ವಿದ್ಯಾಭ್ಯಾಸಕ್ಕಾಗಿ ಭಾರತದಿಂದ ಉಕ್ರೇನ್ಗೆ ತೆರಳಿದ್ದ ವಿದ್ಯಾರ್ಥಿಗಳ ಸಹಾಯಕ್ಕೆ ಮುಂದಾದ ಸುತ್ತೂರು ಮಠ
ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಕುಂಠಿತವಾಗಬಾರದೆಂದು ಈ ಕ್ರಮಕೈಗೊಳ್ಳಲಾಗಿದ್ದು, ಆದ್ರೆ ವಿದ್ಯಾರ್ಥಿಗಳಿಗೆ ಯಾವುದೇ ಪ್ರಮಾಣಪತ್ರ ನೀಡುವುದಿಲ್ಲ. ವಿದ್ಯಾಭ್ಯಾಸದ ವೇಳೆ ರೋಗಿಗಳಿಗೆ ಚಿಕಿತ್ಸೆ ನೀಡಲು ಅವಕಾಶವಿಲ್ಲ ಎಂದು ತಿಳಿಸಲಾಗಿದೆ.
ಮೈಸೂರು: ರಷ್ಯಾ, ಉಕ್ರೇನ್ ನಡುವೆ ಯುದ್ಧ ಮುಂದುವರಿದಿರುವ ಹಿನ್ನೆಲೆ ವಿದ್ಯಾರ್ಥಿಗಳ ಸಹಾಯಕ್ಕೆ ಸುತ್ತೂರು ಮಠ ಮುಂದಾಗಿದ್ದು, ಉಕ್ರೇನ್‌ನಿಂದ ವಾಪಸಾದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ (Suttur Shivaratri Deshikendra Swamiji) ಮಾಹಿತಿ ನೀಡಿದ್ದಾರೆ. ಬ್ರಿಡ್ಜ್ ಕೋರ್ಸ್ ನಡೆಸಿರುವುದಾಗಿ ಸಂಸ್ಥೆ ಪತ್ರ ನೀಡಲಿದ್ದು, 48 ಗಂಟೆ ಅವಧಿಯಲ್ಲಿ 511 ವಿದ್ಯಾರ್ಥಿಗಳಿಂದ ನೋಂದಣಿ ಮಾಡಲಾಗಿದೆ. ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ ಲಭ್ಯ ಬಳಿಕ JSS ಶಿಕ್ಷಣ ಸಂಸ್ಥೆಯಿಂದ ವಿಶೇಷ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸಂಸ್ಥೆ ಅವಕಾಶ ನೀಡಲಿದ್ದು, ಪ್ರಾಯೋಗಿಕ ತರಗತಿಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಕುಂಠಿತವಾಗಬಾರದೆಂದು ಈ ಕ್ರಮಕೈಗೊಳ್ಳಲಾಗಿದ್ದು, ಆದ್ರೆ ವಿದ್ಯಾರ್ಥಿಗಳಿಗೆ ಯಾವುದೇ ಪ್ರಮಾಣಪತ್ರ ನೀಡುವುದಿಲ್ಲ. ವಿದ್ಯಾಭ್ಯಾಸದ ವೇಳೆ ರೋಗಿಗಳಿಗೆ ಚಿಕಿತ್ಸೆ ನೀಡಲು ಅವಕಾಶವಿಲ್ಲ ಎಂದು ತಿಳಿಸಲಾಗಿದೆ.
ಝೆಲೆನ್ಸ್ಕಿ ಮತ್ತು ಕುಟುಂಬವನ್ನು ಬಂಧಿಸಲು ರಷ್ಯಾ ಕೆಲವೇ ನಿಮಿಷಗಳ ದೂರದಲ್ಲಿತ್ತು
ಉಕ್ರೇನ್ ಮೇಲಿನ ರಷ್ಯಾ ದಾಳಿಯು (Russia Ukraine War) 66ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಸಹಾಯಕರು ಫೆಬ್ರವರಿ 24ರಂದು ಉಕ್ರೇನ್ ಅಧ್ಯಕ್ಷರನ್ನು ಸೆರೆಹಿಡಿಯಲು ರಷ್ಯಾ ಕೆಲವೇ ನಿಮಿಷಗಳ ದೂರದಲ್ಲಿತ್ತು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಫೆ.24ರ ಕಾರ್ಯಾಚರಣೆಯು ಆರಂಭವಾದ ಕೆಲವೇ ಗಂಟೆಗಳಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಾಗೂ ಅವರ ಕುಟುಂಬವನ್ನು ಸೆರೆಹಿಡಿಯಲು ರಷ್ಯನ್ ಪಡೆಗಳು ಕೆಲವೇ ನಿಮಿಷಗಳ ದೂರದಲ್ಲಿತ್ತು ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಲಾಗಿದೆ. ‘ಟೈಮ್’ ಪ್ರಕಟಿಸಿದ ‘ಇನ್‌ಸೈಡ್ ಝೆಲೆನ್ಸ್ಕಿಸ್ ವರ್ಲ್ಡ್’ ಎಂಬ ಶೀರ್ಷಿಕೆಯ ಸಂದರ್ಶನದಲ್ಲಿ, ಉಕ್ರೇನ್ ಅಧ್ಯಕ್ಷರ ಮುಖ್ಯಸ್ಥ ಆಂಡ್ರಿ ಯೆರ್ಮಾಕ್ ಮಾತನಾಡಿದ್ದಾರೆ. ಅದರಲ್ಲಿ ಅವರು, ಫೆ.24ರಂದು ಕೀವ್ನಲ್ಲಿರುವ ಅಧ್ಯಕ್ಷೀಯ ಕಚೇರಿಗಳು ಮತ್ತು ಸರ್ಕಾರಿ ನಿವಾಸಗಳತ್ತ ರಷ್ಯನ್ ಪಡೆಗಳು ಧಾವಿಸಿದ್ದವು. ಝೆಲೆನ್ಸ್ಕಿಯವರ ಕಚೇರಿಗೆ ಸಮೀಪದಲ್ಲಿಯೇ ಗುಂಡಿನ ಶಬ್ಧಗಳು ಕೇಳಿಬರುತ್ತಿತ್ತು ಎಂದಿದ್ದಾರೆ.
ಶಕ್ತಿಧಾಮದಲ್ಲಿರುವ ಮಕ್ಕಳು ಸ್ವಂತ ಮನೆಗಳಲ್ಲಿಗಿಂತ ಹೆಚ್ಚು ಸಂತೋಷವಾಗಿದ್ದಾರೆ: ಸುತ್ತೂರು ದೇಶಿಕೇಂದ್ರ ಸ್ವಾಮೀಜಿ
ಮೈಸೂರಿನ ಶಕ್ತಿಧಾಮದ ಮತ್ತಷ್ಟು ವಿಸ್ತರಣೆಗೊಳುತ್ತಿದೆ. ಇನ್ಫೋಸಿಸ್ ಫೌಂಡೇಶನ್ ಶಕ್ತಿಧಾಮದಲ್ಲಿ ಒಂದು ಶಾಲೆಯನ್ನು ಸ್ಥಾಪಿಸುತ್ತಿದ್ದು ಇದರ ಶಿಲಾನ್ಯಾಸ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತಾಡಿದ ಮೈಸೂರಿನ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಶಕ್ತಿಧಾಮದ ಸ್ಥಾಪನೆ ಮತ್ತು ಅದರೆ ಏಳಿಗೆಗೆ ಶ್ರಮಿಸಿದ ಎಲ್ಲರನ್ನು ತಮ್ಮ ಭಾಷಣದಲ್ಲಿ ಶ್ಲಾಘಿಸಿದರು. ಶಕ್ತಿಧಾಮ ಅಸ್ತಿತ್ತಕ್ಕೆ ಬಂದಾಗ ಮೈಸೂರಿನ ಪೊಲೀಸ್ ಕಮೀಷನರ್ ಅಗಿದ್ದ ಕೆಂಪಯ್ಯ ಅವರು ಮಾಡಿದ ಉತ್ತಮ ಕೆಲಸಗಳನ್ನು ನೆನಪು ಮಾಡಿಕೊಂಡರು. ಅವರ ಅಧಿಕಾರಾವಧಿಯಲ್ಲಿ ಮೈಸೂರು ನಗರದಲ್ಲಿ ಪೊಲೀಸ್ ಶಾಲೆ ಅಸ್ತಿತ್ವಕ್ಕೆ ಬಂತು, ಶಿಥಿಲಗೊಂಡಿದ್ದ ಹಲವಾರು ಪೊಲೀಸ್ ಠಾಣೆಗಳನ್ನು ಅವರು ಸರ್ಕಾರದ ನೆರವಿನೊಂದಿಗೆ ನವೀಕರಿಸಿದರು ಎಂದು ಸ್ವಾಮೀಜಿ ಹೇಳಿದರು.
ಸಾರ್ವಜನಿಕರೊಂದಿಗೆ ನಡೆಸಿದ ಒಂದು ಸಭೆಯಲ್ಲಿ ಕೆಂಪಯ್ಯನವರು, ನಗರದಲ್ಲಿ ಒಂದೋ ಪೊಲೀಸರಿರ ಬಕು, ಇಲ್ಲ ಕಳ್ಳಕಾಕರು, ಪುಂಡರು ಇರಬೇಕು ಎಂದು ಹೇಳಿದ್ದು ತಮಗೆ ಬಹಳ ಮೆಚ್ಚಿಕೆಯಾಯಿತು ಎಂದು ಸ್ವಾಮೀಜಿ ಹೇಳಿದರು. ನಂತರ ಕೆಂಪಯ್ಯ ಅವರು ದಿವಂಗತ ಪಾರ್ವತಮ್ಮ ರಾಜಕುಮಾರ ಅವರ ಆಶಯದಂತೆ ಶಕ್ತಿಧಾಮದ ಕಾರ್ಯಗಳಲ್ಲೂ ಪಾಲ್ಗೊಂಡರು ಎಂದು ಶ್ರೀಗಳು ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.