Mysore News: ಕಬಿನಿ‌ ಪೊಲೀಸ್ ಭದ್ರತಾ‌ ಕೊಠಡಿಗೆ ಡಿಕ್ಕಿ ಹೊಡೆದ ಲಾರಿ

ಕಬಿನಿ‌ ಪೊಲೀಸ್ ಭದ್ರತಾ‌ ಕೊಠಡಿಗೆ ಲಾರಿ ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ‌ ಜಲಾಶಯದ ಬಳಿ‌‌ ನಡೆದಿದೆ.

Mysore News: ಕಬಿನಿ‌ ಪೊಲೀಸ್ ಭದ್ರತಾ‌ ಕೊಠಡಿಗೆ ಡಿಕ್ಕಿ ಹೊಡೆದ ಲಾರಿ
ಪೊಲೀಸ್ ಭದ್ರತಾ‌ ಕೊಠಡಿಗೆ ಲಾರಿ ಡಿಕ್ಕಿ
Follow us
ವಿವೇಕ ಬಿರಾದಾರ
|

Updated on: Jun 19, 2023 | 8:20 AM

ಮೈಸೂರು: ಕಬಿನಿ (Kabini)‌ ಪೊಲೀಸ್ ಭದ್ರತಾ‌ ಕೊಠಡಿಗೆ (Police security room) ಲಾರಿ ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆ ಹೆಚ್ ಡಿ ಕೋಟೆ (HD Kote) ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ‌ ಜಲಾಶಯದ (Kabini Dam) ಬಳಿ‌‌ ನಡೆದಿದೆ. ಅದೃಷ್ಟವಶಾತ್ ಅನಾಹುತ ತಪ್ಪಿದೆ. ಚಾಲಕ ಲಾರಿ ನಿಲ್ಲಿಸಿ ವಿಳಾಸ ಕೇಳಲೆಂದು ಕೆಳಗೆ ಇಳಿದ್ದಿದ್ದಾನೆ. ಈ ವೇಳೆ ಇಳಿಜಾರು ಇದ್ದ ಕಾರಣ ಲಾರಿ ತಾನೆ ಸಾಗಿದ್ದು ಪೊಲೀಸ್ ಭದ್ರತಾ ಕೊಠಡಿಗೆ ಡಿಕ್ಕಿ ಹೊಡೆದಿದೆ. ಪುಣ್ಯಕ್ಕೆ ಪೊಲೀಸ್ ಭದ್ರತಾ ಕೊಠಡಿಯಲ್ಲಿ ಯಾರು ಇಲ್ಲದ ಕಾರಣ ಅನಾಹುತ ತಪ್ಪಿದೆ. ಸ್ಥಳಕ್ಕೆ ಕಬಿನಿ ಜಲಾಶಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಶವ ಸಾಗಿಸುವ ವಾಹನ ಚಾಲಿಸಿದ ಪುರಸಭೆ ಸದಸ್ಯ

ಸರಿಯಾದ ಸಮಯಕ್ಕೆ ಶವ ಸಾಗಿಸುವ ವಾಹನ ಚಾಲಕ ಬಾರದ ಹಿನ್ನೆಲೆ ಪುರಸಭೆ ಸದಸ್ಯ ವೆಂಕಟೇಶ್ ತಾವೇ ವಾಹನ ಚಲಾಯಿಸಿ ಶವ ಸಾಗಿಸಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆಯಲ್ಲಿ ನಡೆದಿದೆ. ವಿಶ್ವನಾಥ ಕಾಲೋನಿಯ ಸುಜಾತ ಎಂಬುವವರು ಸಾವನ್ನಪ್ಪಿದ್ದರು. ಈ ವೇಳೆ ಪುರಸಭೆಯ ಶವ ಸಾಗಿಸಲು ವಾಹನ ಚಾಲಕ ಇರದ ಹಿನ್ನೆಲೆ ವೆಂಕಟೇಶ್​​ ವಿಶ್ವನಾಥ ಕಾಲೋನಿಯಿಂದ ಕ್ರೈಸ್ತ ಸಮುದಾಯದ ರುದ್ರಭೂಮಿವರೆಗೂ ವಾಹನ ಚಾಲನೆ ಮಾಡಿದ್ದಾರೆ.

ಮನೆಯ ಫ್ರಿಡ್ಜ್‌ನಲ್ಲಿ ನಾಗರಹಾವಿನ ಮರಿ

ಮನೆಯ ಫ್ರಿಡ್ಜ್‌ನಲ್ಲಿ ನಾಗರಹಾವಿನ ಮರಿ ಸಿಕ್ಕಿರುವ ಘಟನೆ ಮೈಸೂರಿನ ರಾಜ್‌ಕುಮಾರ್ ರಸ್ತೆಯ ಮನೆಯೊಂದರಲ್ಲಿ ನಡೆದಿದೆ. ಕಿರಣ್ ಎಂಬುವವರ ಮ‌ನೆಯ ಫ್ರಿಡ್ಜ್‌ನಲ್ಲಿ ನಾಗರಹಾವಿನ ಮರಿ ಇತ್ತು. ಇದನ್ನು ಕಂಡ ಮನೆಯವರು ಸ್ನೇಕ್ ಶಿವು ಅವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಶಿವು ಅವರು ನಾಗರಹಾವಿನ ಮರಿಯನ್ನು ಹಿಡಿದು, ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ಕಾರು ಬೈಕ್ ನಡುವೆ ಅಪಘಾತ ಬೈಕ್ ಸವಾರ ಸಾವು

ಕಾರು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಟಿ. ನರಸೀಪುರ ಮುಖ್ಯರಸ್ತೆಯ ಇಂಡವಾಳು ಗ್ರಾಮದ ಬಳಿ ನಡೆದಿದೆ. ಕೊಳ್ಳೇಗಾಲದ ನಿವಾಸಿ ಲಲಿತ್ ಗುಜರ್ (22) ಮೃತ ದುರ್ದೈವಿ. ಹಿಂಬದಿ ಬೈಕ್ ಸವಾರ ಪಂಕಜ್ ಗುಜರ್​ಗೆ ಗಂಭೀರ ಗಾಯಗಳಾಗಿವೆ. ಬೈಕ್​​ ಸವಾರರು ಕೊಳ್ಳೇಗಾಲದಿಂದ ಮೈಸೂರಿಗೆ ಸಂಬಂಧಿಕರ ಮನೆಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಟಿ.ನರಸೀಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ಜಿಲ್ಲೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ