ಫುಟ್‌ ಪಾತ್ ಒತ್ತುವರಿ ಮಾಡಿ ಗ್ರಾಹಕರಿಗೆ ಕೂತು ತಿನ್ನಲು ಗಾರ್ಡನ್ ನಿರ್ಮಾಣ ಮಾಡಿದ ಬೇಕರಿ ಮಾಲೀಕ! ಇದಕ್ಕೆ ಸಾರ್ವಜನಿಕರ ಆಕ್ರೋಶ

ಬೇಕರಿ ಮಾಲೀಕ ಇಷ್ಟು ರಾಜಾರೋಷವಾಗಿ ಪುಟ್ ಪಾತ್ ಅನ್ನು ಅತಿಕ್ರಮಿಸಿಕೊಂಡಿದ್ದರು ಕೂಡ ಸ್ಥಳೀಯ ಪಾಲಿಕೆ ಸದಸ್ಯರಾಗಲಿ, ವಲಯ ಅಧಿಕಾರಿಗಳಾಗಲಿ ಇತ್ತ ತಿರುಗಿ ನೋಡಿಲ್ಲ. ಅಧಿಕಾರಿಗಳ, ಸ್ಥಳೀಯ ಪಾಲಿಕೆ ಸದಸ್ಯರ ಜಾಣ ಕುರುಡು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಫುಟ್‌ ಪಾತ್ ಒತ್ತುವರಿ ಮಾಡಿ ಗ್ರಾಹಕರಿಗೆ ಕೂತು ತಿನ್ನಲು ಗಾರ್ಡನ್ ನಿರ್ಮಾಣ ಮಾಡಿದ ಬೇಕರಿ ಮಾಲೀಕ! ಇದಕ್ಕೆ ಸಾರ್ವಜನಿಕರ ಆಕ್ರೋಶ
ಪುಟ್‌ ಪಾತ್ ಒತ್ತುವರಿ ಜಾಗದಲ್ಲಿ ನಿರ್ಮಾಣವಾದ ಗಾರ್ಡನ್
Updated By: ಆಯೇಷಾ ಬಾನು

Updated on: Jul 07, 2022 | 5:19 PM

ಮೈಸೂರು: ಪುಟ್‌ ಪಾತ್(Footpath) ಒತ್ತುವರಿ ಮಾಡಿ ಗಾರ್ಡನ್ ನಿರ್ಮಾಣ ಮಾಡಿಕೊಂಡಿರುವ ಘಟನೆ ಮೈಸೂರಿನ‌ ಸಿದ್ಧಾರ್ಥ ಬಡವಾಣೆಯಲ್ಲಿ ನಡೆದಿದೆ. ತನ್ನ ವ್ಯಾಪಾರಕ್ಕಾಗಿ ಆರೋಮ ಬೇಕರಿ ಮಾಲೀಕ(Bakery owner) ಫುಟ್ ಪಾತ್ ಒತ್ತುವರಿ ಮಾಡಿಕೊಂಡು ಬೇಕರಿ ಮುಂಭಾಗ ಕಲ್ಲಿನ ಕುರ್ಚಿ ಹಾಗೂ ಕಲ್ಲಿನ ಟೇಬಲ್ ಕಟ್ಟಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದು ಕೂಡಲೇ ಫುಟ್ ಫಾತ್ ತೆರೆವುಗೊಳಿಸುವಂತೆ ಒತ್ತಾಯ ಮಾಡಿದ್ದಾರೆ.

ಮೈಸೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಸಿದ್ಧಾರ್ಥ ನಗರದಲ್ಲಿರುವ ಆರೋಮಾ ಬೇಕರಿ ಮಾಲೀಕ ಬೇಕರಿ ಮುಂಭಾಗ ಪಾದಚಾರಿ ರಸ್ತೆಯಲ್ಲಿ ಗಾರ್ಡನ್ ನಿರ್ಮಿಸಿದ್ದಾರೆ. ವಿಶಾಲವಾದ ಪುಟ್ ಪಾತ್ ಮೇಲೆ ಬಣ್ಣ ಬಣ್ಣದ ಕಲ್ಲನ್ನು ಹೊದಿಸಿ ಅದರ ಮೇಲೆ ಕಲ್ಲಿನಲ್ಲೇ ಡಿಸೈನ್ ಡಿಸೈನ್ ಕುರ್ಚಿ ಹಾಗೂ ಟೇಬಲ್ ಮಾಡಿಸಿ ಅದನ್ನು ಮಟ್ಟಸವಾಗಿ ತನ್ನ ಅಂಗಡಿಗಾಗಿ ಬಳಸುತ್ತಿದ್ದಾರೆ. ಅಷ್ಟೆ ಅಲ್ಲ ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದೆ ಎಂದು ಖಡಕ್ ಆಗಿ ಬೋರ್ಡ್ ಕೂಡ ಹಾಕಿದ್ದಾರೆ. ಇದನ್ನೂ ಓದಿ: ಸಿಧು ಮಾದರಿಯಲ್ಲಿಯೇ ಹತ್ಯೆ ಮಾಡಲಾಗುವುದು ಎಂದು ನಿರ್ಮಾಪಕ ಸಂದೀಪ್ ಸಿಂಗ್ ಗೆ ಬೆದರಿಕೆ
mys Bakery owner Occupied footpath

ಈ ದಾರಿಯಲ್ಲಿ ಸಂಚರಿಸುವ ಜನ ಇದನ್ನು ಪ್ರಶ್ನೆ ಮಾಡಿದರೆ ಬೇಕರಿ ಮಾಲೀಕ ಮಾತ್ರ ತಲೆ‌ ಕೆಡಿಸಿಕೊಂಡಿಲ್ಲ. ಡೋಂಟ್ ಕೇರ್ ಮಾಸ್ಟರ್ ರೀತಿ ವರ್ತಿಸುತ್ತಿದ್ದಾನೆ. ಇನ್ನು ಬೇಕರಿ ಮಾಲೀಕ ಇಷ್ಟು ರಾಜಾರೋಷವಾಗಿ ಪುಟ್ ಪಾತ್ ಅನ್ನು ಅತಿಕ್ರಮಿಸಿಕೊಂಡಿದ್ದರು ಕೂಡ ಸ್ಥಳೀಯ ಪಾಲಿಕೆ ಸದಸ್ಯರಾಗಲಿ, ವಲಯ ಅಧಿಕಾರಿಗಳಾಗಲಿ ಇತ್ತ ತಿರುಗಿ ನೋಡಿಲ್ಲ. ಅಧಿಕಾರಿಗಳ, ಸ್ಥಳೀಯ ಪಾಲಿಕೆ ಸದಸ್ಯರ ಜಾಣ ಕುರುಡು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪುಟ್ ಪಾತ್ ಮೇಲೆ ಬಡ ವ್ಯಾಪಾರಿ ಟೀ ಅಂಗಡಿ ಇಟ್ಟರೆ, ತರಕಾರಿ ವ್ಯಾಪಾರ ಮಾಡಿದ್ರೆ ಅದನ್ನು ರಾತ್ರೋರಾತ್ರಿ ತೆರವು ಮಾಡುವ ಮೈಸೂರು ಮಹಾ ನಗರ ಪಾಲಿಕೆಗೆ ಇಂತಹ ಬಹು ದೊಡ್ಡ ಒತ್ತುವರಿ ಮಾತ್ರ ಕಾಣದೇ ಇರೋದು ಮಾತ್ರ ದುರಂತವೇ ಸರಿ.

ವರದಿ: ರಾಮ್, ಟಿವಿ9 ಮೈಸೂರು

Published On - 5:19 pm, Thu, 7 July 22