾವಿಗೂ ಮುನ್ನ 48 ಪ್ರಯಾಣಿಕರ ರಕ್ಷಣೆ

ಬಸ್​ ಚಾಲಕರೊಬ್ಬರಿಗೆ ಹಠಾತ್​ ಎದೆನೋವು ಕಾಣಿಸಿಕೊಂಡಿತ್ತು. ನಿಯಂತ್ರಣ ತಪ್ಪಿತ್ತು, ಆದರೂ ಸಾವಿಗೂ ಮುನ್ನ ಅವರು 48 ಪ್ರಯಾಣಿಕರನ್ನು ರಕ್ಷಿಸಿ ಹೀರೋ ಎನಿಸಿಕೊಂಡಿದ್ದಾರೆ. ಖಾಸಗಿ ಬಸ್​ವೊಂದು ಭುವನೇಶ್ವರಕ್ಕೆ ಹೊರಟಿತ್ತು, ಮಾರ್ಗಮಧ್ಯೆ ಬಸ್ ಚಾಲಕರಿಗೆ ಎದೆನೋವು ಕಾಣಿಸಿಕೊಂಡಿತ್ತು, ಅವರು ನಿಯಂತ್ರಣ ಕಳೆದುಕೊಳ್ಳುತ್ತಿದ್ದರು, ಹಾಗಾಗಿ ಪ್ರಯಾಣಿಕರಿಗೆ ಏನು ಆಗಬಾರದೆಂದು ರಸ್ತೆಯ ಪಕ್ಕದಲ್ಲಿರುವ ತಡೆಗೋಡೆಗೆ ಡಿಕ್ಕಿ ಹೊಡೆದು ಬಸ್​ ಅನ್ನು ನಿಲ್ಲಿಸಿದ್ದಾರೆ.

ಹೃದಯಸ್ತಂಭನ
Follow us
ನಯನಾ ರಾಜೀವ್
|

Updated on: Oct 29, 2023 | 8:26 AM

ಬಸ್​ ಚಾಲಕರೊಬ್ಬರಿಗೆ ಹಠಾತ್​ ಎದೆನೋವು ಕಾಣಿಸಿಕೊಂಡಿತ್ತು. ನಿಯಂತ್ರಣ ತಪ್ಪಿತ್ತು, ಆದರೂ ಸಾವಿಗೂ ಮುನ್ನ ಅವರು 48 ಪ್ರಯಾಣಿಕರನ್ನು ರಕ್ಷಿಸಿ ಹೀರೋ ಎನಿಸಿಕೊಂಡಿದ್ದಾರೆ. ಖಾಸಗಿ ಬಸ್​ವೊಂದು ಭುವನೇಶ್ವರಕ್ಕೆ ಹೊರಟಿತ್ತು, ಮಾರ್ಗಮಧ್ಯೆ ಬಸ್ ಚಾಲಕರಿಗೆ ಎದೆನೋವು ಕಾಣಿಸಿಕೊಂಡಿತ್ತು, ಅವರು ನಿಯಂತ್ರಣ ಕಳೆದುಕೊಳ್ಳುತ್ತಿದ್ದರು, ಹಾಗಾಗಿ ಪ್ರಯಾಣಿಕರಿಗೆ ಏನು ಆಗಬಾರದೆಂದು ರಸ್ತೆಯ ಪಕ್ಕದಲ್ಲಿರುವ ತಡೆಗೋಡೆಗೆ ಡಿಕ್ಕಿ ಹೊಡೆದು ಬಸ್​ ಅನ್ನು ನಿಲ್ಲಿಸಿದ್ದಾರೆ.

ಕಂಧಮಾಲ್ ಜಿಲ್ಲೆಯ ಪಬುರಿಯಾ ಗ್ರಾಮದ ಬಳಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಸ್‌ನ ಚಾಲಕ ಸನಾ ಪ್ರಧಾನ್ ಎಂದು ಗುರುತಿಸಲಾಗಿದ್ದು, ಚಾಲನೆ ಮಾಡುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಅವರು ಗೋಡೆಗೆ ಬಸ್​ ಡಿಕ್ಕಿ ಹೊಡೆದ ಪರಿಣಾಮ ಬಸ್​ ಅಲ್ಲಿಯೇ ನಿಂತಿದೆ, 48 ಪ್ರಯಾಣಿಕರು ಕೂಡ ಸುರಕ್ಷಿತವಾಗಿದ್ದಾರೆ.

ಖಾಸಗಿ ಬಸ್, ಮಾ ಲಕ್ಷ್ಮಿ ಸಾಮಾನ್ಯವಾಗಿ ಪ್ರತಿ ರಾತ್ರಿ ಕಂಧಮಾಲ್‌ನ ಸಾರಂಗರ್‌ನಿಂದ ಜಿ ಉದಯಗಿರಿ ಮೂಲಕ ರಾಜ್ಯದ ರಾಜಧಾನಿ ಭುವನೇಶ್ವರಕ್ಕೆ ಚಲಿಸುತ್ತದೆ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: Heart Attack and Cardiac Arrest : ಹೃದಯಾಘಾತ ಹಾಗೂ ಹೃದಯಸ್ತಂಭನ ನಡುವಿನ ವ್ಯತ್ಯಾಸವೇನು?

ಘಟನೆಯ ನಂತರ, ಚಾಲಕರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಅಲ್ಲಿನ ವೈದ್ಯರು ಹೃದಯ ಸ್ತಂಭನದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಮತ್ತೋರ್ವ ಚಾಲಕರ ಸಹಾಯದಿಂದ ಬಸ್​ ತಲುಪಬೇಕಾದ ಸ್ಥಳವನ್ನು ತಲುಪಿತು. ಮರಣೋತ್ತರ ಪರೀಕ್ಷೆಯ ನಂತರ ಪ್ರಧಾನ್ ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದರು. ತನಿಖೆಯನ್ನೂ ಆರಂಭಿಸಲಾಗಿದೆ ಎಂದು ಇನ್​ಸ್ಪೆಕ್ಟರ್ ಸೆಂಧಾ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್