ಬೈಟ್​ಕಾಯಿನ್​ ಪ್ರಕರಣ ಚುರುಕುಗೊಂಡರೆ ರಾಜ್ಯಕ್ಕೆ 3ನೇ ಸಿಎಂ ಸಿಗ್ತಾರೆ; ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್

ಗೃಹ ಸಚಿವರಿಗೆ ಕೇಶವ ಕೃಪಾದಿಂದ ಆದೇಶ ಬರುತ್ತಿದೆ. ಸಿಐಡಿ ಪೊಲೀಸರು ವಶದಲ್ಲಿ ಇರುವವರು ಕಿಂಗ್​​ಪಿನ್​ಗಳಲ್ಲ. ಕೇವಲ ಮಧ್ಯವರ್ತಿಗಳು. ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರದ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಬೈಟ್​ಕಾಯಿನ್​ ಪ್ರಕರಣ ಚುರುಕುಗೊಂಡರೆ ರಾಜ್ಯಕ್ಕೆ 3ನೇ ಸಿಎಂ ಸಿಗ್ತಾರೆ; ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್
ಶಾಸಕ ಪ್ರಿಯಾಂಕ್ ಖರ್ಗೆ
Follow us
TV9 Web
| Updated By: sandhya thejappa

Updated on:May 02, 2022 | 11:33 AM

ಮೈಸೂರು: 545 PSI ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge), ಬಿಜೆಪಿಯವರು ಕುಣಿಯಲಾರದೆ ನೆಲ ಡೊಂಕು ಎನ್ನುತ್ತಿದ್ದಾರೆ. ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra) ರಾಜೀನಾಮೆ ನೀಡಬೇಕು. ಆರಗ ಜ್ಞಾನೇಂದ್ರಗೆ ಆಡಳಿತ ನಡೆಸಲು ಆಗುತ್ತಿಲ್ಲ. ಗೃಹ ಸಚಿವರಿಗೆ ಕೇಶವ ಕೃಪಾದಿಂದ ಆದೇಶ ಬರುತ್ತಿದೆ. ಸಿಐಡಿ ಪೊಲೀಸರು ವಶದಲ್ಲಿ ಇರುವವರು ಕಿಂಗ್​​ಪಿನ್​ಗಳಲ್ಲ. ಕೇವಲ ಮಧ್ಯವರ್ತಿಗಳು. ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರದ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಮುಂದುವರಿದು ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ ಬೈಟ್​ಕಾಯಿನ್​ ಪ್ರಕರಣ ಚುರುಕುಗೊಂಡರೆ ರಾಜ್ಯಕ್ಕೆ 3ನೇ ಮುಖ್ಯಮಂತ್ರಿ ಸಿಗಲಿದ್ದಾರೆ ಅಂತ ಮೈಸೂರಿನಲ್ಲಿ ಶಾಸಕ ಪ್ರಿಯಾಂಕ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.

ಮೋದಿ ಜತೆ ಪೋಟೋ ಇದೆ ಅಂತಾ ತನಿಖೆ ನಿಲ್ಲಿಸುತ್ತೀರಾ? ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಸರ್ಕಾರ ಪ್ರಕರಣವನ್ನ ಮುಚ್ಚಿ ಹಾಕುವ ಪ್ರಯತ್ನ ನಡೆಸಿತ್ತು ಎಂದು ಹೇಳಿದ್ದಾರೆ. ಪ್ರತಾಪ್ ಸಿಂಹ ಟೀಕೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ ಶಾಸಕರು, Am Not Answerable to ಪ್ರತಾಪಸಿಂಹ. ನನಗೆ ಯಾವ ನೋಟಿಸ್ ನೀಡಲಾಗಿದೆ ಎಂದು ತಿಳಿಯಲಿ. ಸಂಸದ ಪ್ರತಾಪ್ ಸಿಂಹಾಗೆ ಕಾನೂನಿನ ಬಗ್ಗೆ ಅರಿವಿಲ್ಲ. ನೋಟಿಸ್‌ಗೆ ಕಾನೂನು ಪ್ರಕಾರ ನಡೆದುಕೊಂಡಿದ್ದೇನೆ. ಪ್ರತಾಪಸಿಂಹ ಮೊದಲು ಅವರ ಕೆಲಸ ಸರಿಯಾಗಿ ಮಾಡಲಿ. ಮೋದಿ ಮೈಸೂರನ್ನ ಪ್ಯಾರಿಸ್ ಮಾಡುತ್ತೇನೆ ಅಂದಿದ್ದರು. ಪ್ರತಾಪ್ ಸಿಂಹ ಪ್ಯಾರಿಸ್ ಮಾಡುವ ಬಗ್ಗೆ ಗಮನ ಹರಿಸಲಿ ಎಂದು ಹೇಳಿದರು.

ಪ್ರಿಯಾಂಕ್ ಖರ್ಗೆಗೆ ಸುನಿಲ್ ಕುಮಾರ್ ತಿರುಗೇಟು: ಪ್ರಿಯಾಂಕ್ ಖರ್ಗೆ ದಾಖಲೆ ಇಲ್ಲದೆ ಮಾತನಾಡುತ್ತಾರೆ ಅಂತ ಉಡುಪಿಯಲ್ಲಿ ಸಚಿವ ವಿ.ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ. ಪ್ರಿಯಾಂಕ್ ಎಂದೂ ಗಂಭೀರ ಆರೋಪಗಳನ್ನ ಮಾಡಿಲ್ಲ. ಪ್ರಚಾರದ ಹುಚ್ಚಿಂದ ನಿರಂತರ ಸುದ್ದಿಗೋಷ್ಠಿ ಮಾಡುತ್ತಾರೆ. ಪ್ರಿಯಾಂಕ್ ಬಿಟ್​ಕಾಯಿನ್ ವಿಚಾರದಲ್ಲಿ ಸಾಧಿಸಿದ್ದೇನು? ಪೊಲೀಸರಿಗೆ ಸಿಗದ ವಾಯ್ಸ್ ರೆಕಾರ್ಡ್ ಖರ್ಗೆಗೆ ಸಿಗುತ್ತೆ. ಇದೇ ಕಾರಣಕ್ಕೆ ಪ್ರಿಯಾಂಕ್ ತನಿಖೆಯಾಗಬೇಕು ಎಂದಿದ್ದೆ. ನೋಟಿಸ್ ಕೊಟ್ಟರೆ ಪ್ರಿಯಾಂಕ್ ಉತ್ತರ ಕೊಡಲ್ಲ ಅಂತಾರೆ. ತಲೆಮರೆಸಿಕೊಂಡ ಆರೋಪಿಗಳ ರೀತಿ ಖರ್ಗೆ ವರ್ತಿಸ್ತ್ತಾರೆ ಎಂದರು.

ಇದನ್ನೂ ಓದಿ

IPL 2022 Points Table: ಮೊದಲೆರಡು ಸ್ಥಾನದಲ್ಲಿ ಎರಡು ಹೊಸ ತಂಡಗಳು: ಐಪಿಎಲ್ 2022 ಅಂಕಪಟ್ಟಿ ಇಲ್ಲಿದೆ ನೋಡಿ

Tax Exemption: ಪೋಷಕರಿಗೆ ನೀಡುವ ಹಣಕ್ಕೆ ದೊರೆಯಲಿದೆ ತೆರಿಗೆ ವಿನಾಯಿತಿ; ಯಾವ್ಯಾವುದಕ್ಕೆ ಸಿಗಲಿದೆ ಇಲ್ಲಿದೆ ವಿವರ

Published On - 11:18 am, Mon, 2 May 22

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?