AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆನ್ನೈ- ಮೈಸೂರು ಶತಾಬ್ದಿ ಎಕ್ಸ್​ಪ್ರೆಸ್​ ದಕ್ಷಿಣ ವಲಯದ ಮೊದಲ ಪ್ರಮಾಣೀಕೃತ ರೈಲು

Chennai - Mysore Shatabdi Express: ರೈಲ್ವೆ ಸಚಿವಾಲಯದ ಪ್ರಕಾರ, ಶತಾಬ್ದಿ ಎಕ್ಸ್‌ಪ್ರೆಸ್ ( ರೈಲು ಸಂಖ್ಯೆ: 12007/12008) ದಕ್ಷಿಣ ವಲಯದ ಮೊದಲ ರೈಲು ಸೇವೆಯಾಗಿದೆ. ಜೊತೆಗೆ ಇದು ಐಎಂಎಸ್ ಪ್ರಮಾಣೀಕರಣವನ್ನು ಪಡೆದುಕೊಂಡಿದೆ.

ಚೆನ್ನೈ- ಮೈಸೂರು ಶತಾಬ್ದಿ ಎಕ್ಸ್​ಪ್ರೆಸ್​ ದಕ್ಷಿಣ ವಲಯದ ಮೊದಲ ಪ್ರಮಾಣೀಕೃತ ರೈಲು
ಚೆನ್ನೈ- ಮೈಸೂರು ಶತಾಬ್ದಿ ಎಕ್ಸ್​ಪ್ರೆಸ್​
Follow us
TV9 Web
| Updated By: preethi shettigar

Updated on: Nov 01, 2021 | 4:18 PM

ಚೆನ್ನೈ- ಮೈಸೂರು ಶತಾಬ್ದಿ ಎಕ್ಸ್​ಪ್ರೆಸ್​ ದಕ್ಷಿಣ ವಯಲದಲ್ಲಿ ಮೊದಲ ಪ್ರಮಾಣೀಕೃತ ರೈಲು ಎಂದು ಹೆಸರು ಪಡೆದುಕೊಂಡಿದೆ. ರೈಲ್ವೆ ಸಚಿವಾಲಯದ ಪ್ರಕಾರ, ಶತಾಬ್ದಿ ಎಕ್ಸ್‌ಪ್ರೆಸ್ ( ರೈಲು ಸಂಖ್ಯೆ: 12007/12008) ದಕ್ಷಿಣ ವಲಯದ ಮೊದಲ ರೈಲು ಸೇವೆಯಾಗಿದೆ. ಜೊತೆಗೆ ಇದು ಐಎಂಎಸ್ ​(Integrated Management System) ಪ್ರಮಾಣೀಕರಣವನ್ನು ಪಡೆದುಕೊಂಡಿದೆ. ರೈಲಿನ ಪ್ರಾಥಮಿಕ ನಿರ್ವಹಣೆಯನ್ನು ಭಾರತೀಯ ರೈಲ್ವೆಯ ಚೆನ್ನೈ ವಿಭಾಗದ ಬೇಸಿನ್ ಬ್ರಿಡ್ಜ್ ಕೋಚಿಂಗ್ ಡಿಪೋ ನಿರ್ವಹಿಸುತ್ತದೆ.

ಚೆನ್ನೈ-ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್ ಸಾಧಿಸಿದ ಕೆಲವು ಮಹತ್ವದ ಮೈಲಿಗಲ್ಲುಗಳು ಈ ಕೆಳಗಿನಂತಿವೆ:

• ಚೆನ್ನೈ – ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್ ಅನ್ನು 11 ಮೇ 1994 ರಂದು ಪರಿಚಯಿಸಲಾಯಿತು. • ಇದು ದಕ್ಷಿಣ ರೈಲ್ವೆ ವಲಯದಲ್ಲಿ ಮೊದಲ (ISO 9001:2001) ಪ್ರಮಾಣೀಕೃತ ರೈಲು. • ರೈಲನ್ನು 1 ಜುಲೈ 2009 ರಂದು ಅತ್ಯಾಧುನಿಕ ಲಿಂಕ್ ಹಾಫ್‌ಮನ್ ಬುಶ್ ಕೋಚ್​ನೊಂದಿಗೆ ಸೇರಿಸಲಾಯಿತು. • ಇದು ಹೆಚ್​ಒಜಿ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹೀಗಾಗಿ, ಇದು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಖರ್ಚನ್ನು ಕಡಿಮೆ ಮಾಡುತ್ತದೆ. • ಶೇಕಡಾ 100 ರಷ್ಟು ಪ್ರಯಾಣಿಕರಿಗೆ ಸೌಕರ್ಯಗಳನ್ನು ನಿರ್ವಹಿಸಲು ಹೆಸರುವಾಸಿಯಾಗಿದೆ. ಶೇಕಡಾ 100 ರಷ್ಟು ಹೆಚ್​ಒಜಿ, ಶೇಕಡಾ 100 ರಷ್ಟು ಬಯೋಡೈಜೆಸ್ಟರ್ ಶೌಚಾಲಯ ವ್ಯವಸ್ಥೆ ಹೊಂದಿದೆ. • ಗುಣಮಟ್ಟದ ವಿದ್ಯುತ್ ಸೌಕರ್ಯಗಳ ಜೊತೆಗೆ ಆಂತರಿಕ ಬೆಳಕನ್ನು ಒದಗಿಸುತ್ತದೆ. • ಸ್ವಚ್ಛತೆಗೆ ಹೆಸರುವಾಸಿಯಾಗಿದೆ. • ಎಲ್ಇಡಿ ದೀಪಗಳು ಹಾಗೂ ಇನ್ನಿತರ ವ್ಯವಸ್ಥೆಯಿಂದ ವಿದ್ಯುತ್ ಶಕ್ತಿಯ ಸಂರಕ್ಷಣೆ ಮಾಡಲಾಗುತ್ತದೆ. • ಬ್ರೈಲ್ ಚಿಹ್ನೆಯಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. • ವೈಫೈ ವ್ಯವಸ್ಥೆಯನ್ನು ಚೆನ್ನೈ- ಮೈಸೂರು ಶತಾಬ್ದಿ ಎಕ್ಸ್​ಪ್ರೆಸ್​ ಹೊಂದಿದೆ. • ಪ್ರಯಾಣಿಕರ ಅನುಕೂಲಕ್ಕಾಗಿ ಮುಖ್ಯವಾಗಿ ಶೌಚಾಲಯಗಳಲ್ಲಿ ಸ್ವಯಂಚಾಲಿತ ಏರ್ ಫ್ರೆಶನರ್‌ಗಳು ಇದೆ. • ಶತಾಬ್ದಿಯು ಆರಾಮದಾಯಕ ಆಸನಗಳನ್ನು ಹೊಂದಿದೆ. • ಎಲ್ಲಾ ಚೆನ್ನೈ-ಮೈಸೂರು ಶತಾಬ್ದಿ ರೈಲುಗಳಿಗೆ ಪವರ್ ಕಾರ್‌ಗಳಲ್ಲಿ  ಅಗ್ನಿಶಾಮಕ ವ್ಯವಸ್ಥೆ ಮಾಡಲಾಗಿದೆ. • ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ಬೋಗಿಗಳಲ್ಲಿ ತುರ್ತು ಸಂಪರ್ಕ ಸಂಖ್ಯೆಯನ್ನು ಪ್ರದರ್ಶಿಸುತ್ತದೆ.

ಇದನ್ನೂ ಓದಿ: ಮುಂಬೈ ರೈಲುಗಳಲ್ಲಿ ಪ್ರಯಾಣಿಸಲು ಎರಡೂ ಡೋಸ್ ಕೊವಿಡ್ ಲಸಿಕೆ ಪಡೆಯುವುದು ಕಡ್ಡಾಯ

ಸರ್ಕಾರಿ ಶಾಲೆಗೆ ಆಕರ್ಷಕ ರೈಲು ಬಂಡಿ ಪೇಂಟಿಂಗ್; ಮಕ್ಕಳನ್ನು ಶಾಲೆಗೆ ಕರೆತರಲು ವಿನೂತನ ಪ್ರಯತ್ನ

ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ