Mysuru Road Accident: ಕಾರಿನ ಟೈರ್​ಗಳು ಸ್ಫೋಟ! ತಾಯಿ-ಮಗ ಸಾವು

ಕಾರಿನ ಮುಂಭಾಗದ ಟೈರ್​ಗಳು ಸ್ಫೋಟಗೊಂಡಿವೆ. ಟೈರ್​ಗಳು ಸ್ಫೋಟಗೊಂಡಾಗ ಕಾರು ಕಂಬಕ್ಕೆ ಗುದ್ದಿದೆ. ತಾಯಿ ಮಗ ಕಾರಿನಲ್ಲೆ ಸಾವು. ಈ ವೇಳೆ ತಾಯಿ ಮತ್ತು ಮಗ ಕಾರಿನಲ್ಲೇ ಸಾವನ್ನಪ್ಪಿದ್ದಾರೆ.

Mysuru Road Accident: ಕಾರಿನ ಟೈರ್​ಗಳು ಸ್ಫೋಟ! ತಾಯಿ-ಮಗ ಸಾವು
ಕಾರು ಕಂಬಕ್ಕೆ ಗುದ್ದಿದೆ

ಮೈಸೂರು: ಟೈರ್ ಸ್ಫೋಟಗೊಂಡು ಕಾರಿನಲ್ಲಿದ್ದ ತಾಯಿ ಮತ್ತು ಮಗ ಸಾವನ್ನಪ್ಪಿದ್ದಾರೆ. ಈ ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಸಂಭವಿಸಿದೆ. ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾರಿನ ಟೈರ್​ಗಳು ಸ್ಫೋಟಗೊಂಡಿವೆ. ಈ ವೇಳೆ 12 ವರ್ಷದ ದೈವಿಕ್ ಮತ್ತು 35 ವರ್ಷದ ಗುಣಲಕ್ಷ್ಮೀ ಮೃತಪಟ್ಟಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಜಗದೀಶ್​ಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೈಸೂರಿನ ಕುವೆಂಪು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನ ಮುಂಭಾಗದ ಟೈರ್​ಗಳು ಸ್ಫೋಟಗೊಂಡಿವೆ. ಟೈರ್​ಗಳು ಸ್ಫೋಟಗೊಂಡಾಗ ಕಾರು ಕಂಬಕ್ಕೆ ಗುದ್ದಿದೆ. ತಾಯಿ ಮಗ ಕಾರಿನಲ್ಲೆ ಸಾವು. ಈ ವೇಳೆ ತಾಯಿ ಮತ್ತು ಮಗ ಕಾರಿನಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಪತಿ ಜಗದೀಶ್ಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆ ಇಂದು (ಅ.6) ಮುಂಜಾನೆ 4.30ಕ್ಕೆ ನಡೆದಿದೆ.

ಕುಟುಂಬ ಕುಶಾಲನಗರದಿಂದ ಮೈಸೂರಿಗೆ ವಾಪಸಾಗುತ್ತಿತ್ತು. ಪೂಜೆಗೆಂದು ಕುಶಾಲನಗರಕ್ಕೆ ತೆರಳಿದ್ದರು. ಪೂಜೆ ಮುಗಿಸಿ ವಾಪಸ್ಸು ಬರುವಾಗ ಕಾರಿನ ಟೈರ್​ಗಳು ಬ್ಲಾಸ್ಟ್ ಆಗಿವೆ. ಮನೆಗೆ ಒಂದು ಕಿ.ಮೀ ದೂರದಲ್ಲಿರುವಾಗ ಅಪಘಾತವಾಗಿದೆ. ಕಾರಿನ ಮುಂಭಾಗದ ಗಾಜಿಗೆ ಡಿಕ್ಕಿ ಹೊಡೆದು ಗುಣಲಕ್ಷ್ಮಿ ಸಾವನ್ನಪ್ಪಿದ್ದಾರೆ. ಹಿಂಬದಿ ಸೀಟ್​ನಲ್ಲಿ ಕುಳಿತಿದ್ದ ಪುತ್ರ ದೈವಿಕ್ ಮೃತಪಟ್ಟಿದ್ದಾನೆ. ಸೀಟ್ ಬೆಲ್ಟ್ ಕುತ್ತಿಗೆ ಸಿಕ್ಕಿ ಹಾಕಿಕೊಂಡು ದೈವಿಕ್ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಜಗದೀಶ್ ಕೈ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ

Crime News: ಬಟ್ಟೆಯೊಳಗೆ ಜಿಲೆಟಿನ್ ಇಟ್ಟುಕೊಂಡು ಹೆಂಡತಿಯನ್ನು ತಬ್ಬಿದ ಗಂಡ; ಬಾಂಬ್ ಸ್ಫೋಟಗೊಂಡು ಇಬ್ಬರೂ ಸಾವು!

ಟ್ವಿಟರ್​ನಲ್ಲಿ ಟ್ರೆಂಡ್ ಆಯ್ತು ಜಿಯೋ ನೆಟ್​ವರ್ಕ್​ ಡೌನ್; ನಿಮಗೂ ಎದುರಾಯ್ತಾ ಈ ಸಮಸ್ಯೆ?

Read Full Article

Click on your DTH Provider to Add TV9 Kannada