ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ಟೋಲ್ ಬಳಿ ಹೊತ್ತಿ ಉರಿದ BMW ಕಾರು

ಮೈಸೂರಿನ ಕಡಕೋಳ ಟೋಲ್ ಪ್ಲಾಜಾ ಬಳಿ ಬಿಎಂಡಬ್ಲ್ಯು ಕಾರು ಹೊತ್ತಿ ಉರಿದಿದೆ. ಟೋಲ್ ಪ್ಲಾಜಾದಲ್ಲಿ ಟೋಲ್​​​ ಕಟ್ಟುತ್ತಿದ್ದಾಗಲೇ ದಿಢೀರನೇ ಇಂಜಿನ್​​​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡ್ತಿದ್ದಂತೆ ಬೆಂಕಿ ಹೊತ್ತಿ ಉರಿದಿದೆ. ಇದ್ರಿಂದ ಟೋಲ್​​​​ ಪ್ಲಾಜಾದಲ್ಲಿ ಕೆಲಕಾಲ ಆತಂಕ ಮನೆ ಮಾಡಿತ್ತು.

ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ಟೋಲ್ ಬಳಿ ಹೊತ್ತಿ ಉರಿದ BMW ಕಾರು
ಟೋಲ್ ಬಳಿ ಹೊತ್ತಿ ಉರಿದ BMW ಕಾರು
Follow us
TV9 Web
| Updated By: ಆಯೇಷಾ ಬಾನು

Updated on: Oct 23, 2023 | 11:02 AM

ಮೈಸೂರು, ಅ.23: ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ಕಡಕೋಳ ಟೋಲ್ ಪ್ಲಾಜಾ ಬಳಿ ಭಾನುವಾರ ಬಿಎಂಡಬ್ಲ್ಯು ಕಾರು ಹೊತ್ತಿ ಉರಿದಿದೆ (Car Fire). ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನೋಡ ನೋಡುತ್ತಿದ್ದಂತೆ ಕಾರು ಹೊತ್ತಿ ಉರಿದಿದೆ. ಟೋಲ್‌ಗೇಟ್ ಬಳಿ ಕಾರು ಚಾಲಕ ಕಾರನ್ನು ನಿಲ್ಲಿಸಿದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಮೈಸೂರು ದಕ್ಷಿಣ ಠಾಣೆ ಪೊಲೀಸರು ತಿಳಿಸಿದ್ದಾರೆ. ಮೈಸೂರಿನ ಕುಟುಂಬವೊಂದು ನಂಜನಗೂಡಿನಿಂದ ವಾಪಸ್ಸಾಗುತ್ತಿದ್ದ ವೇಳೆ ಭಾನುವಾರ ಸಂಜೆ 6.30ರ ಸುಮಾರಿಗೆ ಈ ಘಟನೆ ನಡೆದಿದೆ. ಇದು ಆಕಸ್ಮಿಕ ಬೆಂಕಿ. ಘಟನೆಯಲ್ಲಿ ವಾಹನ ಜಖಂಗೊಂಡಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ

ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮನೆಯ ಛಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಯತ್ನಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಕಲ್ಲಪ್ಪ ಎಂಬುವರ ಮನೆಯಲ್ಲಿ ಅದೃಷ್ಟವಶಾತ್ ಯಾರೂ ಇಲ್ಲದ ವೇಳೆ ಅವಘಡ ಸಂಭವಿಸಿದೆ. 2 ಮೇಕೆಗಳು ಬಲಿಯಾಗಿವೆ.

ಇದನ್ನೂ ಓದಿ: ಆನ್‌ಲೈನ್ ಹೂಡಿಕೆಯಲ್ಲಿ 50 ಲಕ್ಷ ರೂ. ಕಳೆದುಕೊಂಡ ಸಾಫ್ಟ್‌ವೇರ್ ಇಂಜಿನಿಯರ್​​​

ಆನೇಕಲ್ ಬಳಿ ಭೀಕರ ಅಪಘಾತ

ಸ್ವಿಫ್ಟ್ ಕಾರು, ಬೊಲೆರೊ ವಾಹನದ ನಡುವೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಓರ್ವ ಗಾಯಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ. ಬೆಂಗಳೂರು-ಹೊಸೂರು ಹೆದ್ದಾರಿಯ ಅತ್ತಿಬೆಲೆ ಬಳಿ ದುರ್ಘಟನೆ ನಡೆದಿದೆ. ಇನ್ನೂ ಅತಿವೇಗವಾಗಿ ಬಂದ ಬೊಲೆರೊ ವಾಹನಕ್ಕೆ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಸ್ವಿಫ್ಟ್​ ಕಾರು ಛಿದ್ರವಾಗಿದೆ. ಇದ್ರಿಂದ ಚಂದಾಪುರದಿಂದ ಅತ್ತಿಬೆಲೆ ಮಾರ್ಗದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಟ್ರಕ್ಕಿಂಗ್​​ ತೆರಳಿದ್ದ ವೈದ್ಯರಿಗೆ ಕಾಲು ಮುರಿತ

ನೇತ್ರಾವತಿ ಪೀಕ್​ಗೆ ಟ್ರಕ್ಕಿಂಗ್‌ಗೆ ತೆರಳಿದ್ದ ವೈದ್ಯೆಯ ಕಾಲುಮುರಿತವಾಗಿದೆ. ಮೈಸೂರು ಮೂಲದ ವೈದ್ಯೆ ಮಾಧುರಿ ಎಂಬುವವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ರು. ನಿನ್ನೆ ಕಳಸ‌ ತಾಲೂಕಿನ ನೇತ್ರಾವತಿ ಪೀಕ್​ನಲ್ಲಿ ಟ್ರಕ್ಕಿಂಗ್ ಮುಗಿಸಿ ವಾಪಸ್ ಬರುವಾಗ ವೈದ್ಯರು ಜಾರಿಬಿದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಕಳಸ‌ದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ