ಶ್ರೀ ನಾರಾಯಣ ಮೇಘಾಜಿ ಲೋಖಂಡೆ: ಭಾರತೀಯ ಕಾರ್ಮಿಕ ಸಂಘದ ಪಿತಾಮಹನ ಬಗ್ಗೆ ನಿಮಗೆಷ್ಟು ಗೊತ್ತು?

1848ರಲ್ಲಿ ಜನಿಸಿದ ಲೋಖಂಡೆ ತಮ್ಮ ವಿದ್ಯಾಭ್ಯಾಸದ ನಂತರ ಬ್ರಿಟಿಷ್‌ ಬಾಂಬೆ ಟೆಕ್ಸ್ ಟೈಲ್​ನಲ್ಲಿ ಸ್ಟಾಕ್ ಕೀಪರ್ ಆಗಿ ಕಾರ್ಯನಿವಹಿಸುತ್ತಿದ್ದರು. ಅಲ್ಲಿ ವರ್ಷವಿಡೀ ಯಾವ ವಿಶ್ರಾಂತಿ ಇಲ್ಲದೆ ದುಡಿಯುತ್ತಿದ್ದ ಭಾರತದ ಶ್ರಮಿಕವರ್ಗ ಅವರಲ್ಲಿ ಮರುಕ ಹುಟ್ಟಿಸಿತು.

ಶ್ರೀ ನಾರಾಯಣ ಮೇಘಾಜಿ ಲೋಖಂಡೆ: ಭಾರತೀಯ ಕಾರ್ಮಿಕ ಸಂಘದ ಪಿತಾಮಹನ ಬಗ್ಗೆ ನಿಮಗೆಷ್ಟು ಗೊತ್ತು?
ಶ್ರೀ ನಾರಾಯಣ ಮೇಘಾಜಿ ಲೋಖಂಡೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 01, 2022 | 5:20 PM

ಮೇ 1ನ್ನು ನಾವು ಕಾರ್ಮಿಕರ ದಿನಾಚರಣೆ (Workers Day) ಎಂದು ಗುರುತಿಸುತ್ತೇವೆ. ಶ್ರಮಿಕ ವರ್ಗದ ಜನರಿಗೆ ಗೌರವ ಸೂಚಿಸುವ ಸಲುವಾಗಿ ಪ್ರತಿ ವರ್ಷವೂ ಈ ದಿನವನ್ನು ಭಾರತಾದ್ಯಂತ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ‌. ದೇಶದಲ್ಲಿ ಹಲವಾರು ಕಾರ್ಮಿಕ ಸಂಘಗಳು, ಒಕ್ಕೂಟಗಳು, ಸಂಘಟನೆಗಳು ಈ ವರ್ಗದ ಜನರ ಏಳಿಗೆಗೆ ಹಾಗೂ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿದ್ದ ಕಾರ್ಮಿಕರನ್ನು ಒಗ್ಗೂಡಿಸಿ ಸ್ಥಾಪನೆಯಾದ ಕಾರ್ಮಿಕರ ಸಂಘದ ಬಗೆಯಾಗಲೀ, ಅದನ್ನು ಸ್ಥಾಪಿಸಿದ ಭಾರತೀಯನೊಬ್ಬನ ಬಗೆಯಾಗಲಿ ನಮಗೆ ಹೆಚ್ಚು ತಿಳಿದಿಲ್ಲ. ಇಂದು ಭಾನುವಾರವನ್ನು ನಾವು ರಜೆ ಎಂದು ಪರಿಗಣಿಸಲು ಆ ಭಾರತೀಯನ ಸತತ ಪ್ರಯತ್ನ ಮತ್ತು ಪರಿಶ್ರಮವಿದೆ. ಅವರೇ ಶ್ರೀ ನಾರಾಯಣ ಮೇಘಾಜಿ ಲೋಖಂಡೆ.

ಸ್ವಾತಂತ್ರ ಪೂರ್ವ ಭಾರತದ ದುಡಿಯುವ ಜನರ ಆಶಾಕಿರಣವಾದವರು ಶ್ರೀ ನಾರಾಯಣ ಮೇಘಾಜಿ ಲೋಖಂಡೆ. ಇವರು ಜ್ಯೋತಿ ಬಾ ಫುಲೆಯವರ ಸಹಪಾಠಿ. 1848ರಲ್ಲಿ ಜನಿಸಿದ ಲೋಖಂಡೆ ತಮ್ಮ ವಿದ್ಯಾಭ್ಯಾಸದ ನಂತರ ಬ್ರಿಟಿಷ್‌ ಬಾಂಬೆ ಟೆಕ್ಸ್ ಟೈಲ್​ನಲ್ಲಿ ಸ್ಟಾಕ್ ಕೀಪರ್ ಆಗಿ ಕಾರ್ಯನಿವಹಿಸುತ್ತಿದ್ದರು. ಅಲ್ಲಿ ವರ್ಷವಿಡೀ ಯಾವ ವಿಶ್ರಾಂತಿ ಇಲ್ಲದೆ ದುಡಿಯುತ್ತಿದ್ದ ಭಾರತದ ಶ್ರಮಿಕವರ್ಗ ಅವರಲ್ಲಿ ಮರುಕ ಹುಟ್ಟಿಸಿತು. ಖಾಯಿಲೆ ಕಸಾಲೆಗಳನ್ನು ಲೆಕ್ಕಿಸದೆ ವಾರದ ಅಷ್ಟು ದಿನಗಳು ದುಡಿಯುತ್ತಿದ್ದ ಜನರನ್ನು ಬ್ರಿಟಿಷ್ ಸರ್ಕಾರ ಕಸಕ್ಕಿಂತ ಕಡೆಯಾಗಿ ನೋಡುತ್ತಿತ್ತು. ಅಲ್ಲಿನ ಅಧಿಕಾರಿಗಳು ಭಾನುವಾರ ಚರ್ಚ್ ಹಾಗೂ ಮತ್ತಿತರ ಕಾರಣಗಳಿಗಾಗಿ ಒಂದು ದಿನದ ರಜೆ ತೆಗೆದುಕೊಳ್ಳುತ್ತಿದ್ದರು. ಆದರೆ ಭಾರತಿಯ ಕಾರ್ಮಿಕರು ಮಾತ್ರ ಏಳೂ ದಿನಗಳು ಕೆಲಸ ಮಾಡಲೇಬೆಕಿತ್ತು. ಇವುಗಳನ್ನೆಲ್ಲಾ ಗಮನಿಸುತ್ತಿದ್ದ ಲೋಖಂಡೆ ಬಾಂಬೆಯಲ್ಲಿ ಆಗ ಪ್ರಚಲಿತದಲ್ಲಿದ್ದ ‘ಧೇನು’ ಪತ್ರಿಕೆಯಲ್ಲಿ ಕಾರ್ಮಿಕರ ಸ್ಥಿತಿಗತಿಗಳನ್ನು ಸರಣಿ ಲೇಖನಗಳನ್ನು ಬರೆದರು.

ಅವರ ಮುಖ್ಯ ಉದ್ದೇಶ ಬ್ರಿಟಿಷ್ ಸರ್ಕಾರದ ಗಮನವನ್ನು ಕಾರ್ಮಿಕ ವರ್ಗದದೆಡೆಗೆ ಸೆಳೆಯುವುದಾಗಿತ್ತು. ಇದರಿಂದಾಗಿಯೇ ಲೋಖಂಡೆಯವರನ್ನು ಭಾರತೀಯ ಕಾರ್ಮಿಕ ಹೋರಟದ ಪಿತಾಮಹ ಎಂದು ಕರೆಯುತ್ತಾರೆ. ಸತತ ಏಳು ವರ್ಷಗಳ ಕಾಲ ಹೀಗೆ ಹಲವಾರು ವಿಧದಲ್ಲಿ ಹೋರಾಟ ನಡೆಸಿದ ನಂತರ 1890ರಲ್ಲಿ ಬ್ರಿಟಿಷ್ ಸರ್ಕಾರ ಭಾನುವಾರವನ್ನು ರಜೆ ಎಂದು ಅಧಿಕೃತವಾಗಿ ಘೋಷಿಸಿತು. ಹೀಗಾಗಿ ಲೋಖಂಡೆಯವರನ್ನು ಇಂದಿಗೂ ಭಾನುವಾರ ರಜೆಯ ರುವಾರಿ ಹಾಗೂ ಶ್ರಮಿಕ ವರ್ಗದ ಏಳಿಗೆಗಾಗಿ ಶ್ರಮಿಸುತ್ತಿದ ಪ್ರಥಮ ಭಾರತೀಯನೆಂದು ಗುರುತಿಸಲಾಗುತ್ತದೆ. ಮೇ ೧ ರಂದು ಲೋಖಂಡೆ ಎಂತಹ ಮಹಾನ್ ವ್ಯಕ್ತಿತ್ವಗಳನ್ನು ನೆನೆಯೋಣ.

ಲೇಖನ: ಶ್ರೀರಕ್ಷಾ ಶಂಕರ್ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ

ಇನ್ನಷ್ಟು ಬ್ಲಾಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪಕ್ಷದ ವಿದ್ಯಮಾನಗಳು ಶಿವಕುಮಾರ್​ರನ್ನು ದೆಹಲಿಗೆ ಹೋಗುವಂತೆ ಮಾಡಿದವೇ?
ಪಕ್ಷದ ವಿದ್ಯಮಾನಗಳು ಶಿವಕುಮಾರ್​ರನ್ನು ದೆಹಲಿಗೆ ಹೋಗುವಂತೆ ಮಾಡಿದವೇ?
ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್