AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡಸು ಅಲ್ಲ ಎಂದು ಹೀಯಾಳಿಸಿದ್ದಕ್ಕೆ ಸ್ನೇಹಿತನ ಹತ್ಯೆ, ವ್ಯಂಗ್ಯದ ಮಾತಿನ ನಡುವೆ ಘನಘೋರ!

ನೀನು ಗಂಡಸೇ ಅಲ್ಲ ಎಂದು ಆಡಿದ್ದ ಒಂದೇ ಮಾತಿಗೆ ಸ್ನೇಹಿತನನ್ನೇ ಹತ್ಯೆ ಮಾಡಿದ್ದಾನೆ. ಮನೆ ಒಡೆಯ ಸ್ಮಶಾನದಲ್ಲಿ ಶಾಶ್ವತವಾಗಿ ಮಲಗಿದ್ರೆ, ಈ ಮನೆಯಲ್ಲಿ ಮಾತ್ರ ಮೌನವೊಂದೇ ಉಳಿದಿದೆ. ಅಷ್ಟಕ್ಕೂ ಕ್ಷುಲ್ಲಕ ಕಾರಣಕ್ಕೆ ಇಲ್ಲಿ ಸ್ನೇಹಿತನಿಂದಲೇ ಗೆಳೆಯನ ಕೊಲೆಯಾಗಿದೆ.

ಗಂಡಸು ಅಲ್ಲ ಎಂದು ಹೀಯಾಳಿಸಿದ್ದಕ್ಕೆ ಸ್ನೇಹಿತನ ಹತ್ಯೆ, ವ್ಯಂಗ್ಯದ ಮಾತಿನ ನಡುವೆ ಘನಘೋರ!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jan 11, 2023 | 8:41 PM

Share

ಮೈಸೂರು: ಅವರಿಬ್ಬರು ಸ್ನೇಹಿತರು Friends). ನಿತ್ಯ ಒಟ್ಟಿಗೆ ಕೆಲಸಕ್ಕೆ ಹೋಗ್ತಿದ್ರು. ರಾತ್ರಿಯಾಗ್ತಿದ್ದಂತೆ ಒಟ್ಟಿಗೆ ಎಣ್ಣೆ ಪಾರ್ಟಿ ಮಾಡಿದ್ರು. ಆದ್ರೆ ನಶೆಯಲ್ಲಿ ಮಾತನಾಡಿದ್ದ ಅದೊಂದು ಮಾತು ಇಬ್ಬರ ನಡುವೆ ಜಗಳ ತಂದಿಟ್ಟಿತ್ತು. ಅದೇ ಜಗಳ ಕೊಲೆಯಲ್ಲಿ (murder) ಅಂತ್ಯವಾಗಿದೆ. ಹೌದು..ಮೈಸೂರು ಜಿಲ್ಲೆ ಹುಣಸೂರು ತಾಲೂಕು ಹರವೆ ಗ್ರಾಮದ ಸಣ್ಣಸ್ವಾಮಿ ನಾಯಕ ಕೃಷಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ. ಪತ್ನಿ ಮಕ್ಕಳ ಜತೆ ಅನ್ಯೂನ್ಯವಾಗಿದ್ದ ಸಣ್ಣಸ್ವಾಮಿ ಗೆಳೆಯನಿಂದಲೇ ಕೊಲೆಯಾಗಿದ್ದಾನೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಡಿಬಿಲ್ಡರ್ ಶವ ಪತ್ತೆ: ಯುವ ದೇಹದಾರ್ಢ್ಯ ಪಟು ಫೋಟೋಗಳು ಇಲ್ಲಿವೆ

ತನ್ನ ಸ್ನೇಹಿತನಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಕುಮಾರ್ ಅಲಿಯಾಸ್‌ ಚಿಗರೆ ಎನ್ನುವ ಸ್ವಾಮಿಯ ಗೆಳೆಯನೇ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್‌ ಆಗಿದ್ದಾನೆ.ಅಷ್ಟಕ್ಕೂ ಸಣ್ಣ ಸ್ವಾಮಿ ನಾಯಕ ಹಾಗೂ ಕುಮಾರ್ ಒಳ್ಳೆಯ ಸ್ನೇಹಿತರಾಗಿದ್ದರು. ಒಟ್ಟಿಗೆ ಕೆಲಸಕ್ಕೆ ಹೋಗುವುದು ಊಟ ತಿಂಡಿ ಅಷ್ಟೇ ಅಲ್ಲ ರಾತ್ರಿಯಾದ್ರೆ ಒಟ್ಟಿಗೆ ಎಣ್ಣೆ ಪಾರ್ಟಿ ಕೂಡಾ ಮಾಡಿಕೊಳ್ಳುತ್ತಿದ್ದರು.

ಅದೇ ರೀತಿ ಮೊನ್ನೆ ರಾತ್ರಿ ಇಬ್ಬರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತು ಆರಂಭವಾಗಿದ್ದು, ಇನ್ನು ಮದುವೆಯಾಗದ ಕುಮಾರ್‌ನಿಗೆ ಸಣ್ಣ ಸ್ವಾಮಿ‌ನಾಯಕ ಕಿಚಾಯಿಸಿದ್ದ. ನೀನು ಗಂಡಸೇ ಅಲ್ಲ ಅನ್ನೋ‌ ಅನುಮಾನ ಇದೆ. ಅದಕ್ಕೆ ನಿನಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಅಂತಾ ಗಂಭೀರ ಅರೋಪ ಮಾಡಿದ್ದ. ಇದ್ರಿಂದ ರೊಚ್ಚಿಗೆದ್ದ ಕುಮಾರ್ ಸಣ್ಣ ಸ್ವಾಮಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಈ ಪ್ರಕರಣದ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಚಿಗರೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅದೇನೇ ಇರ್ಲಿ, ನೀನು ಗಂಡಸೇ ಅಲ್ಲ ಅಂತಾ ಆಡಿದ್ದ ಒಂದೇ ಮಾತಿಗೆ ಸ್ವಾಮಿ ನಾಯಕ್‌ ಮರ್ಡರ್ ಆಗಿದ್ದು ನಿಜಕ್ಕೂ ದುರಂತ.

ಇನ್ನಷ್ಟು ಮೈಸೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 8:39 pm, Wed, 11 January 23

ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು