AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಬಗ್ಗೆ ಅಸಮಾಧಾನ ಇಲ್ಲ; ಆದರೆ ಯಾರೇ ಆಗಲಿ ಪಕ್ಷಾಂತರ ಮಾಡುವುದು ತಪ್ಪು -ಸಚಿವ ಎಂಟಿಬಿ ನಾಗರಾಜ್ ಮಾಧ್ಯಮ ಹೇಳಿಕೆ

MTB Nagaraj: ಬಿಜೆಪಿಯಲ್ಲಿ ನನಗೆ ಯಾವುದೇ ಅಸಮಾಧಾನ ಇಲ್ಲ. ಪಕ್ಷ ಮತ್ತು ನಾಯಕರು ನನ್ನನ್ನು ವಿಶ್ವಾಸದಿಂದ ನಡೆಸಿಕೊಳ್ಳುತ್ತಿದ್ದಾರೆ. ನಾನು ನನ್ನ ಜೀವನದಲ್ಲಿ ಯಾವುದೇ ತಪ್ಪು ಮಾಡಿಲ್ಲ. ಮಾಡಿರುವ ಒಂದೇ ತಪ್ಪೆಂದರೆ ಅದು ಪಕ್ಷಾಂತರ ಮಾಡಿದ್ದು ಎಂಬ ಹೇಳಿಕೆ ನೈತಿಕವಾದದ್ದು ಮತ್ತು ಸೈದ್ಧಾಂತಿಕವಾದದ್ದು - ಸಚಿವ ಎಂಟಿಬಿ ನಾಗರಾಜ್

ಬಿಜೆಪಿ ಬಗ್ಗೆ ಅಸಮಾಧಾನ ಇಲ್ಲ; ಆದರೆ ಯಾರೇ ಆಗಲಿ ಪಕ್ಷಾಂತರ ಮಾಡುವುದು ತಪ್ಪು -ಸಚಿವ ಎಂಟಿಬಿ ನಾಗರಾಜ್ ಮಾಧ್ಯಮ ಹೇಳಿಕೆ
ಬಿಜೆಪಿ ಬಗ್ಗೆ ಅಸಮಾಧಾನ ಇಲ್ಲ; ಆದರೆ ಯಾರೇ ಆಗಲಿ ಪಕ್ಷಾಂತರ ಮಾಡುವುದು ತಪ್ಪು -ಸಚಿವ ಎಂಟಿಬಿ ನಾಗರಾಜ್ ಮಾಧ್ಯಮ ಹೇಳಿಕೆ
TV9 Web
| Updated By: ಸಾಧು ಶ್ರೀನಾಥ್​|

Updated on: May 02, 2022 | 3:33 PM

Share

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ (Congress) ರಾಜೀನಾಮೆ ನೀಡಿ, ಬಿಜೆಪಿ ಪಕ್ಷ ಸೇರಿಕೊಂಡು ಪ್ರಸ್ತುತ ಸಚಿವರಾಗಿರುವ ಎಂಟಿಬಿ ನಾಗರಾಜ್ ಅವರು (Municipal Administration Minister MTB Nagaraj) ತಮ್ಮ ರಾಜಕೀಯ ಬೆಳವಣಿಗೆ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಬಿಜೆಪಿ (BJP) ಬಗ್ಗೆ ಅಸಮಾಧಾನ ಇಲ್ಲ. ನನ್ನ ಹೇಳಿಕೆಗೆ ಬೇರೆ ಅರ್ಥ ಬೇಡ. ಪಕ್ಷಾಂತರದ ಬಗೆಗಿನ ನನ್ನ ಹೇಳಿಕೆ ನೈತಿಕ ಮತ್ತು ಸೈದ್ಧಾಂತಿಕವಾದದ್ದು. ಯಾರೇ ಆಗಲಿ ಪಕ್ಷಾಂತರ ಮಾಡುವುದು ತಪ್ಪು ಎನ್ನುವ ಅರ್ಥದಲ್ಲಿ ಮಾತನಾಡಿದ್ದೇನೆ. ಬಿಜೆಪಿ ಬಗ್ಗೆ ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ. ನಾನು ಬಿಜೆಪಿಗೆ ಬಂದಿರುವುದನ್ನು ತಪ್ಪು ಎಂದು ಭಾವಿಸಿಯೂ ಇಲ್ಲ, ಹೇಳಿಯೂ ಇಲ್ಲ ಎಂದು ಎಂಟಿಬಿ ನಾಗರಾಜ್ ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿಯಲ್ಲಿ ನನಗೆ ಯಾವುದೇ ಅಸಮಾಧಾನ ಇಲ್ಲ. ಪಕ್ಷ ಮತ್ತು ನಾಯಕರು ನನ್ನನ್ನು ವಿಶ್ವಾಸದಿಂದ ನಡೆಸಿಕೊಳ್ಳುತ್ತಿದ್ದಾರೆ. ನಾನು ನನ್ನ ಜೀವನದಲ್ಲಿ ಯಾವುದೇ ತಪ್ಪು ಮಾಡಿಲ್ಲ. ಮಾಡಿರುವ ಒಂದೇ ತಪ್ಪೆಂದರೆ ಅದು ಪಕ್ಷಾಂತರ ಮಾಡಿದ್ದು ಎಂಬ ಹೇಳಿಕೆ ನೈತಿಕವಾದದ್ದು ಮತ್ತು ಸೈದ್ಧಾಂತಿಕವಾದದ್ದು. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಈಗಲೂ ಬಿಜೆಪಿಯಲ್ಲಿದ್ದೇನೆ, ಮುಂದೆಯೂ ಇರುತ್ತೇನೆ. ಬಿಜೆಪಿಯಲ್ಲಿ ನನಗೆ ಯಾವುದೇ ಅಸಮಾಧಾನ ಇಲ್ಲ. ಪಕ್ಷ ಮತ್ತು ನಾಯಕರು ನನ್ನನ್ನು ವಿಶ್ವಾಸದಿಂದ ನಡೆಸಿಕೊಳ್ಳುತ್ತಿದ್ದಾರೆ ಎಂದು ಸಚಿವ ಎಂಟಿಬಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪಾಪದ ಕೆಲಸ ಮಾಡಿದ್ದರಲ್ಲಾ; ಈಗ ಅವರಿಗೆ ಅರಿವಾಗಿದೆ ಅಷ್ಟೇ – ಸಿದ್ದರಾಮಯ್ಯ ವಿಜಯಪುರ: ನಾನು ಜೀವನದಲ್ಲಿ ಯಾವುದೇ ತಪ್ಪು ಮಾಡಿಲ್ಲ. ಮಾಡಿರುವ ಒಂದೇ ತಪ್ಪೆಂದರೆ ಅದು ಪಕ್ಷಾಂತರ ಮಾಡಿದ್ದು ಎಂಬ ಹೇಳಿಕೆ ನೀಡಿ, ಗೊಂದಲ ಮೂಡಿಸಿರುವ ಸಚಿವ ಎಂ ಟಿ ಬಿ ನಾಗರಾಜ್ ಹೇಳಿಕೆ ಬಗ್ಗೆ ಅವರ ಹಳೆಯ ರಾಜಕೀಯ ಮಾರ್ಗದರ್ಶಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಶಿಷ್ಯನ ಹೇಳಿಕೆ ಬಗ್ಗೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್ ಎಚ್ ಗ್ರಾಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಪಕ್ಷಾಂತರ ಮಾಡಿ ತಪ್ಪು ಮಾಡಿದೆವು ಎಂದು ಸಚಿವ ಎಂ ಟಿ ಬಿ ನಾಗರಾಜ್ ಹೇಳಿದ್ದಾರೆ. ಪಾಪಾ ಈಗಲಾದರೂ ಅವರಿಗೆ ತಾವು ಮಾಡಿದಂತಹ ಪಾಪದ ಕೆಲಸದ ಬಗ್ಗೆ ಅರಿವಾಗಿದೆ ಎಂದಿದ್ದಾರೆ. ಇನ್ನು 2023 ರ ಅಸೆಂಬ್ಲಿ ಚುನಾವಣೆಯಲ್ಲಿ ಸಿದ್ದರಾಮಯ್ಯ ನಮ್ಮಲ್ಲಿ ಸ್ಪರ್ಧೆ ಮಾಡುವಂತೆ ಬಿಜೆಪಿಯ ಕೆಲ ಶಾಸಕರು ಕರೆಯುತ್ತಿರೋ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾನು‌ ಇನ್ನೂ ತೀರ್ಮಾನ ಮಾಡಿಲ್ಲಾ! ಎನ್ನುತ್ತಾ‌ ಹೊರಟರು.

Also Read: PSI Recruitment Rank Holders: ಇವರೇ ರ್ಯಾಂಕ್​ ಶೂರರು, ಆದರೆ ಪರೀಕ್ಷಾ ಅಕ್ರಮವೆಸಗಿರುವ ಆರೋಪಿಗಳೂ ಹೌದು!

Also Read: ನಾನು ಭ್ರಷ್ಟಾಚಾರರಹಿತ, ಕಳಂಕರಹಿತ ರಾಜಕಾರಣ ಮಾಡುತ್ತಿದ್ದೇನೆ; ಉಗ್ರಪ್ಪ ಆರೋಪಕ್ಕೆ ತಿರುಗೇಟು ಕೊಟ್ಟ ಅಶ್ವತ್ಥ್ ನಾರಾಯಣ