ಅಕ್ಕನ ಮಗಳ ಮದುವೆಗೆ ಬಂದಿದ್ದ ಯೋಧನ ಕೊಲೆ, ನಿಶ್ಚಿತಾರ್ಥಕ್ಕೆ ಹೋಗಿ ಬರುತ್ತಿದ್ದ ಬಸ್ ಪಲ್ಟಿಯಾಗಿ ಇಬ್ಬರ ಸಾವು

ಬಸ್​ ಫುಲ್​​ ಆಗಿದ್ದರಿಂದ ಬಾಗಿಲಿನಲ್ಲಿ ನಿಂತಿದ್ದ ವಿದ್ಯಾರ್ಥಿ ಬಸ್​ನಿಂದ ಬಿದ್ದಿದ್ದಾರೆ. ಬಸ್​​ನಿಂದ ಬೀಳ್ತಿದ್ದಂತೆ ವಿದ್ಯಾರ್ಥಿ ಮೇಲೆ ಬಸ್ ಹರಿದಿದೆ. ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅಕ್ಕನ ಮಗಳ ಮದುವೆಗೆ ಬಂದಿದ್ದ ಯೋಧನ ಕೊಲೆ, ನಿಶ್ಚಿತಾರ್ಥಕ್ಕೆ ಹೋಗಿ ಬರುತ್ತಿದ್ದ ಬಸ್ ಪಲ್ಟಿಯಾಗಿ ಇಬ್ಬರ ಸಾವು
ಸಾಂದರ್ಭಿಕ ಚಿತ್ರ
Edited By:

Updated on: Dec 27, 2021 | 10:46 PM

ಮೈಸೂರು: ದಿನಸಿ ಅಂಗಡಿಯಲ್ಲಿ ಮೇಲ್ಛಾವಣಿ ತೆಗೆದು ಒಳಗೆ ಇಳಿದು ಕಳ್ಳತನ ಮಾಡಿದ ಘಟನೆ ಮೈಸೂರಿನ ಉದಯಗಿರಿಯ ಕಾವೇರಿ ಟ್ರೇಡರ್ಸ್‌ನಲ್ಲಿ ನಡೆದಿದೆ. 60 ಸಾವಿರ ನಗದು 2 ಮೊಬೈಲ್ ಪೋನ್ ಕಳ್ಳತನ ಮಾಡಲಾಗಿದೆ. ಕಳ್ಳತನದ ಕೃತ್ಯ ಸಿಸಿ ಕ್ಯಾಮೆರದಲ್ಲಿ ಸೆರೆ ಆಗಿದೆ. ಮೇಲ್ಚಾವಣಿಯಿಂದ ಕೆಳಗೆ ಇಳಿದ ಬಂದ ದೃಶ್ಯ ಸೆರೆ ಆಗಿದೆ. ಸ್ಥಳಕ್ಕೆ ಉದಯಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರು: ಬಸ್ ತಡೆದು ವಿದ್ಯಾರ್ಥಿಗಳಿಂದ ಪ್ರತಿಭಟನೆ
ಕೆ.ಆರ್. ನಗರ ತಾಲೂಕಿನ ಹರದನಹಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಲಾಗಿದೆ. ವಿದ್ಯಾರ್ಥಿಗಳಿದ್ದಾರೆಂಬ ಕಾರಣಕ್ಕೆ ಬಸ್ ನಿಲ್ಲಿಸದೆ ಹೋಗುತ್ತಿದ್ದ ಹಿನ್ನೆಲೆ ಬಸ್ ತಡೆದು ವಿದ್ಯಾರ್ಥಿಗಳಿಂದ ಪ್ರತಿಭಟನೆ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಥಳಿಸಿ ಠಾಣೆಗೆ ಕರೆದೊಯ್ದ ಪೊಲೀಸರ ನಡೆ ವಿರುದ್ಧ ಗ್ರಾಮಸ್ಥರ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಧಾರವಾಡ: ಮಹಿಳೆ ಸರ ಕಳ್ಳತನ
ಖದೀಮರು ರಸ್ತೆಯಲ್ಲಿ ಹೊರಟಿದ್ದ ಮಹಿಳೆ ಸರ ಕದ್ದೊಯ್ದ ಘಟನೆ ಧಾರವಾಡದ ಸೈದಾಪುರ ಬಡಾವಣೆಯಲ್ಲಿ ನಡೆದಿದೆ. ಭವಾನಿ ದೇವಸ್ಥಾನ ಬಳಿ ಹೋಗುತ್ತಿದ್ದ ಮಹಿಳೆ ಸರಗಳ್ಳತನ ಮಾಡಲಾಗಿದೆ. ₹1.7 ಲಕ್ಷ ಮೌಲ್ಯದ 35 ಗ್ರಾಂ ಮಾಂಗಲ್ಯ ಸರ ಕಳ್ಳತನ ಮಾಡಲಾಗಿದೆ. ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬೆಳಗಾವಿ: ಕತ್ತಿ ಶುಗರ್ಸ್ ಸಕ್ಕರೆ ಕಾರ್ಖಾನೆ ಸಿಬ್ಬಂದಿ ವಿರುದ್ಧ ಗೂಂಡಾವರ್ತನೆ ಆರೋಪ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿರುವ ವಿಶ್ವರಾಜ್ ಕತ್ತಿ ಶುಗರ್ಸ್ ಸಕ್ಕರೆ ಕಾರ್ಖಾನೆ ಸಿಬ್ಬಂದಿ ವಿರುದ್ಧ ಗೂಂಡಾವರ್ತನೆ ಆರೋಪ ಕೇಳಿಬಂದಿದೆ. ವಿಶ್ವರಾಜ್ ಕತ್ತಿ ಶುಗರ್ಸ್ ಸಿಬ್ಬಂದಿಯ ವಿರುದ್ಧ ಆರೋಪ ಕೇಳಿಬಂದಿದೆ. ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಹೆಚ್ಚು ಸೌಂಡ್ ಮಾಡಿದ್ದಕ್ಕೆ ಹಲ್ಲೆ ಮಾಡಿರುವುದಾಗಿ ಆರೋಪ ಮಾಡಲಾಗಿದೆ. ಹಲ್ಲೆ ವಿಡಿಯೋ ವೈರಲ್ ಆದರೂ ಯಾವುದೇ ಕ್ರಮವಿಲ್ಲ. ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲಿಸಿಕೊಳ್ಳದ ಆರೋಪ ಕೂಡ ಕೇಳಿಬಂದಿದ್ದು ಹುಕ್ಕೇರಿ ಠಾಣೆ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಹೇಳಲಾಗಿದೆ.

ಬೆಳಗಾವಿ: ಅಕ್ಕನ ಮಗಳ ಮದುವೆಗೆ ಬಂದಿದ್ದ ಯೋಧನ ಕೊಲೆ ಮಾಡಿರುವ ಶಂಕೆ
ಅಕ್ಕನ ಮಗಳ ಮದುವೆಗೆ ಬಂದಿದ್ದ ಯೋಧನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿರೂರ್ ಗ್ರಾಮದ ಯೋಧ ಈರಪ್ಪ ಪೂಜಾರಿ ಕೊಲೆ ಶಂಕೆ ವ್ಯಕ್ತವಾಗಿದೆ. ಡಿಸೆಂಬರ್ 2 ರಂದು ಅಕ್ಕನ ಮಗಳ ಮದುವೆಗೆ ರಜೆ ಮೇಲೆ ಬಂದಿದ್ದ ಯೋಧ ತನ್ನ ಮದುವೆ ಕಾರ್ಡ್ ನೀಡಲು ಹೊರಗೆ ಹೋಗಿದ್ದರು. ಈ ವೇಳೆ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ ಶಂಕೆ ವ್ಯಕ್ತವಾಗಿದೆ. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಜಯಪುರ: ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಕ್ಷ ಬೆಂಕಿ ತಗುಲಿ ಸಾವು
ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಕ್ಷ ಬೆಂಕಿ ತಗುಲಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ವಿಜಯಪುರದ ಬಂಜಾರಾ ಕ್ರಾಸ್​ನಲ್ಲಿರುವ ಕಾಲೇಜಿನಲ್ಲಿ ಘಟನೆ ನಡೆದಿದೆ. ಕಾಲೇಜಿನ ಅಧ್ಯಕ್ಷ ಡಾ.ಆರ್.ಎನ್.ಬಿರಾದಾರ್ ಸಾವನ್ನಪ್ಪಿದ್ದಾರೆ. ತ್ನಿ ಜತೆ ಜಗಳವಾಡಿಕೊಂಡಿದ್ದ ಡಾ.ಆರ್.ಎನ್.ಬಿರಾದಾರ್, ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ
ಇಲ್ಲಿನ ಬಸವನಬಾಗೇವಾಡಿ ತಾಲೂಕಿನ ದೇಗಿನಾಳ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾದ ಘಟನೆ ನಡೆದಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಾವೇರಿ: ಕಾಲೇಜು ವಿದ್ಯಾರ್ಥಿ ಬಸ್​ನಿಂದ ಬಿದ್ದು ದುರ್ಮರಣ
ಕಾಲೇಜು ವಿದ್ಯಾರ್ಥಿ ಒಬ್ಬರು ಬಸ್​ನಿಂದ ಬಿದ್ದು ದುರ್ಮರಣವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಹೊರವಲಯದ ಗಂಗಿಭಾವಿ ಕ್ರಾಸ್​​ನಲ್ಲಿ ನಡೆದಿದೆ. ಬಸ್​​ನಿಂದ ಬಿದ್ದು ವಿನಾಯಕ ಪಾಟೀಲ (17) ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಬಸ್​ ಫುಲ್​​ ಆಗಿದ್ದರಿಂದ ಬಾಗಿಲಿನಲ್ಲಿ ನಿಂತಿದ್ದ ವಿದ್ಯಾರ್ಥಿ ಬಸ್​ನಿಂದ ಬಿದ್ದಿದ್ದಾರೆ. ಬಸ್​​ನಿಂದ ಬೀಳ್ತಿದ್ದಂತೆ ವಿದ್ಯಾರ್ಥಿ ಮೇಲೆ ಬಸ್ ಹರಿದಿದೆ. ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬಾಗಲಕೋಟೆ: ನಿಶ್ಚಿತಾರ್ಥಕ್ಕೆ ಹೋಗಿ ಬರುತ್ತಿದ್ದ ಬಸ್ ಪಲ್ಟಿ
ನಿಶ್ಚಿತಾರ್ಥಕ್ಕೆ ಹೋಗಿ ಬರುತ್ತಿದ್ದ ಬಸ್ ಪಲ್ಟಿ ಆದ ದುರ್ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ನಗರದ ಹೊರವಲಯದಲ್ಲಿ ನಡೆದಿದೆ. ಬಸ್ ನಲ್ಲಿದ್ದ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು ಮುಧೋಳ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಧೋಳ-ವಿಜಯಪುರ ರಸ್ತೆಯಲ್ಲಿ ಘಟನೆ ನಡೆದಿದೆ. ಮೃತರು ಬಾದಾಮಿ ತಾಲ್ಲೂಕಿನ ಮುಷ್ಟಿಗೇರಿ ಗ್ರಾಮದವರು ಎಂದು ತಿಳಿದುಬಂದಿದೆ. ಮುಧೋಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: Crime News: ಪೀಣ್ಯ ವ್ಯಾಪ್ತಿಯಲ್ಲಿ 2 ದರೋಡೆ, ವೃದ್ಧೆ ಕೊಂದಿದ್ದ ಆರೋಪಿ ಬಂಧನ, ಖಾಸಗಿ ಶಾಲೆಯಲ್ಲಿ ಕ್ರಿಸ್​ಮಸ್ ಆಚರಣೆಗೆ ಅಡ್ಡಿ

ಇದನ್ನೂ ಓದಿ: Crime News: 10 ಕೋಟಿ ರೂ. ಮೌಲ್ಯದ ಅಂಬರ್​ಗ್ರೀಸ್ ಜಪ್ತಿ; ವಿಜಯನಗರ ಪೊಲೀಸರಿಂದ ಆರೋಪಿ ಸೆರೆ