ಸೂರತ್: ಕೊಟ್ಟ ಸಾಲ ವಾಪಸ್ ಸಿಗದೆ ಆರ್ಥಿಕ ಸಂಕಷ್ಟದಿಂದ ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ
ಮೃತಪಟ್ಟವರಲ್ಲಿ ದಂಪತಿಗಳು, ಅವರ ಆರು ವರ್ಷದ ಮಗ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳು ಮತ್ತು ವ್ಯಕ್ತಿಯ ಪೋಷಕರು ಸೇರಿದ್ದಾರೆ. ಒಬ್ಬ ವ್ಯಕ್ತಿ, ಅವನ ಹೆಂಡತಿ, ಅವನ ಹೆತ್ತವರು, ದಂಪತಿಗಳ ಆರು ವರ್ಷದ ಮಗ ಮತ್ತು 10 ಮತ್ತು 13 ವರ್ಷದ ಇಬ್ಬರು ಹೆಣ್ಣುಮಕ್ಕಳು ಇಂದು ಮಧ್ಯಾಹ್ನ ಸೂರತ್‌ನ ಸಿದ್ಧೇಶ್ವರ ಅಪಾರ್ಟ್‌ಮೆಂಟ್‌ನಲ್ಲಿರುವ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸೂರತ್ ಅಕ್ಟೋಬರ್ 28: ಗುಜರಾತ್‌ನ (Gujarat) ಸೂರತ್‌ನಲ್ಲಿ (Surat) ಆಘಾತಕಾರಿ ಘಟನೆಯೊಂದರಲ್ಲಿ, ಶನಿವಾರದಂದು ಒಂದೇ ಕುಟುಂಬದ ಏಳು ಸದಸ್ಯರು ತಮ್ಮ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ(suicide) ಮಾಡಿಕೊಂಡಿರುವುದಾಗಿ ಶಂಕೆ ವ್ಯಕ್ತವಾಗಿದೆ. ಅದಾಜಾನ್ ಪ್ರದೇಶದ ಅವರ ಅಪಾರ್ಟ್‌ಮೆಂಟ್‌ನಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಲಾದ ಸೂಸೈಡ್ ನೋಟ್ ಪತ್ತೆಯಾಗಿದೆ. ಮೂವರು ಮಕ್ಕಳು ಸೇರಿದಂತೆ ಆರು ಮಂದಿ ವಿಷ ಸೇವಿಸಿದ್ದರೆ, ಒಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತಪಟ್ಟವರಲ್ಲಿ ದಂಪತಿಗಳು, ಅವರ ಆರು ವರ್ಷದ ಮಗ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳು ಮತ್ತು ವ್ಯಕ್ತಿಯ ಪೋಷಕರು ಸೇರಿದ್ದಾರೆ. ಒಬ್ಬ ವ್ಯಕ್ತಿ, ಅವನ ಹೆಂಡತಿ, ಅವನ ಹೆತ್ತವರು, ದಂಪತಿಗಳ ಆರು ವರ್ಷದ ಮಗ ಮತ್ತು 10 ಮತ್ತು 13 ವರ್ಷದ ಇಬ್ಬರು ಹೆಣ್ಣುಮಕ್ಕಳು ಇಂದು ಮಧ್ಯಾಹ್ನ ಸೂರತ್‌ನ ಸಿದ್ಧೇಶ್ವರ ಅಪಾರ್ಟ್‌ಮೆಂಟ್‌ನಲ್ಲಿರುವ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಡಿಸಿಪಿ (ವಲಯ -5) ಆರ್ ಪಿ ಬರೋಟ್ ಹೇಳಿದರು.
ವ್ಯಕ್ತಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ 37 ವರ್ಷದ ಮನೀಶ್ ಸೋಲಂಕಿ ಎಂದು ಗುರುತಿಸಲಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ. ಉಳಿದ ಆರು ಜನರ ಶವಗಳು ಮನೆಯ ಹಾಸಿಗೆ ಮತ್ತು ನೆಲದ ಮೇಲೆ ಪತ್ತೆಯಾಗಿವೆ.
ಮನೆಯಿಂದ ವಶಪಡಿಸಿಕೊಂಡ ಟಿಪ್ಪಣಿಯ ಪ್ರಕಾರ, ಸಾಲ ನೀಡಿದ ಹಣ ವಾಪಸ್ ಸಿಗದೇ ಇದ್ದಾಗ ಉಂಟಾದ ಆರ್ಥಿಕ ಸಂಕಷ್ಟದಿಂದ ಕುಟುಂಬವು ಈ ರೀತಿ ಮಾಡಿದೆ ಎಂದು ಬರೋಟ್ ಹೇಳಿರುವುದಾಗಿ ಎಂದು ಪಿಟಿಐ ವರದಿ ಮಾಡಿದೆ. “ಸೋಲಂಕಿ ನೇಣು ಹಾಕಿಕೊಳ್ಳುವ ಮೊದಲು ಅವರ ಕುಟುಂಬ ಸದಸ್ಯರು ವಿಷ ಸೇವಿಸುವಂತೆ ತೋರುತ್ತಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುತ್ತಿದೆ” ಎಂದು ಸೂರತ್ ಮೇಯರ್ ನಿರಂಜನ್ ಜಂಜ್ಮೇರಾ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಬಿಜೆಪಿ ಕಚೇರಿಗೆ ನಾಗಾಸಾಧುಗಳ ದಿಢೀರ್ ಭೇಟಿ, ಸಿಬ್ಬಂದಿಯಿಂದ ಉಪಚಾರ
ಕೆಲವರು ಆತನಿಂದ ಹಣವನ್ನು ಸಾಲ ಪಡೆದಿದ್ದಾರೆ ಆದರೆ ಮರುಪಾವತಿಸಲು ವಿಫಲರಾಗಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಅಮ್ರೇಲಿ ಜಿಲ್ಲೆಯವರಾದ ಮನೀಶ್ ಅವರು ಒಂದೇ ಕಟ್ಟಡದಲ್ಲಿ ನಾಲ್ಕು ಫ್ಲಾಟ್‌ಗಳನ್ನು ಹೊಂದಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:05 pm, Sat, 28 October 23