ಮೈಸೂರಿನಲ್ಲಿ ಯದುವೀರ್ ಆ್ಯಕ್ಟಿವ್; ಇನ್ನೂ ಅಂತಿಮವಾಗದ ಕೈ ಅಭ್ಯರ್ಥಿ, ಯತೀಂದ್ರ ಸ್ಪರ್ಧೆಗೆ ಹೆಚ್ಚಿದ ಒತ್ತಡ

| Updated By: Rakesh Nayak Manchi

Updated on: Mar 16, 2024 | 8:18 AM

ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರ ಮನೆಗಳಿಗೆ ಭೇಟಿ ನೀಡಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ನಿನ್ನೆ ಕೊಡಗು ಪ್ರವಾಸ ಕೈಗೊಂಡಿದ್ದ ಯದುವೀರ್, ಕಾರ್ಯಕರ್ತರ ಜೊತೆ ಊಟ ಮಾಡಿದ್ದರು.

ಮೈಸೂರಿನಲ್ಲಿ ಯದುವೀರ್ ಆ್ಯಕ್ಟಿವ್; ಇನ್ನೂ ಅಂತಿಮವಾಗದ ಕೈ ಅಭ್ಯರ್ಥಿ, ಯತೀಂದ್ರ ಸ್ಪರ್ಧೆಗೆ ಹೆಚ್ಚಿದ ಒತ್ತಡ
ಮೈಸೂರಿನಲ್ಲಿ ಯದುವೀರ್ ಆ್ಯಕ್ಟಿವ್; ಇನ್ನೂ ಅಂತಿಮವಾಗದ ಕೈ ಅಭ್ಯರ್ಥಿ, ಯತೀಂದ್ರ ಸ್ಪರ್ಧೆಗೆ ಹೆಚ್ಚಿದ ಒತ್ತಡ
Follow us on

ಮೈಸೂರು, ಮಾ.16: ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರ ಮನೆಗಳಿಗೆ ಭೇಟಿ ನೀಡಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಟಿಕೆಟ್ ಘೋಷಣೆಯಾದ ಆರಂಭದಲ್ಲೇ ಫುಲ್ ಆ್ಯಕ್ಟಿವ್ ಆದ ಯದುವೀರ್, ಮೊದಲ ದಿನ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಹಾಗೂ ಮಾಜಿ ಸಚಿವ ಎಸ್.ಎ ರಾಮದಾಸ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು. ನಿನ್ನೆ ಕೊಡಗು ಪ್ರವಾಸ ಮಾಡಿದ್ದ ಯದುವೀರ್ ಅವರು ಕಾರ್ಯಕರ್ತರೊಂದಿಗೆ ಊಟ ಮಾಡಿದ್ದರು.

ಇದನ್ನೂ ಓದಿ: ಯದುವೀರ್​ಗೆ ವೋಟ್​ ಹಾಕೋದು ಚಾಮುಂಡೇಶ್ವರಿಗೆ ಹೂವು ಹಾಕಿದಂತೆ; ಶಾಸಕ ಜಿಟಿ ದೇವೇಗೌಡ

ಅಡಿಕೆ ತಟ್ಟೆಯಲ್ಲಿ ಊಟ ಮಾಡಿದ್ದ ಯದುವೀರ್, ನಂತರ ಜೆಡಿಎಸ್ ನಾಯಕ ಜಿ.ಟಿ.ದೇವೇಗೌಡ ಅವರನ್ನು ಭೇಟಿಯಾಗಿ ಸಹಕಾರ ಕೋರಿದ್ದರು. ಫುಟ್ ಪಾತ್​ನಲ್ಲಿ ಕಾರ್ಯಕರ್ತರ ಜೊತೆ ಟೀ ಕುಡಿದು ಗಮನ ಸೆಳೆದಿದ್ದರು. ಬಹಳ ಉತ್ಸುಕತೆಯಿಂದ ಚುನಾವಣೆಯಲ್ಲಿ ಓಡಾಟ ನಡೆಸುತ್ತಿರುವ ರಾಜ ವಂಶಸ್ಥ ಯದುವೀರ್, ತಮ್ಮ ನಡೆಯ ಮೂಲಕ ಜನರ ಮಧ್ಯೆ ಇರುತ್ತೇನೆಂಬ ಸಂದೇಶ ರವಾನಿಸಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಸ್ಪರ್ಧೆಗೆ ಒತ್ತಡ

ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಚಾರ ಕಾರ್ಯ ಆರಂಭಿಸಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಸರತ್ತು ಮುಂದುವರಿದಿದೆ. ನಿನ್ನೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸುವಂತೆ ಮುಖಂಡರು ಒತ್ತಾಯಿಸಿದ್ದಾರೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎದರು ಯತೀಂದ್ರ ಮಾತ್ರ ಪ್ರಬಲ ಅಭ್ಯರ್ಥಿಯಾಗಲಿದ್ದಾರೆ ಸಿದ್ದರಾಮಯ್ಯಗೆ ಕೈ ನಾಯಕರು ಮನದಟ್ಟು ಮಾಡುವ ಪ್ರಯತ್ನ ನಡೆಸಿದ್ದಾರೆ.

ಇಂದು ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಿರುವ ಸಿಎಂ ಸಿದ್ದರಾಮಯ್ಯ, ಅಂತಿಮ ಹಂತದಲ್ಲಿ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಅಲ್ಲದೆ, ಕೊನೇ ಕ್ಷಣದಲ್ಲಿ ಯತೀಂದ್ರ ಅವರನ್ನೇ ಕಣಕ್ಕಿಳಿಸಿದರೂ ಅಚ್ಚರಿ ಪಡಬೇಕಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ