AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಕತ್ವ ಬದಲಾವಣೆಯೇ ಬಿಜೆಪಿಯ ಶಕ್ತಿ: ಬಿಎಲ್ ಸಂತೋಷ್

ಮೈಸೂರು: ನಾಯಕತ್ವವನ್ನು ಬದಲಿಸುವ ಸಾಮರ್ಥ್ಯವೇ ಬಿಜೆಪಿಗೆ ಇರುವ ದೊಡ್ಡ ಶಕ್ತಿ ಎಂದು ಬಿಜೆಪಿ ರಾಷ್ಟ್ರೀಯ ಘಟಕದ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು. ನಗರದಲ್ಲಿ ಭಾನುವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಂಜಾಬ್ ಮತ್ತು ಗುಜರಾತ್ ರಾಜ್ಯಗಳಲ್ಲಿ ಬಿಜೆಪಿ ನಡೆಸಿದ ಪ್ರಯೋಗಗಳು ಯಶಸ್ವಿಯಾಗಿವೆ ಎಂದರು ಹಾಲಿ‌ ಶಾಸಕರು, ಕುಟುಂಬ ಸದಸ್ಯರನ್ನು ಹೊರಗಿಟ್ಟು ಚುನಾವಣೆ ಎದುರಿಸುವ ಬಿಜೆಪಿ ತಂತ್ರಕ್ಕೆ ಫಲ ಸಿಕ್ಕಿದೆ. ಬಿಜೆಪಿಯು ಕೆಲವೆಡೆ ಅಧಿಕಾರಕ್ಕೆ ಬರಲು ಹೊಸ ಮುಖಗಳ ಪರಿಚಯವೇ ಕಾರಣ. ದೆಹಲಿ ಪಾಲಿಕೆ […]

ನಾಯಕತ್ವ ಬದಲಾವಣೆಯೇ ಬಿಜೆಪಿಯ ಶಕ್ತಿ: ಬಿಎಲ್ ಸಂತೋಷ್
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್
TV9 Web
| Edited By: |

Updated on:May 01, 2022 | 1:12 PM

Share

ಮೈಸೂರು: ನಾಯಕತ್ವವನ್ನು ಬದಲಿಸುವ ಸಾಮರ್ಥ್ಯವೇ ಬಿಜೆಪಿಗೆ ಇರುವ ದೊಡ್ಡ ಶಕ್ತಿ ಎಂದು ಬಿಜೆಪಿ ರಾಷ್ಟ್ರೀಯ ಘಟಕದ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು. ನಗರದಲ್ಲಿ ಭಾನುವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಂಜಾಬ್ ಮತ್ತು ಗುಜರಾತ್ ರಾಜ್ಯಗಳಲ್ಲಿ ಬಿಜೆಪಿ ನಡೆಸಿದ ಪ್ರಯೋಗಗಳು ಯಶಸ್ವಿಯಾಗಿವೆ ಎಂದರು ಹಾಲಿ‌ ಶಾಸಕರು, ಕುಟುಂಬ ಸದಸ್ಯರನ್ನು ಹೊರಗಿಟ್ಟು ಚುನಾವಣೆ ಎದುರಿಸುವ ಬಿಜೆಪಿ ತಂತ್ರಕ್ಕೆ ಫಲ ಸಿಕ್ಕಿದೆ. ಬಿಜೆಪಿಯು ಕೆಲವೆಡೆ ಅಧಿಕಾರಕ್ಕೆ ಬರಲು ಹೊಸ ಮುಖಗಳ ಪರಿಚಯವೇ ಕಾರಣ. ದೆಹಲಿ ಪಾಲಿಕೆ ಎಲೆಕ್ಷನ್​ನಲ್ಲಿ ಹಾಲಿ ಸದಸ್ಯರಿಗೆ ಟಿಕೆಟ್ ನೀಡಲಿಲ್ಲ. ಗುಜರಾತ್ ಪಾಲಿಕೆಗಳಲ್ಲೂ ಟಿಕೆಟ್ ಪಡೆದ ಹೊಸಬರು ಗೆಲುವು ಸಾಧಿಸಿದ್ದಾರೆ. ಬಿಜೆಪಿಯಲ್ಲಿ ಮಾತ್ರ ಇಂತಹ ಪ್ರಯೋಗಗಳು ನಡೆಯುತ್ತವೆ ಎಂದು ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಬಿ.ಎಲ್.ಸಂತೋಷ್ ಹೇಳಿದರು. ಗುಜರಾತ್ ಪಾಲಿಕೆ ಚುನಾವಣೆಗಳಲ್ಲಿ ಎರಡು ಬಾರಿ ಗೆದ್ದಿರುವವರಿಗೆ ನಿವೃತ್ತಿ ಘೋಷಿಸಲಾಯಿತು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದೆವು ಎಂದರು. ಕರ್ನಾಟಕದ ವಿಧಾನಸಭೆ ಚುನಾವಣೆಯು ಸನಿಹದಲ್ಲಿಯೇ ಇರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿಕೆಯು ಕುತೂಹಲ ಮೂಡಿಸಿದೆ.

ಬಿ.ಎಲ್.ಸಂತೋಷ್ ಅವರಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

ಸಂತೋಷ್ ಹೇಳಿಕೆ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಲ್.ಸಂತೋಷ್ ಅವರು ಹೇಳಿದ್ದು ಸರಿಯಿದೆ ಎಂದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾರ್ಪೊರೇಷನ್‌ ಚುನಾವಣೆ ಕುರಿತು ಅವರ ಅನಿಸಿಕೆ ಸರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಬಿ.ಎಲ್.ಸಂತೋಷ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಸಿ.ಟಿ.ರವಿ, ಅವರು ಯಾವ ಉದ್ದೇಶದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ಚುನಾವಣೆಯಲ್ಲಿ ಗೆಲ್ಲುವ ಶಕ್ತಿ ಇರುವವರಿಗೆ ಮಾತ್ರವೇ ಪಕ್ಷದ ಬೆಂಬಲ ಸಿಗುತ್ತದೆ. ದುರ್ಬಲ ಪ್ರತಿನಿಧಿಗಳು ಇರುವ ಕಡೆ ಅಭ್ಯರ್ಥಿಗಳನ್ನು ಬದಲಿಸಲಾಗುತ್ತದೆ. ಇದು ಹಿಂದಿನಿಂದಲೂ ನಡೆದು ಬಂದಿರುವ ಪದ್ಧತಿ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿದರು. ಗೆಲ್ಲುವ ಸಾಮರ್ಥ್ಯ ಇರುವವರನ್ನು ಪಕ್ಷ ಬೆಂಬಲಿಸುತ್ತದೆ. ಸಾಮರ್ಥ್ಯ ಇದ್ದವರು ಎಲ್ಲೇ ಇದ್ದರೂ ಯಶಸ್ವಿಯಾಗುತ್ತಾರೆ. ಕರ್ನಾಟಕಕ್ಕೆ ಕರ್ನಾಟಕವೇ ಮಾದರಿ. ನಮಗೆ ಗುಜರಾತ್ ಅಥವಾ ಪಂಜಾಬ್ ಮಾದರಿ ಆಗುವುದಿಲ್ಲ ಎಂದರು.

ಇದನ್ನೂ ಓದಿ: ಬಿಲ್​ಗಳು ಬಿಡುಗಡೆಯಾಗದಿದ್ದರೆ ಸಂತೋಷ್ ಪಾಟೀಲ್ ಹಾಗೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ: ಕೊಪ್ಪಳ ಗುತ್ತಿಗೆದಾರರು

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಚರ್ಚೆ: ಹೊಸ ಅರ್ಥ ಪಡೆದುಕೊಂಡ ಬಿಎಲ್ ಸಂತೋಷ್ ಮಾತು

Published On - 1:10 pm, Sun, 1 May 22

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ