ರೈತ ದೇಶದ ಬೆನ್ನೆಲುಬು, ಅನ್ನದಾತ ಅನ್ನೋದು ಕೇವಲ ಘೋಷಣೆಗಷ್ಟೇ ಸೀಮಿತವಾಗಿದೆ. ಇದಕ್ಕೆ ಸಾಕ್ಷಿ ರೈತರಿಗೆ ಆಗುತ್ತಿರುವ ಮೋಸ. ಮೈಸೂರಿನಲ್ಲಿ ಬ್ಯಾಂಕೊಂದು ಸಾಲ ಪಡೆದ ರೈತ ಸಾಲ ತೀರಿಸಿದ್ದರೂ ಸಹ ಮನೆ ಹರಾಜು ಹಾಕಿದ ಆರೋಪ ಕೇಳಿ ಬಂದಿದೆ. ಬ್ಯಾಂಕ್ ಒಳಗೆ ರೈತರ ಮಾತಿನ ಚಕಮಕಿ. ಹಸಿರು ಶಾಲು ಹಿಡಿದು ಕುಳಿತ ಅನ್ನದಾತರು. ಅಂದ್ಹಾಗೆ ಇದು ಮೈಸೂರಿನ ವಿಜಯನಗರ ಬಡಾವಣೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಮುಖ್ಯ ಕಚೇರಿಯಲ್ಲಿ ನಿನ್ನೆ ನಡೆದಿರುವ ಘಟನೆ. ಇದಕ್ಕೆ ಕಾರಣ ಬ್ಯಾಂಕ್‌ನ ಸಿಬ್ಬಂದಿ. ಹೌದು ರೈತ ದೊರೆಸ್ವಾಮಿ ಎಂಬುವವರು ಕಾವೇರಿ ಗ್ರಾಮೀಣ ಬ್ಯಾಂಕ್‌ನಿಂದ ತಮ್ಮ ಮನೆ ಪತ್ರ ನೀಡಿ 15 ಲಕ್ಷ ಸಾಲ ಪಡೆದಿದ್ರು. ಸಾಲ ಪಡೆದ ನಂತರ ಪ್ರತಿ ತಿಂಗಳು ತಮ್ಮ ಕೈಲಾದಷ್ಟು ಬಡ್ಡಿ ಅಸಲು ಕಟ್ಟುತ್ತಿದ್ದರು. ಹೀಗಿದ್ದರೂ ಬ್ಯಾಂಕ್‌ನವರು ದೊರೆಸ್ವಾಮಿ ಅವರ ಮನೆಯನ್ನು ಹರಾಜು ಹಾಕಿದ್ದಾರಂತೆ.
Also Read: ಧಾರವಾಡ ಕರ್ನಾಟಕ ವಿವಿಯಲ್ಲಿ 10 ವರ್ಷ ಹಿಂದಿನ ಅಕ್ರಮಗಳ ತನಿಖೆಗೆ ಮರುಜೀವ ನೀಡಿದ ರಾಜ್ಯಪಾಲ, ಆರೋಪಿಗಳ ಎದೆಯಲ್ಲಿ ಢವಢವ
ದೊರೆಸ್ವಾಮಿ ಪ್ರಕಾರ ಇದುವರೆಗೂ ಬಡ್ಡಿ ಸೇರಿ 18, 98,000 ರೂಪಾಯಿ ಸಾಲ ಮರು ಪಾವತಿ ಮಾಡಿದ್ದಾರಂತೆ. ಆದರೂ ಬ್ಯಾಂಕ್‌ನವರು ದೊರೆಸ್ವಾಮಿ ಅವರ ಮನೆಯನ್ನು ಏಕ ವ್ಯಕ್ತಿಗೆ ಹರಾಜು ಹಾಕಿದ್ದಾರಂತೆ. ಈ ಕಾರಣಕ್ಕೆ ನಿನ್ನೆ ಮಂಗಳವಾರ 50 ಕ್ಕೂ ಹೆಚ್ಚು ರೈತರು ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಮುತ್ತಿಗೆ ಹಾಕಿದ್ರು. ಇನ್ನು ಬ್ಯಾಂಕ್‌ನವರು ದೊರೆಸ್ವಾಮಿ ಅವರ ಆಸ್ತಿ ಕಬಳಿಸಲು ಈ ರೀತಿ ಮಾಡಿದ್ದಾರೆ ಅನ್ನೋದು ರೈತರ ಆರೋಪ.
ಇನ್ನು ಈ ಬಗ್ಗೆ ಬ್ಯಾಂಕ್‌ನವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ರೈತರಿಗೆ ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇದೆಲ್ಲಾ ಏನೇ ಇರಲಿ. ಮೊದಲೇ ಸಂಕಷ್ಟದಲ್ಲಿರುವ ಅನ್ನದಾತರಿಗೆ ಇದು ಒಂದು ರೀತಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ