AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂಢನಂಬಿಕೆಯ ಮುಖವಾಡ ಕಳಚಿದಾಗ, ನಂಬಿಕೆಯ ಹುಟ್ಟು ಸಾಧ್ಯ

ವಾಮಚಾರವನ್ನು ಪ್ರತಿಪಾದಿಸುವವರು ಒಂದು ಕಡೆಯಾದರೆ ಇನ್ನೊಂದೆಡೆ ಮಾಂತ್ರಿಕ ಲೋಕದ ಅನೇಕ ಸಂಗತಿಗಳನ್ನು ಎಲ್ಲೋ ಕೇಳಿ, ನೋಡಿದರ ಪರಿಣಾಮ ತಮ್ಮ ಸುತ್ತಮುತ್ತಲಿನವರನ್ನು ಅನುಮಾನಿಸುವ ದುರ್ಬಲ ಮನಸ್ಥಿತಿಯ ಯುವ ಪೀಳಿಗೆಗಳು!

ಮೂಢನಂಬಿಕೆಯ ಮುಖವಾಡ ಕಳಚಿದಾಗ, ನಂಬಿಕೆಯ ಹುಟ್ಟು ಸಾಧ್ಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 16, 2022 | 9:30 AM

ಪ್ರಪಂಚದ ಎಲ್ಲಾ ಭಾಗಗಳಲ್ಲಿ ವಾಮಾಚಾರದ ಬಗ್ಗೆ ಜನರಲ್ಲಿ ಭಯವಿದೆ .ಆದರೆ ಇನ್ನು ಕೆಲವರು ಇವುಗಳಲ್ಲಿ ನಂಬಿಕೆ ಇಟ್ಟಿರುತ್ತಾರೆ, ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದು .ಆದರೆ ವಾಮ ಮಾರ್ಗ ಸುಲಭದಲ್ಲ ಎನ್ನುವುದು ನನಗೆ ಅರಿವಿದೆ .ಅದಾಗಲೇ ವಾಮ,ಮಾಟದ ಕುರಿತು ಹಲವು ಸಂಗತಿಯನ್ನು ಕೇಳಿ ,ಇನ್ನೂ ಕೆಲವೊಂದಿಷ್ಟನ್ನು ಓದಿ ತಿಳಿದುಕೊಂಡಿರುವುದೆ ಇದಕ್ಕೆ ಮೂಲ ಕಾರಣ. ಸ್ವಂತ ಬಯಕೆಗಳನ್ನು ಈಡೇರಿಸಿಕೊಳ್ಳಬೇಕೆಂಬ ಅಭಿಲಾಷೆಯ ಜೊತೆಗೆ ಬೇರೊಬ್ಬರ ಮೇಲೆ ಸೇಡು ತೀರಿಸಿಕೊಳ್ಳುವ ಹಠ ಮಾಟ-ಮಂತ್ರಗಳಲ್ಲಿ ಹೆಚ್ಚು. ಮಂತ್ರವಿದ್ಯೆಯನ್ನು ಒಳ್ಳೆಯ ಕಾರ್ಯಕ್ಕೂ ಬಳಸಿಕೊಳ್ಳಬಹುದಾದರೂ ಬಳಸುವವರು ತೀರ ಕಡಿಮೆ. ಆಧುನಿಕ ಜಗತ್ತಿನಲ್ಲಿ ಇದರ ಸೆಳೆತಕ್ಕೆ ಒಳಗಾಗುವವರು ವಿರಳ. ಹಾಗಾಗಿ ಅದರ ಬಗ್ಗೆ ನಿರಾಸಕ್ತಿ ತೋರಿಸುವವರೆ ಅನೇಕ ಮಂದಿ. ಹಿಂಸೆಯನ್ನು ಆರಾಧಿಸುವವರು ಮಾತ್ರ ಅತ್ತ ಸುಳಿಯುತ್ತಾರೆ.

ವಾಮಚಾರವನ್ನು ಪ್ರತಿಪಾದಿಸುವವರು ಒಂದು ಕಡೆಯಾದರೆ ಇನ್ನೊಂದೆಡೆ ಮಾಂತ್ರಿಕ ಲೋಕದ ಅನೇಕ ಸಂಗತಿಗಳನ್ನು ಎಲ್ಲೋ ಕೇಳಿ, ನೋಡಿದರ ಪರಿಣಾಮ ತಮ್ಮ ಸುತ್ತಮುತ್ತಲಿನವರನ್ನು ಅನುಮಾನಿಸುವ ದುರ್ಬಲ ಮನಸ್ಥಿತಿಯ ಯುವ ಪೀಳಿಗೆಗಳು! ಇವರನ್ನು ಕಂಡಾಗ ನಿಜಕ್ಕೂ ಬೇಸರವಾಗುವುದು ಸಹಜ. ಹೌದು! ಪೇಯಿಂಗ್ ಗೆಸ್ಟ್ ಆಗಿ ಚಿಕ್ಕದೊಂದು ಕೋಣೆಯಲ್ಲಿ ಬಹಳ ಆಸೆಯಿಂದ ಹೊಕ್ಕೆ. ಹಾಸ್ಟೆಲ್ ಅಲ್ಲಿಗೂ ಇರುವ ವ್ಯತ್ಯಾಸ ಒಂದೇ ದಿನದಲ್ಲಿ ಅಂದಾಜು ಹಾಕಿದೆ. ಆದರೆ ಮೂಲಭೂತ ಸೌಕರ್ಯಗಳಿಗೆ ಕೊರತೆ ಬಾರದು ಎಂಬ ನಂಬಿಕೆಯಿಂದ ಅಲ್ಲೆ ಇರಲು ದೃಢ ನಿರ್ಧಾರ ಮಾಡಿದೆ. ಹೊಸ ಪರಿಸರಕ್ಕೆ ಅತಿ ಬೇಗ ಹೊಂದಿಕೊಳ್ಳಲಾಗದೆ ಇದ್ದರೂ ತೀರ ಕಷ್ಟವೇನು ಆಗಿಲ್ಲ.

ಮಾನವ ಸಂಘ ಜೀವಿ. ಸದಾ ಜಂಟಿಯಾಗಿ ಇರಲೂ ಬಯಸುತ್ತಾನೆ ಅಂತೆಯೇ ನಾನು ಕೂಡ, ಸ್ನೇಹಿತರನ್ನು ಬಹಳ ಗೌರವದಿಂದ, ಪ್ರೀತಿಯಿಂದ ಕಾಣುವ ವ್ಯಕ್ತಿತ್ವದ ಹುಡುಗಿ. ನನಗೆ ಅದಾಗಲೇ ಇಬ್ಬರು ಇಂಜಿನಿಯರಿಂಗ್ ಪದವಿ ಓದುವ ಹುಡುಗಿಯರು ಪಿ.ಜಿಯಲ್ಲಿ ಸ್ನೇಹಿತರಾದರು. ಒಬ್ಬಾಕೆಗೆ ನನ್ನದೇ ವಯಸ್ಸು, ಇನ್ನೊಬ್ಬಳು ನನಗಿಂತ ನಾಲ್ಕು ವರ್ಷ ಚಿಕ್ಕವಳು. ಪುಟ್ಟ ಹುಡುಗಿ, ಇಂದಿನ ಮಕ್ಕಳು  ತುಂಬಾ ಅಪ್ಡೇಟ್ ಆಗಿರುತ್ತಾರೆ. ಹಾಗೆಯೆ ಇದ್ದಳು ಆಕೆ. ಬದುಕುವ ಕಲೆಯಲ್ಲೂ ಚೆನ್ನಾಗಿ ಬಲ್ಲವಳಾದ ಚತುರೆಯಾಗಿದ್ದಳು. ಅನೇಕ ಕಾರಣಕ್ಕಾಗಿ ನನ್ನ ಕೋಣೆಗೆ ಆಗಾಗ ಬಂದು ಮಾತನಾಡುತ್ತ ಇದ್ದಳು ಆಕೆಯ ವಯಸ್ಸು ಹದಿನೆಂಟು ಆಗಿರಬಹುದು .ಹಲವು ಬಾರಿ ಅವಳ ಮಾತುಗಳು ತೀರಾ ತಲೆಬಿಸಿ ತರುತ್ತಿದ್ದರು ಸುಮ್ಮನೆ ನಕ್ಕು, ಮನಸ್ಸಿನಲ್ಲಿ “ಚೈಲ್ಡ್ ಹುಡುಗಿ” ಇನ್ನು ಬುದ್ಧಿ ಕಡಿಮೆ ಎಂದು ಸುಮ್ಮನಾಗಿ ಬಿಡುತ್ತಿದೆ.

ಆದರೆ ಒಂದು ಘಟನೆ ನನ್ನ ಕುತ್ತಿಗೆಗೆ ಬಂದಿತ್ತು. ಕಾಲೇಜಿನಲ್ಲಿ ನನ್ನ ಸೀನಿಯರ್ ಕೊಟ್ಟ ದೇವಸ್ಥಾನದ ಕುಂಕುಮ ಪ್ರಸಾದವನ್ನು ಆಗತಾನೆ ಸ್ನಾನ ಮುಗಿಸಿ ಬಂದು ಹಣೆಗೆ ಇಟ್ಟೆ. ಕಾಗದದಲ್ಲಿದ ಕುಂಕುಮ ಸಮೇತ ಎದುರಿಗಿದ್ದ ಆಕೆಯ ಕೋಣೆಗೆ ಕಾರಣ ನಿಮಿತ್ತ ಹೋಗಿದ್ದಾಗ ಮರೆತು ಕಪಾಟಿನ ಮೇಲೆ ಇಟ್ಟು…….. ಬಂದಿದ್ದೆ. ಆಕೆ ಆಗ ಅದನ್ನು ಗಮನಿಸಲಿಲ್ಲ.  ಮಾರನೇ ದಿನ ನನ್ನ ಇನ್ನೊರ್ವ ಸ್ನೇಹಿತೆ.”ಈಕೆ ಕೋಣೆಯಲ್ಲಿ ಕುಂಕುಮ ಬಂದಿದೆ ಇದು ಹೇಗೆ ಬಂತು ಯಾರಾದರೂ ಮಾಟ ಮಾಡಿದ್ದಾರೆ. ಅವಳು ಹೇಳುವ ದಾಟಿಯನ್ನು ನೋಡಿ ನಾನು ಕಿಸಕ್ಕೆಂದು ಜೋರಾಗಿ ನಕ್ಕೆ .ಆದರೂ ಇವರ ಕಲ್ಪನೆಯ ಮಾತುಗಳನ್ನು ಕೇಳಲು ಇನ್ನಷ್ಟು ಕುತೂಹಲವಾಗಿ ನಾನೇ ಮರೆತು ಇಟ್ಟು ಬಂದಿದ್ದೇನೆಂದು ಹೇಳಲಿಲ್ಲ. ಹುಡುಗಿ ರೂಮಿಗೆ ಹೋದಾಗ ಅಕ್ಕ ಯಾರೋ ಮಾಟ ಮಾಡಿದ್ದಾರೆ? ನಾನು ದೇವರಿಗೆ ಹರಕೆ ಹೇಳುತ್ತೇನೆ ಎಂದಾಗಲೂ ನನ್ನ ಒಳ ಮನಸ್ಸು ಅವಳ ಕಲ್ಪನೆಯನ್ನು ಕಂಡು ಹುಚ್ಚರಂತೆ ನಗುತ್ತಿತ್ತು. ಆ ಹುಡುಗಿ ಇನ್ನಷ್ಟು ಭಯಗೊಂಡ ಹಾಗೆ ಕಾಣಿಸಿತ್ತು   ನಾನು ನನ್ನ  ಸ್ನೇಹಿತೆಯನ್ನು ಕರೆದು ನಕ್ಕು ಆ ವಿಷಯ ತಿಳಿಸಿದೆ.

ಆಕೆಯನ್ನು ಕರೆದು ವಿಷಯವನ್ನು ಹೇಳಿದೆ. ಆಗಲೇ ನನಗೆ ಸಿಡಿಲು ಬಡಿದಂತಾಗಿದ್ದು.ಅಕ್ಕ ನಾನೇನು ಮಾಡಿದ್ದೆ ನಿಮಗೆ? ಯಾಕೆ ಹೀಗೆ ಮಾಡಿದ್ದೀರಿ ಎಂದು ಅವಳು ಮಾತನಾಡುವ ಶೈಲಿಯೇ ಸಂಪೂರ್ಣ ಬದಲಾಗಿತ್ತು. ಕಾಲೇಜಿಗೆ ಬಂದರೂ ನನಗೆ ಮನಸ್ಸು ಸರಿಯಾಗಲಿಲ್ಲ, ಹುಡುಗಿಯ ಉದ್ವೇಗತೆ ನನಗೆ ಮುಜುಗರ ಉಂಟು ಮಾಡಿತ್ತು. ಮೊಬೈಲ್ ತೆಗೆದು ಮೆಸೇಜ್ ಮಾಡಿ ಸಾರಿ ಎಂದೆ. ನೋ ರಿಪ್ಲೇ ಫ್ರಾಮ್ ಹರ್ ಸೈಡ. ಕಾಲೇಜು ಮುಗಿಸಿ ಬರುವುದು  ಕತ್ತಲಾಗಿತ್ತು .ದೇಹಕ್ಕೆ ಸುಸ್ತಾಗಿತ್ತು ಆದರೂ ನನ್ನ ಮೇಲೆ ಆಕೆ ಭಾವನೆ ಏನು ಎಂದು ಹೋಗಿ ಮಾತನಾಡಿಸಿದೆ ಹುಡುಗಿ ನನಗೆ ಗೊತ್ತು ನೀವು ಬೇಕು ಅಂತಾನೆ ಇಟ್ಟಿದ್ದೀರಿ .ನನಗೆ ಕೇಡು ಮಾಡುವುದು ನನ್ನ ಮೂಲ ಉದ್ದೇಶ ವೆಂಬಂತೆ ಏರುಧ್ವನಿಯಲ್ಲಿ ಮಾತನಾಡಿದಳು. ಅವಳನ್ನು ಸಮಾಧಾನ ಮಾಡಲು ಸೋತೆ ಆಗ ನನಗೆ ಮನಶಾಸ್ತ್ರ ಮೂರು ವರ್ಷ ಓದಿದ ನನಗೆ” ಇಲ್ಯೂಷನ್ ದಿಸೋರ್ಡರ್” ನೆನಪಿಗೆ ಬಂತು.

ನನ್ನ ಸಹನೆ  ಕಟ್ಟೆ ಒಡೆದು ಹೋಗಿ ನಾನು ನೀನು ಏನಾದರೂ ಅಂದುಕೊ ನನ್ನ ಜೊತೆ ಮಾತನಾಡಬೇಡ ಎಂದಾಗ ನನ್ನತ್ತ ನೋಡಿ ಚೀರಿದಳು. ತಪ್ಪೆಲ್ಲ ನಿಮ್ಮದೇ ನಾನೇನು ಮಾಡಿದೆನೆಂದು ನನಗೆ ಹೀಗೆ ಮಾಡಿದ್ದೀರಿ ಎಂದಳು ನನಗೆ ನಿಜಕ್ಕೂ ಗರ ಬಡಿದಂತಾಯಿತು. ನನ್ನ ಕೋಣೆಗೆ ಬಂದ ನಾನು ಅವಳ ನೆಲೆಯಲ್ಲಿ ನಿಂತು ಯೋಚಿಸಿದೆ ಅದು ಹೇಗೆ ಆಕೆ ನನ್ನನ್ನು ಅಪರಾಧಿಯಾಗಿ ಕಂಡಳು ಅದಕ್ಕೆ ಕಾರಣವೇನಿರಬಹುದು ಎಂದು ಅವಳ ಕಲ್ಪನೆಯ ಲೋಕ ಕಂಡು ನನಗೆ ನಿಜಕ್ಕೂ ದಿಗ್ಭ್ರಮೆಯಾಯಿತು… ನನ್ನನ್ನು ನಾ ನಿರಪರಾಧಿ ಎಂದೂ ಸಮರ್ಥಿಸಿಕೊಳ್ಳಲೂ ಅನೇಕ ದಾರಿಗಳಿದ್ದವೂ ಆದರೂ ಕೇಳುವ ಮನಸ್ಥಿತಿ ಅವಳಲ್ಲಿ ಇರಲಿಲ್ಲ.

ಅದೂ ನಾನು ಅವಳ ಸಂಭಾಷಣೆಯಲ್ಲೇ ಗ್ರಹಿಸಿಕೊಂಡೆ ಹಾಗಾಗಿ ನಾನೂ ಸುಮ್ಮನಾದೆ. ಹೌದು ಮನುಷ್ಯ ಯಾವಾಗ ಭ್ರಾಂತಿಗೆ ಒಳಗಾಗುತ್ತಾನೋ ಆಗ ಮದವೇರಿದ ಮದಗಜನಂತಾಗುತ್ತದೆ ಅವರ ಮನಸ್ಥಿತಿ. ಯಾರನ್ನು ನಂಬುವ ಮನಸ್ಥಿತಿ ಅವರದ್ದಾಗಿರುವುದಿಲ್ಲ. ಕಲ್ಪನೆಗೂ ಭಯವಾಗುವ ರೀತಿಯಲ್ಲಿ ಕಲ್ಪಿಸಿಕೊಂಡು ಪ್ರಪಂಚವನ್ನು ದೂರುತ್ತಾರೆ. ಅದು ಅವರ ಮನೋದೌರ್ಬಲ್ಯವನ್ನು ಎತ್ತಿಹಿಡಿಯುತ್ತದೆ. ಈ ಘಟನೆ ನನಗಂತೂ ಹೊಸ ಅನುಭವನ್ನು ನೀಡಿದಂತೂ ಸತ್ಯ.

-ಪವಿತ್ರ ಕುಂದಾಪುರ ಆಳ್ವಾಸ್ ಕಾಲೇಜು ಮೂಡುಬಿದಿರೆ