ನಿಯಮ ಪಾಲಿಸದ, ವೈದ್ಯಕೀಯ ಅನುಮತಿ ಪಡೆಯದವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ -ಮೈಸೂರು ಡಿಹೆಚ್​ಓ ಖಡಕ್ ವಾರ್ನಿಂಗ್

ನಿಯಮ ಪಾಲಿಸದ, ವೈದ್ಯಕೀಯ ಅನುಮತಿ ಪಡೆಯದವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಹೆಚ್‌ಓ ಡಾ. ಪಿ.ಸಿ. ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ದಾರೆ. ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ಸಂಬಂಧ ಅಧಿಕಾರಿಗಳು ಕ್ಲಿನಿಕ್, ಸ್ಕ್ಯಾನಿಂಗ್ ಸೆಂಟರ್​ಗಳ ಮೇಲೆ ದಾಳಿ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದು 20ಕ್ಕೂ ಹೆಚ್ಚು ಕ್ಲಿನಿಕ್‌, ನರ್ಸಿಂಗ್ ಹೋಮ್‌ಗೆ ಬೀಗ ಹಾಕಿದ್ದಾರೆ.

ನಿಯಮ ಪಾಲಿಸದ, ವೈದ್ಯಕೀಯ ಅನುಮತಿ ಪಡೆಯದವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ -ಮೈಸೂರು ಡಿಹೆಚ್​ಓ ಖಡಕ್ ವಾರ್ನಿಂಗ್
ಡಿಹೆಚ್‌ಓ ಡಾ. ಪಿ.ಸಿ. ಕುಮಾರಸ್ವಾಮಿ
Edited By: ಆಯೇಷಾ ಬಾನು

Updated on: Dec 22, 2023 | 7:42 AM

ಮೈಸೂರು, ಡಿ.22: ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ( Female Feticide)ಸಂಬಂಧ ಅಧಿಕಾರಿಗಳ ತನಿಖೆ ಮುಂದುವರೆದಿದೆ. ನಿಯಮ ಪಾಲಿಸದ, ವೈದ್ಯಕೀಯ ಅನುಮತಿ ಪಡೆಯದವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಹೆಚ್‌ಓ ಡಾ. ಪಿ.ಸಿ. ಕುಮಾರಸ್ವಾಮಿ (Dr P.C. Kumaraswamy) ಅವರು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ 20ಕ್ಕೂ ಹೆಚ್ಚು ಕ್ಲಿನಿಕ್‌, ನರ್ಸಿಂಗ್ ಹೋಮ್‌ಗೆ ಬೀಗ ಹಾಕಲಾಗಿದೆ. 20ಕ್ಕೂ‌ ಹೆಚ್ಚು ಸ್ಕ್ಯಾನಿಂಗ್ ಯಂತ್ರಗಳನ್ನು ಸೀಲ್ ಮಾಡಲಾಗಿದೆ. ಇನ್ನು 2 ರಿಂದ 3 ತಿಂಗಳು ನಿರಂತರ ಕಾರ್ಯಾಚರಣೆ ನಡೆಸಲಾಗುತ್ತೆ ಎಂದು ಡಿಹೆಚ್‌ಓ ಕುಮಾರಸ್ವಾಮಿ ತಿಳಿಸಿದರು.

ಕೆಪಿಎಂಇ ಪ್ರಮಾಣ ಪತ್ರ ಪಡೆಯದ ನಿಯಮ ಪಾಲಿಸದಿದ್ದರೆ ಕ್ರಮ ಕೈಗೊಳ್ಳಲಾಗುತ್ತೆ. ಸ್ಕ್ಯಾನಿಂಗ್ ಸೆಂಟರ್‌ಗಳು ನಿಯಮ ಪಾಲಿಸಬೇಕು. ಸ್ಕ್ಯಾನಿಂಗ್ ಮಾಡಿರುವ ಸಂಪೂರ್ಣ ವಿವರ ನೀಡಬೇಕು. 5 ಟಾಸ್ಕ್ ಪೋರ್ಸ್ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಅಕ್ರಮದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡುತ್ತಿದ್ದಾರೆ. ಅವರ ವಿವರ ಗೌಪ್ಯವಾಗಿ ಇಡಲಾಗುತ್ತಿದೆ. ನಿಖರ ಮಾಹಿತಿ ನೀಡಿದವರಿಗೆ 50 ಸಾವಿರ ಬಹುಮಾನ ಘೋಷಣೆ ಮಾಡಲಾಗಿದೆ. ಅದನ್ನು ಒಂದು ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆ ಸಹ ಇದೆ ಎಂದು ಡಾ. ಪಿ.ಸಿ. ಕುಮಾರಸ್ವಾಮಿ ಹೇಳಿದರು.

ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ಸಂಬಂಧ ಅಧಿಕಾರಿಗಳು ಕ್ಲಿನಿಕ್, ಸ್ಕ್ಯಾನಿಂಗ್ ಸೆಂಟರ್​ಗಳ ಮೇಲೆ ದಾಳಿ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದು 20ಕ್ಕೂ ಹೆಚ್ಚು ಕ್ಲಿನಿಕ್‌, ನರ್ಸಿಂಗ್ ಹೋಮ್‌ಗೆ ಬೀಗ ಹಾಕಿದ್ದಾರೆ.

ಇದನ್ನೂ ಓದಿ: ಕೋಮುಸೂಕ್ಷ್ಮ ಗಂಗಾವತಿ ಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ: ಸಿಸಿಟಿವಿ ಕಣ್ಗಾವಲು, ಬಿಗಿ ಪೊಲೀಸ್ ಬಂದೋಬಸ್ತ್

ಅರಮನೆ ಮೃಗಾಲಯದ‌ ಬಳಿ ವಿಶೇಷ ತಂಡ ನಿಯೋಜನೆ

ಇನ್ನು ಮತ್ತೊಂದೆಡೆ ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆ ಮೈಸೂರಿನ ಪ್ರವಾಸಿ ತಾಣಗಳ ಬಳಿ ವಿಶೇಷ ತಂಡ ನಿಯೋಜಿಸಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಈ ಬಗ್ಗೆ ಮಾತನಾಡಿದ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಿ.ಸಿ. ಕುಮಾರಸ್ವಾಮಿ, ಅರಮನೆ ಮೃಗಾಲಯದ‌ ಬಳಿ ವಿಶೇಷ ತಂಡ ನಿಯೋಜನೆ ಮಾಡಲಾಗಿದೆ. ವಿಶೇಷ ತಂಡದಿಂದ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರವಾಸಿ ತಾಣಗಳಿಗೆ ಆಗಮಿಸುವವರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಸದ್ಯ ಪ್ರವಾಸಿ ತಾಣಗಳಲ್ಲಿ ಟೆಸ್ಟಿಂಗ್ ಅವಶ್ಯಕತೆ ಕಾಣುತ್ತಿಲ್ಲ. ಪ್ರವಾಸಿ ತಾಣಗಳ ಮುಖ್ಯಸ್ಥರ ಸಭೆ ನಡೆಸಲಾಗುವುದು. ಅವರಿಗೂ ಕೊರೊನಾ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us