‘ಸಾರಿ ಕರ್ಮ ರಿಟರ್ನ್ಸ್​’: 11 ವರ್ಷದಲ್ಲಿ ರಾಗಿಣಿ ದ್ವಿವೇದಿ ತೆಗೆದುಕೊಂಡ ರಿಸ್ಕ್​ ಏನು?

‘ಸಾರಿ ಕರ್ಮ ರಿಟರ್ನ್ಸ್​’: 11 ವರ್ಷದಲ್ಲಿ ರಾಗಿಣಿ ದ್ವಿವೇದಿ ತೆಗೆದುಕೊಂಡ ರಿಸ್ಕ್​ ಏನು?

TV9 Web
| Updated By: ಮದನ್​ ಕುಮಾರ್​

Updated on: Jul 13, 2022 | 9:22 AM

Ragini Dwivedi: ರಿಯಲ್​ ಲೈಫ್​ನಲ್ಲಿ ರಾಗಿಣಿ ದ್ವಿವೇದಿ ಅವರು ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ಚಿತ್ರರಂಗದಲ್ಲೂ ರಿಸ್ಕ್​ ತೆಗೆದುಕೊಂಡಿದ್ದಾರೆ. ಆ ಬಗ್ಗೆ ಅವರು ಮಾತನಾಡಿದ್ದಾರೆ.

ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ತಮ್ಮ ಸಿನಿಮಾ ಜರ್ನಿಯನ್ನು ಅವಲೋಕನ ಮಾಡಿಕೊಂಡಿದ್ದಾರೆ. ‘ಸಾರಿ ಕರ್ಮ ರಿಟರ್ನ್ಸ್​’ (Sorry Karma Returns) ಸಿನಿಮಾದಲ್ಲಿ ನಟಿಸಿರುವ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಈ ವೇಳೆ ರಾಗಿಣಿ ಮಾತನಾಡಿ, ತಮ್ಮ ಬದುಕಿನ ಆಯ್ಕೆಗಳ ಬಗ್ಗೆ ವಿವರಿಸಿದರು. ಕನ್ನಡ ಚಿತ್ರರಂಗದಲ್ಲಿ (Kannada Film Industry) 11 ವರ್ಷದಿಂದ ಸಕ್ರಿಯವಾಗಿರುವ ಅವರು ಹಲವು ರಿಸ್ಕ್​ಗಳನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.