ಮೈಸೂರು: ವರದಕ್ಷಿಣೆ ಆಸೆಗೆ ಪತ್ನಿಯನ್ನೇ ಕೊಲೆ ಮಾಡಿದ್ನಾ ಪೊಲೀಸ್ ಪೇದೆ?
ಮೈಸೂರು: ಆತ ಪೊಲೀಸ್ ಪೇದೆ ಕಾನೂನು ಎಲ್ಲಾ ಗೊತ್ತಿದ್ದವನು. ವರದಕ್ಷಿಣೆ ತೆಗೆದುಕೊಳ್ಳುವುದು ಕಾನೂನು ಬಾಹಿರ ಎಂದು ತಿಳಿದಿದ್ದವನು. ಇಷ್ಟಾದರೂ ವರದಕ್ಷಿಣೆ ಆಸೆಗೆ ಪತ್ನಿಯನ್ನೇ ಬಲಿ ಕೊಟ್ಟಿದ್ದಾನೆ. ಈ ಫೋಟೋದಲ್ಲಿರುವ ಈ ಜೋಡಿಯನ್ನ ನೋಡಿದ್ರೆ ಆಹಾ.. ಎಂತಾ ಅದ್ಬುತ ಜೋಡಿ ಅನಿಸದೇ ಇರಲಾರದು. ಜೊತೆಗೆ ಒಂದು ಮಗು. ಸುಖಿ ಸಂಸಾರಕ್ಕೆ ಮತ್ತಿನ್ನೇನು ಬೇಕು ಹೇಳಿ. ಆದ್ರೆ ಕೆಲವರಿಗೆ ದುರಾಸೆಯ ಪೆಡಂಭೂತ ತಲೆ ಹೊಕ್ಕಿರುತ್ತದೆ. ಆಗಲೇ ಆಗಬಾರದು ಆಗಿ ಹೋಗುತ್ತವೆ. ಅಂದ್ಹಾಗೆ ಇವರು ಶ್ರೀಧರ್-ಭಾರತಿ ದಂಪತಿ. ಮೈಸೂರು ಜಿಲ್ಲೆ ಕೆ.ಆರ್.ನಗರದ […]
ಮೈಸೂರು: ಆತ ಪೊಲೀಸ್ ಪೇದೆ ಕಾನೂನು ಎಲ್ಲಾ ಗೊತ್ತಿದ್ದವನು. ವರದಕ್ಷಿಣೆ ತೆಗೆದುಕೊಳ್ಳುವುದು ಕಾನೂನು ಬಾಹಿರ ಎಂದು ತಿಳಿದಿದ್ದವನು. ಇಷ್ಟಾದರೂ ವರದಕ್ಷಿಣೆ ಆಸೆಗೆ ಪತ್ನಿಯನ್ನೇ ಬಲಿ ಕೊಟ್ಟಿದ್ದಾನೆ.
ಈ ಫೋಟೋದಲ್ಲಿರುವ ಈ ಜೋಡಿಯನ್ನ ನೋಡಿದ್ರೆ ಆಹಾ.. ಎಂತಾ ಅದ್ಬುತ ಜೋಡಿ ಅನಿಸದೇ ಇರಲಾರದು. ಜೊತೆಗೆ ಒಂದು ಮಗು. ಸುಖಿ ಸಂಸಾರಕ್ಕೆ ಮತ್ತಿನ್ನೇನು ಬೇಕು ಹೇಳಿ. ಆದ್ರೆ ಕೆಲವರಿಗೆ ದುರಾಸೆಯ ಪೆಡಂಭೂತ ತಲೆ ಹೊಕ್ಕಿರುತ್ತದೆ. ಆಗಲೇ ಆಗಬಾರದು ಆಗಿ ಹೋಗುತ್ತವೆ. ಅಂದ್ಹಾಗೆ ಇವರು ಶ್ರೀಧರ್-ಭಾರತಿ ದಂಪತಿ. ಮೈಸೂರು ಜಿಲ್ಲೆ ಕೆ.ಆರ್.ನಗರದ ನಿವಾಸಿಗಳು. ಶ್ರೀಧರ್, ಡಿಎಆರ್ ಪೊಲೀಸ್. ಇನ್ನು ಆತನ ಪತ್ನಿ ಭಾರತಿ ಈಗ ನೆನಪು ಮಾತ್ರ. ಪತ್ನಿ ಭಾರತಿಯನ್ನು ಶ್ರೀಧರ್ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.
6 ವರ್ಷಗಳ ಹಿಂದೆ ಶ್ರೀಧರ್ ಹಾಗೂ ಭಾರತಿ ನಡುವೆ ವಿವಾಹವಾಗಿತ್ತು. ಮದುವೆ ಸಮಯದಲ್ಲಿ ಶ್ರೀಧರ್‌ಗೆ 200 ಗ್ರಾಂ ಚಿನ್ನ, 3 ಲಕ್ಷ ನಗದು ಹಾಗೂ ಒಂದು ಬೈಕ್ ವರದಕ್ಷಿಣೆಯಾಗಿ ನೀಡಲಾಗಿತ್ತು. ಪ್ರಾರಂಭದಲ್ಲಿ ಇಬ್ಬರು ಸಾಕಷ್ಟು ಅನ್ಯೋನ್ಯವಾಗಿದ್ದರು. ಎರಡು ವರ್ಷಗಳಿಂದ ಇಬ್ಬರ ನಡುವೆ ನಿವೇಶನಕ್ಕಾಗಿ ಗಲಾಟೆ ಆರಂಭವಾಗಿತ್ತು. ಶ್ರೀಧರ್ ಭಾರತಿ ಮನೆಯವರಿಗೆ ನಿವೆಶನ ನೀಡುವಂತೆ ಪೀಡಿಸುತ್ತಿದ್ದನಂತೆ.
ಸೈಟ್ ವಿಚಾರವಾಗಿ ದಂಪತಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತಂತೆ. ಹೀಗಿರುವಾಗ ಮೇ 25 ರಂದು ಸುಟ್ಟ ಸ್ಥಿತಿಯಲ್ಲಿ ಭಾರತಿ ಪತ್ತೆಯಾಗಿದ್ದಾರೆ. ಭಾರತಿಯನ್ನು ಪತಿ ಶ್ರೀಧರ್, ಮಾವ ಶಂಕರ್, ಅತ್ತೆ ನಿಂಗಜ ಸುಟ್ಟಿ ಹಾಕಿದ್ದಾರೆ ಅನ್ನೋದು ಭಾರತಿ ಪೋಷಕರ ಆರೋಪ. ಗಾಯಗೊಂಡಿದ್ದ ಭಾರತಿಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಭಾರತಿ ಸಾವನ್ನಪ್ಪಿದ್ದಾರೆ
ಇನ್ನು ಘಟನೆ ಬಳಿಕ ಶ್ರೀಧರ್ ಹಾಗೂ ಅವರ ಮನೆಯವರು ಪರಾರಿಯಾಗಿದ್ದಾರೆ. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದೆಲ್ಲಾ ಏನೇ ಇರಲಿ ಕಾನೂನು ಕಾಪಾಡಬೇಕಾದವರೇ ವರದಕ್ಷಿಣೆ ಆಸೆಗಾಗಿ ಈ ರೀತಿ ಮಾಡಿರೋದು ನಿಜಕ್ಕೂ ದುರಂತವೇ ಸರಿ.