ವಿಕ್ಕಿ ಕೌಶಲ್​ಗಿಂತ ಕತ್ರಿನಾ ಕೈಫ್​ ಎಷ್ಟು ವರ್ಷ ದೊಡ್ಡವರು? ಮದುವೆಗೆ ಅಡ್ಡಿ ಆಗಲಿಲ್ಲ ವಯಸ್ಸಿನ ಅಂತರ

TV9kannada Web Team

TV9kannada Web Team | Edited By: Rajesh Duggumane

Updated on: Nov 15, 2021 | 1:35 PM

ಕತ್ರಿನಾ ಕೈಫ್​ ಅವರು ವಿಕ್ಕಿ ಕೌಶಲ್​ ನಟನೆಯನ್ನು ನೋಡಿ ಮೆಚ್ಚಿಕೊಂಡಿದ್ದರು. ಅವರ ಜತೆ ನಟಿಸಬೇಕು ಎನ್ನುವ ಬಯಕೆಯನ್ನೂ ವ್ಯಕ್ತಪಡಿಸಿದ್ದರು. ಇದಾದ ನಂತರದಲ್ಲಿ ಇಬ್ಬರೂ ಭೇಟಿ ಆದರು. ಗೆಳೆತನ ಪ್ರೀತಿಗೆ ತಿರುಗಿತ್ತು.

ವಿಕ್ಕಿ ಕೌಶಲ್​ಗಿಂತ ಕತ್ರಿನಾ ಕೈಫ್​ ಎಷ್ಟು ವರ್ಷ ದೊಡ್ಡವರು? ಮದುವೆಗೆ ಅಡ್ಡಿ ಆಗಲಿಲ್ಲ ವಯಸ್ಸಿನ ಅಂತರ
ವಿಕ್ಕಿ ಕೌಶಲ್, ಕತ್ರಿನಾ ಕೈಫ್

ಮುದವೆಯಲ್ಲಿ ಗಂಡು ದೊಡ್ಡವನಾಗಿರಬೇಕು ಮತ್ತು ಮಹಿಳೆ ವಯಸ್ಸಿನಲ್ಲಿ ಚಿಕ್ಕವಳಾಗಿರಬೇಕು. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ದತಿ. ಇದಕ್ಕೆ ವೈಜ್ಞಾನಿಕ ಕಾರಣಗಳು ಹಲವಿದೆ. ಆದರೆ, ಇತ್ತೀಚೆಗೆ ಕಾಲ ಬದಲಾಗಿದೆ. ವಯಸ್ಸಿನಲ್ಲಿ ಹಿರಿಯರಾದ ಮಹಿಳೆಯರನ್ನು ಪುರುಷರು ಮದುವೆ ಆದ ಸಾಕಷ್ಟು ಉದಾಹರಣೆ ಇದೆ. ಈ ಸಾಲಿಗೆ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್ (Katrina Kaif And Vicky Kaushal Marriage) ಸೇರ್ಪಡೆ ಆಗುವ ಕಾಲ ಸಮೀಪಿಸಿದೆ​. ಡಿಸೆಂಬರ್​ ತಿಂಗಳಲ್ಲಿ ಮದುವೆ ಆಗುತ್ತಿರುವ ಈ ದಂಪತಿ ವಯಸ್ಸಿನ ಅಂತರದ ಬಗ್ಗೆ ಬಹಳ ಚರ್ಚೆಗಳು ನಡೆದಿವೆ. ಆದರೆ, ಈ ಬಗ್ಗೆ ಜೋಡಿ ತಲೆ ಕೆಡಿಸಿಕೊಂಡಿಲ್ಲ. ಹಾಗಾದರೆ, ಇಬ್ಬರ ವಯಸ್ಸಿನ ಅಂತರ ಎಷ್ಟು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕತ್ರಿನಾ ಕೈಫ್​ ಅವರು ವಿಕ್ಕಿ ಕೌಶಲ್​ ನಟನೆಯನ್ನು ನೋಡಿ ಮೆಚ್ಚಿಕೊಂಡಿದ್ದರು. ಅವರ ಜತೆ ನಟಿಸಬೇಕು ಎನ್ನುವ ಬಯಕೆಯನ್ನೂ ವ್ಯಕ್ತಪಡಿಸಿದ್ದರು. ಇದಾದ ನಂತರದಲ್ಲಿ ಇಬ್ಬರೂ ಭೇಟಿ ಆದರು. ಗೆಳೆತನ ಪ್ರೀತಿಗೆ ತಿರುಗಿತ್ತು. ಆದರೆ, ಇವರ ನಡುವೆ ವಯಸ್ಸಿನ ಅಂತರದ ಪ್ರಶ್ನೆ ಮೂಡಿಯೇ ಇಲ್ಲ. ಪ್ರೀತಿ ಪ್ರೇಮದ ವಿಚಾರದಲ್ಲಿ ಕತ್ರಿನಾ ಕೈಫ್​ ಈ ಮೊದಲು ಸಾಕಷ್ಟು ನೊಂದಿದ್ದರು. ಕೊನೆಗೂ ಅವರು ಪ್ರೀತಿಸಿಯೇ ಮದುವೆ ಆಗುತ್ತಿದ್ದಾರೆ.

ಕತ್ರಿನಾ ಹಾಗೂ ವಿಕ್ಕಿ ನಡುವಿನ ವಯಸ್ಸಿನ ಅಂತರ 5 ವರ್ಷ. ವಿಕ್ಕಿ ಕೌಶಲ್​ ಹುಟ್ಟಿದ್ದು 1988 ಮೇ 16ರಂದು. ಈಗ ಅವರ ವಯಸ್ಸು 33 ವರ್ಷ. ಕತ್ರಿನಾ ಹುಟ್ಟಿದ್ದು 1983 ಜುಲೈ 16ರಂದು. ಈ ಮೂಲಕ ಇಬ್ಬರ ನಡುವಿನ ವಯಸ್ಸಿನ ಅಂತರ ಐದು ವರ್ಷ. ಆದಾಗ್ಯೂ ಇಬ್ಬರೂ ಮದುವೆ ಆಗುತ್ತಿದ್ದಾರೆ. ಈ ವಿಚಾರದಲ್ಲಿ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇದನ್ನು ಮಾದರಿಯಾಗಿ ಇಟ್ಟುಕೊಂಡಿದ್ದಾರೆ.

ವಿಕ್ಕಿ ಹಿಂದು, ಕತ್ರಿನಾ ಕೈಫ್​ ಮುಸ್ಲಿಂ. ಈ ಕಾರಣಕ್ಕೆ ಎರಡೂ ಧರ್ಮದ ಪ್ರಕಾರ ಮದುವೆ ಕಾರ್ಯ ನಡೆಯಲಿದೆ ಎನ್ನಲಾಗುತ್ತಿದೆ. ವಿವಾಹ ಕಾರ್ಯಕ್ರಮಕ್ಕೆ ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ಸಕಲ ಸಿದ್ಧತೆ ನಡೆದಿದ್ದು, ಬಾಲಿವುಡ್​ ಸೆಲೆಬ್ರಿಟಿಗಳು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಸೆಲೆಬ್ರಿಟಿ ಮದುವೆ ಆದ ಕಾರಣ ಸಾಕಷ್ಟು ಭದ್ರತೆ ಕೂಡ ಒದಗಿಸಲಾಗುತ್ತಿದೆ.

ಕೊವಿಡ್​ ಕಡಿಮೆ ಆಗಿದೆ. ಈ ಕಾರಣಕ್ಕೆ ಮದುವೆ ಅದ್ದೂರಿಯಾಗಿ ನಡೆಯಲಿದೆ. ಈ ಹೈ ಪ್ರೊಫೈಲ್​ ಕಲ್ಯಾಣಕ್ಕೆ ಕುಟುಂಬದವರು, ಆಪ್ತರು, ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ಕರಣ್​ ಜೋಹರ್, ಅಲಿ ಅಬ್ಬಾಸ್​ ಜಫರ್​, ಕಬೀರ್​ ಖಾನ್​, ರೋಹಿತ್​ ಶೆಟ್ಟಿ, ಸಿದ್ದಾರ್ಥ್​ ಮಲ್ಹೋತ್ರಾ, ಕಿಯಾರಾ ಆಡ್ವಾಣಿ, ವರುಣ್​ ಧವನ್​ ಹಾಗೂ ಅವರ ಪತ್ನಿ ನತಾಶಾ ದಲಾಲ್​ ಸೇರಿ ಅನೇಕರಿಗೆ ಆಮಂತ್ರಣ ಹೋಗಿದೆ.

ಇದನ್ನೂ ಓದಿ: ಕತ್ರಿನಾ-ವಿಕ್ಕಿ ವಿವಾಹ: ವೈರಲ್​ ಆಗಿದ್ದ ಸಲ್ಮಾನ್​-ಕತ್ರಿನಾ ಮದುವೆ ವಿಡಿಯೋದ ಅಸಲಿಯತ್ತೇನು?

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada