PSI Recruitment Rank Holders: ಇವರೇ ರ‍್ಯಾಂಕ್ ಶೂರರು, ಆದರೆ ಪರೀಕ್ಷಾ ಅಕ್ರಮವೆಸಗಿರುವ ಆರೋಪಿಗಳೂ ಹೌದು!
22 ಅಭ್ಯರ್ಥಿಗಳ ಒ ಎಮ್ ಆರ್ ಪ್ರತಿಗಳನ್ನು ತಮ್ಮ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಅಭ್ಯರ್ಥಿಗಳ ಮೂಲ ಪ್ರತಿ ಮತ್ತು ಕಾರ್ಬನ್ ಒಎಮ್ ಆರ್ ಶೀಟ್ನಲ್ಲಿ ವ್ಯತ್ಯಾಸ ಕಂಡುಬಂದ ಕಾರಣ 22 ಅಭ್ಯರ್ಥಿಗಳ ಪೈಕಿ 12 ಜನರನ್ನು ಬಂಧಿಸಲಾಗಿದೆ ಮತ್ತು ಉಳಿದ 10 ಅಭ್ಯರ್ಥಿಗಳಿಗಾಗಿ ಜಾಲ ಬೀಸಲಾಗಿದೆ.
ಬೆಂಗಳೂರು: 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ (PSI Recruitment) ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಲ್ಲಿ ಬಂಧಿತ 12 ಆರೋಪಿಗಳ ರ್ಯಾಂಕ್ ಪಟ್ಟಿ ಮಾಹಿತಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಒಟ್ಟು ಹನ್ನೆರಡು ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತನಿಖೆಯ ಭಾಗವಾಗಿ ಸಿಐಡಿ ಅಧಿಕಾರಿಗಳು 22 ಅಭ್ಯರ್ಥಿಗಳ ಒ ಎಮ್ ಆರ್ ಪ್ರತಿಗಳನ್ನು ತಮ್ಮ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಅಭ್ಯರ್ಥಿಗಳ ಮೂಲ ಪ್ರತಿ ಮತ್ತು ಕಾರ್ಬನ್ ಒಎಮ್ ಆರ್ ಶೀಟ್ನಲ್ಲಿ ವ್ಯತ್ಯಾಸ ಕಂಡುಬಂದ ಕಾರಣ 22 ಅಭ್ಯರ್ಥಿಗಳ ಪೈಕಿ 12 ಜನರನ್ನು ಬಂಧಿಸಲಾಗಿದೆ ಮತ್ತು ಉಳಿದ 10 ಅಭ್ಯರ್ಥಿಗಳಿಗಾಗಿ ಜಾಲ ಬೀಸಲಾಗಿದೆ.
ಬಂಧಿತ ಆರೋಪಿಗಳ ರ್ಯಾಂಕ್ ಪಟ್ಟಿ
1) ರಘುವೀರ್ ಹೆಚ್ ಯು – 7 ನೇ ರ‍್ಯಾಂಕ್- 1paper – 29.5 2paper – 129.75 2) ಚೇತನ್ ಕುಮಾರ್.ಎಂ ಸಿ – 21 ನೇ ರ‍್ಯಾಂಕ್- 1paper -28 2paper – 122.5 3)ವೆಂಕಟೇಶ್ ಗೌಡ ಸಿ, 42 ನೇ ರ‍್ಯಾಂಕ್- 1paper – 26 2paper – 120 4) ಮಮತೇಸ್ ಗೌಡ – 27ನೇ ರ‍್ಯಾಂಕ್- 1paper – 22 2paper – 103.5 5) ಮಧು ಆರ್- 12ನೇ ರ‍್ಯಾಂಕ್- 1paper – 27 2paper – 129.75 6)ದಿಲೀಪ್ ಕುಮಾರ್ ಸಿಕೆ,- 37ನೇ ರ‍್ಯಾಂಕ್- 1paper – 17.5 2paper – 129.75 7)ಪ್ರವೀಣ್ ಕುಮಾರ್ ಹೆಚ್‌ಆರ್,- 6ನೇ ರ‍್ಯಾಂಕ್- 1paper – 31.5 2paper – 127.75 8)ಸೂರ್ಯನಾರಾಯಣ, 22-ನೇ ರ‍್ಯಾಂಕ್- 1paper – 24.5 2paper – 125.62 9) ನಾಗರಾಜ ಸಿ ಎಂ -11 ನೇ ರ‍್ಯಾಂಕ್- 1paper -31 2paper – 126
ಪಿ.ಎಸ್.ಐ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆಯಲ್ಲಿ ಪ್ರಮುಖ ಅರೋಪಿಯೆಂದು ಹೇಳಲಾಗುತ್ತಿರುವ ಕಲಬುರಗಿಯಲ್ಲಿ ಶಿಕ್ಷಣ ಸಂಸ್ಥೆಯನ್ನು ನಡೆಸುವ ದಿವ್ಯಾ ಹಾಗರಗಿ ಅವರನ್ನು ಬಂಧಿಸಿದ ಬಳಿಕ ಹಲವಾರು ವಿಷಯಗಳು ಬೆಳಕಿಗೆ ಬರುತ್ತಿವೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ದೂರಿನನ್ವಯ ಬೆಂಗಳೂರಿನಲ್ಲಿ ಹೈಗ್ರೌಂಡ್ಸ್ ಠಾಣೆಯ ಮೂಲಕ ಬಂಧನಕ್ಕೊಳಗಾಗಿರುವ 12 ಅಭ್ಯರ್ಥಿಗಳನ್ನು ಪೊಲೀಸ್ ಕಸ್ಟಡಿಗೆ ಕಳಿಸಲಾಗಿದೆ. ಸದರಿ ಆರೋಪಿಗಳನ್ನು ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ಸಿಐಡಿಯ ದೂರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಬಂಧಿತ ಅರೋಪಗಳು ಬೆಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪಿ ಎಸ್ ಐ ನೇಮಕಾತಿ ಲಿಖಿತ ಪರೀಕ್ಷೆ ಬರೆದಿದ್ದರು.
ಅಂದಹಾಗೆ, 545 ಪಿಎಸ್ಐ ಪರೀಕ್ಷೆ ರದ್ದುಗೊಳಿಸಿ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದೆ. ಸರ್ಕಾರದ ಅದೇಶಕ್ಕೆ ರಾಜ್ಯಪಾಲರಿಂದ ಅಂಕಿತ ಬಿದ್ದಿದೆ. ಪರೀಕ್ಷಾ ಅಕ್ರಮ ಬಯಲಿಗೆ ಬಂದ ಬಳಿಕ ರಾಜ್ಯ ಸರ್ಕಾರವು ತನಿಖೆಯ ಹೊಣೆಯನ್ನು ಸಿಐಡಿಯ ಹೆಗಲಿಗೆ ಹಾಕಿತ್ತು. ಉತ್ತೀರ್ಣರಾಗಿದ್ದ ಅಭ್ಯರ್ಥಿಗಳ ವಿಚಾರಣೆ ನಡೆಸಿದ ಸಿಐಡಿ ರಾಜ್ಯ ಸರ್ಕಾರಕ್ಕೆ ಮಧ್ಯಂತರ ತನಿಖಾ ವರದಿ ಸಲ್ಲಿಸಿತ್ತು. ವರದಿಯನುಸಾರ 2020-21ನೇ ಸಾಲಿನಲ್ಲಿ ನೇಮಕಾತಿ ಅಂಗವಾಗಿ ನಡೆದ ಪರೀಕ್ಷೆಯನ್ನು ಸರ್ಕಾರ ರದ್ದುಗೊಳಿಸಿತ್ತು. ಪಾಸಾಗಿದ್ದ ಅಭ್ಯರ್ಥಿಗಳು ಇನ್ನು ಮತ್ತೊಮ್ಮೆ ಪರೀಕ್ಷೆ ಬರೆಯಬೇಕು. ರಾಜ್ಯಪಾಲರ ಆದೇಶಾನುಸಾರ ಸರ್ಕಾರ ಈ ಸಂಬಂಧ ರಾಜ್ಯಪತ್ರ ಹೊರಡಿಸಿದೆ. ಹಾಗೆಯೇ, ಎಲ್ಲಾ 545 ಯಶಸ್ವಿ ಅಭ್ಯರ್ಥಿಗಳ ಒಎಮ್ ಅರ್ ಹಾಳೆಗಳ ವಿಧಿವಿಜ್ಞಾನ ಪರೀಕ್ಷೆ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಲ್ಲಾ 92 ಪರೀಕ್ಷಾ ಕೇಂದ್ರಗಳಿಂದ ಡಿಜಿಟಲ್ ತಾಂತ್ರಿಕ ಪುರಾವೆಗಳ ಸಂಗ್ರಹಿಸಿ, ವಿಶ್ಲೇಷಣೆ ಮಾಡಲಾಗುವುದು. ಈ ಅವ್ಯವಹಾರದಲ್ಲಿ ಇತರ ವಿಧಾನಗಳನ್ನು ಅನುಸರಿಸಿದ್ದಲ್ಲಿ, ಪತ್ತೆಹಚ್ಚುವುದು ಮತ್ತು ತನಿಖೆ ಮಾಡಲಾಗುವುದು ಅಂತ ಮೂಲಗಳಿಂದ ಗೊತ್ತಾಗಿದೆ.ವಿಚಾರಣೆ ವೇಳೆ ಹಲವರು ತಲೆಮರೆಸಿಕೊಳ್ಳಬಹುದಾದ ಸಾಧ್ಯತೆಯಿರುವುದರಿಂದ ಅಕ್ರಮದಲ್ಲಿ ಭಾಗಿಯಾಗಿರಬಹುದಾದ ಅಭ್ಯರ್ಥಿಗಳು ಮತ್ತು ಪಿತೂರಿಗಾರರನ್ನು ಬಂಧಿಸಿ ಮತ್ತು ಪ್ರಶ್ನಿಸಲು ಸಿಐಡಿ ತೀರ್ಮಾನಿಸಿದೆ.
ಇನ್ನಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:15 pm, Mon, 2 May 22