ಮೈಸೂರು: ಬೆಂಗಳೂರಿನ ಯುವಕ ಅತ್ಯಾಚಾರಿಗಳ ವಿರುದ್ಧ ಏಕಾಂಗಿಯಾಗಿ ಸೈಕಲ್ ಜಾಥಾ ನಡೆಸುತ್ತಿದ್ದಾರೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಏಕಾಂಗಿಯಾಗಿ ಸುಮಾರು 3,500 ಕಿಲೋಮೀಟರ್ ಸೈಕಲ್ ಜಾಥಾ ನಡೆಸುತ್ತಿರುವ ಕಿರಣ್ ಈಗಾಗಲೇ ರಾಜ್ಯದ 26 ಜಿಲ್ಲೆಗಳನ್ನು ಸುತ್ತಿದ್ದಾರೆ. ಇಂದು (ನ.15) ಮೈಸೂರು ಜಿಲ್ಲಾಧಿಕಾರಿಗೆ ಕಿರಣ್ ಮನವಿ ಸಲ್ಲಿಸಿದ್ದಾರೆ. ಮಹಿಳಾ ದೌರ್ಜನ್ಯ ತಡೆಗೆ ಆಗ್ರಹಿಸಿ ಸೈಕಲ್ ಜಾಥಾ ನಡೆಸುತ್ತಿರುವ ಕಿರಣ್ ಮೂಲತಃ ಬೆಂಗಳೂರಿನ ಬನ್ನೇರುಘಟ್ಟ ನಿವಾಸಿ.
ಕಿರಣ್ ಸತತ 86 ದಿನಗಳಿಂದ ಸೈಕಲ್ ತುಳಿದು ಪ್ರತಿ ಜಿಲ್ಲೆಗೂ ತೆರಳಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಮನವಿ ಸಲ್ಲಿಸುತ್ತಿದ್ದಾರೆ. ಅತ್ಯಾಚಾರ ಪ್ರಕರಣದಿಂದ ಕಿರಣ್ ಮನನೊಂದು ಜಾಗೃತಿಗೆ ಮುಂದಾಗಿದ್ದಾರೆ. ಲಾಕ್ಡೌನ್ ಬಳಿಕ ಜಾಗೃತಿ ಯಾತ್ರೆ ಆರಂಭಿಸಿದ್ದಾರೆ. ಸದ್ಯ ಕರ್ನಾಟಕದ 26 ಜಿಲ್ಲೆಗಳನ್ನು ತಲುಪಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಇನ್ನು ಉಳಿದ ಜಿಲ್ಲೆಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸಲಿದ್ದಾರೆ. ಕಿರಣ್ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಲು ಮುಖ್ಯಮಂತ್ರಿ, ಪ್ರಧಾನ ಮಂತ್ರಿಗೂ ಮನವಿ ಸಲ್ಲಿಸಿದ್ದಾರೆ.
ಇನ್ನು 25ನೇ ಜಿಲ್ಲೆಯಾಗಿ ನವೆಂಬರ್ 10ಕ್ಕೆ ಹಾಸನಕ್ಕೆ ತೆರಳಿದ್ದರು. ಡಿಸಿ ಕಛೇರಿಗೆ ಬಂದು ಮನವಿ ಸಲ್ಲಿಸಿದ್ದರು. ಕಿರಣ್ ಪ್ರಥಮ ಬಿಎ ಓದುತ್ತಿದ್ದಾರೆ. ಇತ್ತೀಚೆಗೆ ಅತ್ಯಾಚಾರ ಪ್ರಕರಣ ಹೆಚ್ಚುತ್ತಿರುವ ಕಾರಣ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಆಗ್ರಹಿಸಿ ಸೈಕಲ್ ಜಾಥಾ ನಡೆಸುತ್ತಿದ್ದಾರೆ.
ಇದನ್ನೂ ಓದಿ
ವಿಕ್ಕಿ ಕೌಶಲ್ಗಿಂತ ಕತ್ರಿನಾ ಕೈಫ್ ಎಷ್ಟು ವರ್ಷ ದೊಡ್ಡವರು? ಮದುವೆಗೆ ಅಡ್ಡಿ ಆಗಲಿಲ್ಲ ವಯಸ್ಸಿನ ಅಂತರ
Cryptocurrency: ಕ್ರಿಪ್ಟೋಕರೆನ್ಸಿ ಕುರಿತು ತಜ್ಞರ ಜೊತೆ ಇಂದು ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ
Published On - 2:14 pm, Mon, 15 November 21