ಮೈಸೂರು: ಸೋಶಿಯಲ್ ಮೀಡಿಯಾದಲ್ಲಿ (Social Media) ಕೆಟ್ಟದಾಗಿ ಕಮೆಂಟ್ (Comment) ಮಾಡಿದ್ದಾನೆಂದು ಜಿಲ್ಲೆಯ ಹುಣಸೂರಲ್ಲಿ ಯುವಕನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. 23 ವರ್ಷದ ಬೀರೇಶ್ ಕೊಲೆಯಾದ ಯುವಕ. ಬೀರೇಶ್ ಇನ್ಸ್ಟಾಗ್ರಾಮ್ನಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿದ್ದಾನೆಂದು ಆರೋಪಿಸಿ ನಿತಿನ್ ಮತ್ತು ಮನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ. ಬೈಕ್ನಲ್ಲಿ ಕರೆದೊಯ್ದು ಆರೋಪಿಗಳು ಕೊಲೆ ಮಾಡಿದ್ದು, ಈ ಬಗ್ಗೆ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ನಾಲ್ಕು ತಿಂಗಳ ಹಿಂದೆ ಪ್ರೀತಿಸಿ ಕೊಲೆ ಆರೋಪಿ ನಿತಿನ್ ಮದುವೆಯಾಗಿದ್ದ. ಯುವತಿ ಆರ್ಥಿಕವಾಗಿ ಸಬಲಳಾಗಿದ್ದಳು. ಮದುವೆ ಬಗ್ಗೆ ಬೀರೇಶ್ ಕಾಮೆಂಟ್ ಮಾಡಿದ್ದ.ಇದೇ ಕಾರಣಕ್ಕೆ ಬೀರೇಶ್ ಬಗ್ಗೆ ಆಕ್ರೋಶಗೊಂಡಿದ್ದ ನಿತಿನ್, ಸ್ನೇಹಿತ ಮನು ಜೊತೆ ಸೇರಿ ಕೊಲೆ ಮಾಡಿದ್ದಾನೆ. ಕೊಲೆ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಅಂಗನವಾಡಿ ಶಿಕ್ಷಕಿಯ ಬರ್ಬರ ಕೊಲೆ:
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ನಾಯನಹಳ್ಳಿಯಲ್ಲಿ ಮನೆಯಲ್ಲಿದ್ದ ಅಂಗನವಾಡಿ ಶಿಕ್ಷಕಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಖದೀಮರು ಕತ್ತು ಸೀಳಿ ವೆಂಕಟಲಕ್ಷ್ಮಮ್ಮ(52)ನನ್ನು ಹತ್ಯೆ ಮಾಡಿದ್ದಾರೆ. ಶಿಕ್ಷಕಿಯ ಮನೆಯ ಬೀರುವಿನಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ದರೋಡೆ ಮಾಡಿ ಶಿಕ್ಷಕಿಯನ್ನ ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Manoranjan Ravichandran: ರವಿಚಂದ್ರನ್ ಪುತ್ರ ಮನೋರಂಜನ್ಗೆ ಕಂಕಣ ಭಾಗ್ಯ; ಕೈ ಹಿಡಿಯಲಿರುವ ಹುಡುಗಿ ಹಿನ್ನೆಲೆ ಏನು?
ಪತ್ನಿಯನ್ನೇ ಕೊಂದ ಪತಿ:
ಖರ್ಚಿಗೆ ಹಣ ಕೊಡದಿದ್ದಕ್ಕೆ ಪತಿ ತನ್ನ ಪತ್ನಿಯನ್ನೇ ಕೊಂದಿದ್ದಾನೆ. ಬೆಂಗಳೂರು ಗ್ರಾ. ಜಿಲ್ಲೆಯ ಹೊಸಕೋಟೆ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಹೊಸಪತಿ ವೆಂಕಟೇಶ್ ಎಂಬಾತ ಪತ್ನಿ ಮುನಿರತ್ನ(25)ಳನ್ನ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪತಿ ಹಲವು ದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದ. ಕೆಲಸಕ್ಕೆ ಹೋಗುವಂತೆ ಪತ್ನಿ ಹಲವು ಬಾರಿ ಬುದ್ಧಿವಾದ ಹೇಳಿದ್ದಾಳೆ. ಬುದ್ಧಿವಾದ ಹೇಳಿದಕ್ಕೆ ಆಕ್ರೋಶಗೊಂಡು ಪತ್ನಿಯನ್ನು ಹತ್ಯೆಗೈದಿದ್ದಾನೆ.
ವಾಹನದಲ್ಲಿದ್ದ 6 ಜನರಿಗೆ ಗಾಯ:
ಬಾಗಲಕೋಟೆ: ಟಿಪ್ಪರ್ ಡಿಕ್ಕಿಯಾಗಿ ಕ್ರೂಸರ್ ವಾಹನದಲ್ಲಿದ್ದ 6 ಜನರಿಗೆ ಗಾಯವಾಗಿದೆ. ಬೀಳಗಿ ತಾಲೂಕಿನ ಅನಗವಾಡಿ ಸೇತುವೆ ಬಳಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ಕ್ರೂಸರ್ನಲ್ಲಿ ಸಿಲುಕಿದವರನ್ನ ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದೆ.
ಇದನ್ನೂ ಓದಿ: ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಬಿಟ್ಟಿದ್ದರಿಂದ ಆನೆಗುಂದಿಯ ಶ್ರೀಕೃಷ್ಣದೇವರಾಯ ಮಂಟಪ ಜಲಾವೃತ
Published On - 10:31 am, Wed, 13 July 22