ಮೈಸೂರು: ವಿಡಿಯೋ ಕಾಲ್ ಮಾಡಿ ಯುವಕನಿಗೆ ಯುವತಿಯಿಂದ ಬ್ಲ್ಯಾಕ್ಮೇಲ್ (Blackmail) ಮಾಡಿರುವಂತಹ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ನಡೆದಿದೆ. ವಾಸು ಬ್ಲ್ಯಾಕ್ಮೇಲ್ಗೊಳಗಾದ ಯುವಕ. ವಾಸುಗೆ ಹಣ ನೀಡುವಂತೆ ಯುವತಿ ಬ್ಲ್ಯಾಕ್ಮೇಲ್ ಮಾಡಿದ್ದು, ವಿಡಿಯೋ ಕಾಲ್ಗೂ ಮೊದಲು ಮೆಸೇಜ್ ಮಾಡಿ ತನ್ನನ್ನು ಅಮೃತಾ ಎಂದು ಯುವತಿ ಪರಿಚಯ ಮಾಡಿಕೊಂಡಿದ್ದಾಳೆ. ಬಳಿಕ ಬೆಳಗ್ಗೆ 9 ಗಂಟೆ ಸುಮಾರಿಗೆ ವಿಡಿಯೋ ಕಾಲ್ ಮಾಡಿ ಯುವತಿ ನಗ್ನಳಾಗಿದ್ದಾಳೆ. ಕೂಡಲೇ ವಾಸು ವಿಡಿಯೋ ಕಾಲ್ ಕಟ್ ಮಾಡಿದ್ದಾನೆ. ನಂತರ ವಿಡಿಯೋ ಕಾಲ್ ರೆಕಾರ್ಡ್ ಕಳುಹಿಸಿದ ಯುವತಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಹಿನ್ನೆಲೆಯಲ್ಲಿ ಮೈಸೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಯುವಕ ವಾಸು ದೂರು ದಾಖಲು ಮಾಡಿದ್ದಾರೆ.
ಯುವಕ ನೀಡಿದ ದೂರು ಹೀಗಿದೆ:
ದಿನಾಂಕ: 21.08.2022 ರಂದು ಅರ್ಜಿದಾರರಾದ ವಾಸು ಕೆ.ಳಗಟ್ಟಿ ಗ್ರಾಮ, ಬಿಳಿಕೆರೆ ಹೋಬಳಿ, ಹುಣಸೂರು ತಾ|| ಅವರು ನೀಡಿದ ಅರ್ಜಿಯ ಸಾರಾರವೇನೆಂದರೆ, ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು, ನಾನು ಓಪಸಿ, ಪಿ.ಹೆಚ್ 2421 ಸ್ಮಾರ್ಟ್ ಮಾಡೆಲ್ ಬಳಕೆ ಮಾಡುತ್ತಿದ್ದೆ. ಇದರಲ್ಲಿ ವಾಟ್ಸಪ್ ಖಾತೆಯನ್ನು ತೆರೆದು ಬಳಕೆ ಮಾಡುತ್ತಿರುತ್ತೇನೆ. ಹಾಗೂ ನನ್ನ ಹೆಸರಿನಲ್ಲಿ vishu vasujan ಒಂದು ಫೇಸ್ ಬುಕ್ ಖಾತೆಯನ್ನು ಸಹ ತೆರೆದು ಬಳಕೆ ಮಾಡುತ್ತಿರುತ್ತೇನೆ, ದಿನಾಂಕ 21.08 2022 ರಂದು ಬೆಳಿಗ್ಗೆ 09.00 ಗಂಟೆ ಸಮಯದಲ್ಲಿ ಅಪರಿಚಿತ ನಂಬರ್ನಿಂದ ನನಗೆ ವಿಡಿಯೋ ಕಾಲ್ ಮಾಡಿದ್ದು, ನಾನು ರೀಸೀವ್ ಮಾಡಿದಾಗ ಯುವತಿಯ ಚಿತ್ರವಿದ್ದು, ನಂತರ ಆ ಯುವತಿಯು ನಗ್ನವಾಗದ ಕಾರಣ ನಾನು ತಕ್ಷಣ ಕಾಲ್ ಕಟ್ ಮಾಡಿದೇನು.
ಪದೇ ಪದೇ ವಿಡಿಯೋ ಕಾಲ್ ಮಾಡಿದ್ದು, ವಿಡಿಯೋ ಕಾಲ್ ರೀಸಿವ್ ಮಾಡಿದಾಗ ವಿಡಿಯೋ ರೆಕಾರ್ಡ್ ಮಾಡಿಕೊಂಡು ಅದರಲ್ಲೇ ಯುವತಿ ಇವರುವಂತೆ ಎಡಿಟ್ ಮಾಡಿ, ನಿಮ್ಮ ಫೇಸ್ ಬುಕ್ನಲ್ಲಿದ್ದ ಸ್ನೇಹಿತರಿಗೆ ವಾಟ್ಸಪ್ ಮಾಡಿ ನಿಮ್ಮ ಫೇಸ್ ಬುಕ್ ನ ಎಲ್ಲ, ಸ್ನೇಹಿತರಿಗೆ ಕಳುಹಿಸುತ್ತೇನೆ, ಇಲ್ಲವಾದರೆ ಹಣವನ್ನು ಹಾಕಿ ಎಂದು ಫೇಸ್ ಬುಕ್ ಸ್ನೇಹಿತರಿಗೆ ಸ್ಕ್ರೀನ್ ಶಾಟ್ ಕಳುಹಿಸಿ ತೊಂದರೆ ಕೊಡುತ್ತಿದ್ದು, ಸದರಿ ಮೇಲ್ಕಂಡ ವ್ಯಕ್ತಿಯನ್ನು ಪತ್ತೆ ಮಾಡಿ ಇನ್ನು ಮುಂದೆ ನನಗೆ ತೊಂದರೆ ಕೊಡದಂತೆ ಬಂದೋಬಸ್ತ್ ಮಾಡಿಸಿಕೊಡಿ ಎಂದು ಅರ್ಜಿದಾರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:21 am, Mon, 22 August 22