ಮೈಸೂರು: ಎರಡು ಅಪರಿಚಿತ ಶವ ಪತ್ತೆ; ಮೂಟೆಯಲ್ಲಿ ಕಟ್ಟಿ ಶವ ಬಿಸಾಡಿರುವ ದುಷ್ಕರ್ಮಿಗಳು
ಕೆಆರ್ ನಗರ(KR Nagara) ತಾಲೂಕಿನ ಮೂಲೆಪೆಟ್ಲು ಗ್ರಾಮದ ಬಳಿ ಎರಡು ಅಪರಿಚಿತ ಶವಗಳು ಪತ್ತೆಯಾಗಿದ್ದು, ದುಷ್ಕರ್ಮಿಗಳು ಶವಗಳನ್ನು ಮೂಟೆಯಲ್ಲಿ ಕಟ್ಟಿ ಬಿಸಾಡಿದ್ದಾರೆ. ಇನ್ನು ಎರಡು ಮೃತದೇಹದ(Dead Body) ಮೇಲೂ ವಿಭಿನ್ನವಾದ ಟ್ಯಾಟುಗಳಿದ್ದು, ಓರ್ವನ ಒಂದು ಕೈನಲ್ಲಿ VR 4B THE DOCTOR LEGEND ಎಂದಿದ್ದರೆ, ಮತ್ತೊಂದು ಕೈನಲ್ಲಿ ಸೂಪರ್ ಮ್ಯಾನ್ ಸಿಂಬಲ್ ಹಾಗೂ ಸಿಂಹದ ಟ್ಯಾಟು ಇದೆ.
ಮೈಸೂರು, ಡಿ.21: ಜಿಲ್ಲೆಯ ಕೆಆರ್ ನಗರ(KR Nagara) ತಾಲೂಕಿನ ಮೂಲೆಪೆಟ್ಲು ಗ್ರಾಮದ ಬಳಿ ಎರಡು ಅಪರಿಚಿತ ಶವಗಳು ಪತ್ತೆಯಾಗಿದ್ದು, ದುಷ್ಕರ್ಮಿಗಳು ಶವಗಳನ್ನು ಮೂಟೆಯಲ್ಲಿ ಕಟ್ಟಿ ಬಿಸಾಡಿದ್ದಾರೆ. ಇನ್ನು ಎರಡು ಮೃತದೇಹದ(Dead Body) ಮೇಲೂ ವಿಭಿನ್ನವಾದ ಟ್ಯಾಟುಗಳಿದ್ದು, ಓರ್ವನ ಒಂದು ಕೈನಲ್ಲಿ VR 4B THE DOCTOR LEGEND ಎಂದಿದ್ದರೆ, ಮತ್ತೊಂದು ಕೈನಲ್ಲಿ ಸೂಪರ್ ಮ್ಯಾನ್ ಸಿಂಬಲ್ ಹಾಗೂ ಸಿಂಹದ ಟ್ಯಾಟು ಇದೆ. ಇನ್ನು ಮತ್ತೊರ್ವನ ಕೈನಲ್ಲೂ ಟ್ಯಾಟುಯಿದೆ. ಇಬ್ಬರನ್ನು ಕೊಲೆ ಮಾಡಿ ಇಲ್ಲಿಗೆ ತಂದು ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಮೃತರ ಗುರುತು ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಕೆ ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ನೆರೆ ಮನೆಯ ಬ್ಯಾಚುಲರ್ ಯುವಕರ ಎಡವಟ್ಟು, ತೆರದ ಸಂಪ್ಗೆ ಬಿದ್ದು 5 ವರ್ಷದ ಬಾಲಕಿ ಸಾವು
ಬೆಂಗಳೂರು ಗ್ರಾಮಾಂತರ: ನೆರೆ ಮನೆಯ ಬ್ಯಾಚುಲರ್ ಯುವಕರ ಎಡವಟ್ಟಿಗೆ 5ವರ್ಷದ ಬಾಲಕಿ ತೆರದ ಸಂಪ್ಗೆ ಬಿದ್ದುಸಾವನ್ನಪ್ಪಿರುವ ಘಟನೆ ಟಿ.ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ನಡೆದಿದೆ. ನಸ್ತಿನ ಭಾನು ಮತ್ತು ಸೈಯದ್ ಹುಸೇನ್ ದಂಪತಿಗಳ ಮಗಳಾದ ಶಾಹಿದ ಬಾನು(05)ಮೃತ ಬಾಲಕಿ. ಆಟವಾಡುತ್ತಿದ್ದ ಮಗು ಕಾಣದ ಹಿನ್ನೆಲೆ ಮನೆಯ ಅಕ್ಕಪಕ್ಕದಲ್ಲಿ ಅಜ್ಜಿ ಫಾಮೀದಾ ಹುಡುಕಾಟ ನಡೆಸಿದ್ದರು.
ಇದನ್ನೂ ಓದಿ:ಬಿಹಾರದಲ್ಲಿ ಅರ್ಚಕನ ಭೀಕರ ಕೊಲೆ; ಕಣ್ಣು ಕಿತ್ತು, ಜನನಾಂಗ ಕತ್ತರಿಸಿರುವ ಹಂತಕರು; ಸ್ಥಳೀಯರಿಂದ ತೀವ್ರ ಪ್ರತಿಭಟನೆ
ತೆರದ ಸಂಪ್ಗೆ ಬಿದ್ದ ಬಾಲಕಿ
ಹೀಗೆ ಹುಡುಕಾಟ ನಡೆಸುತ್ತಾ ತೆರದ ಸಂಪ್ನಲ್ಲಿ ನೋಡಿದಾಗ ಮಗು ಚಪ್ಪಲಿಯೊಂದು ನೀರಿನ ಮೇಲೆ ತೇಲುತ್ತಿತ್ತು. ಈ ಹಿನ್ನಲೆ ಎದುರು ಮನೆಯ ಚಂದ್ರಶೇಖರ್ ಎಂಬುವವರು ನೀರಿಗಿಳಿದು ನೋಡಿದಾಗ ಮಗು ಸಂಪ್ನಲ್ಲಿ ತೇಲುತ್ತಿತ್ತು. ಕೂಡಲೇ ಸ್ಥಳಕ್ಕೆ ಬಂದ ಬಾಗಲಗುಂಟೆ ಪೊಲೀಸರು, ಸ್ಥಳೀಯರ ನೆರವಿನಿಂದ ಮಗುವಿನ ಮೃತದೇಹವನ್ನು ಹೊರಕ್ಕೆ ತೆಗೆದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಹಿನ್ನೆಲೆ ಬಿಹಾರಿ ಬ್ಯಾಚುಲರ್ ಹುಡುಗರು ಸ್ಥಳದಿಂದ ಪರಾರಿಯಾಗಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ