ಸಚಿವ ಮಹದೇವಪ್ಪ ಕ್ಷೇತ್ರದ ಮಿನಿ ವಿಧಾನಸೌಧದಲ್ಲಿ ವಿದ್ಯುತ್ ಕಡಿತ, ಸರ್ಕಾರಿ ಕೆಲಸಗಳು ಸ್ಥಗಿತ

| Updated By: ರಮೇಶ್ ಬಿ. ಜವಳಗೇರಾ

Updated on: Oct 12, 2023 | 11:50 AM

ಕರ್ನಾಟಕದಲ್ಲಿ ವಿದ್ಯುತ್ ಕೊರತೆ ಎದುರಾಗಿದೆ. ಮತ್ತೊಂದೆಡೆ ಸರ್ಕಾರಿ ಕಚೇರಿಗಳು ವಿದ್ಯುತ್ ಬಿಲ್ ಪಾವತಿಸಿದೆ ಕೋಟಿಗಟ್ಟಲ್ಲೇ ಹಣ ಬಾಕಿ ಉಳಿಸಿಕೊಂಡಿವೆ. ಅದರಂತೆ ಮುಖ್ಯಮಂತ್ರಿ ತವರು ಜಿಲ್ಲೆ, ಸಚಿವ ಡಾ ಹೆಚ್​ಸಿ ಮಹದೇವಪ್ಪ ಪ್ರತಿನಿಧಿಸುವ ಟಿ ನರಸೀಪುರ ತಾಲೂಕು ಆಡಳಿತ ಸಹ ಬಿಲ್​ ಬಾಕಿ ಉಳಿಸಿಕೊಂಡಿದೆ. ಇದರಿಂದ ಚೆಸ್ಕಾಂ ಮಿನಿ ವಿಧಾನಸೌಧದ ಕರೆಂಟ್ ಕಟ್ ಮಾಡಿದೆ.

ಸಚಿವ ಮಹದೇವಪ್ಪ ಕ್ಷೇತ್ರದ ಮಿನಿ ವಿಧಾನಸೌಧದಲ್ಲಿ ವಿದ್ಯುತ್ ಕಡಿತ, ಸರ್ಕಾರಿ ಕೆಲಸಗಳು ಸ್ಥಗಿತ
ಟಿ.ನರಸೀಪುರ ಮಿನಿ ವಿಧಾನಸೌಧ
Follow us on

ಮೈಸೂರು, (ಅಕ್ಟೋಬರ್ 12): ಕರ್ನಾಟಕದಲ್ಲಿ (Karnataka) ಮಳೆ ಮಾಯವಾಗಿದೆ. ಡ್ಯಾಂಗಳೆಲ್ಲಾ ಖಾಲಿಯಾಗಿವೆ. ಈ ಬರದ ನಡುವೆ ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಾಗಿದೆ. ಇದರಿಂದ ವಿದ್ಯುತ್ ನಿಗಮಗಳು ಬೇರೆ-ಬೇರೆ ನೆಪದಲ್ಲಿ ಲೋಡ್​ ಶೆಡ್ಡಿಂಗ್​ ಆರಂಭಿಸಿವೆ. ಇದರ ಮಧ್ಯೆ ರಾಜ್ಯ ಸರಕಾರ ಗೃಹಜ್ಯೋತಿ ಯೋಜನೆಯಡಿ 200 ಯುನಿಟ್​ ವರೆಗೂ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಮತ್ತೊಂದೆಡೆ ಸರ್ಕಾರಿ ಕಚೇರಿಗಳು ವಿದ್ಯುತ್​ ಬಿಲ್ ಪಾವತಿಸಿದೇ ಭಾರೀ ಮೊತ್ತ ಬಾಕಿ ಉಳಿಸಿಕೊಂಡಿವೆ. ಅದರಂತೆ ಮುಖ್ಯಮಂತ್ರ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನ ಟಿ.ನರಸೀಪುರ ತಾಲೂಕು ಆಡಳಿತ ವಿದ್ಯುತ್​ ಬಿಲ್​ ಮೊತ್ತ ಬಾಕಿ ಉಳಿಸಿಕೊಂಡಿದೆ. ಇದರಿಂದ ಚೆಸ್ಕಾಂ(Chamundeshwari Electricity Supply Corporation Limited)  ಟಿ.ನರಸೀಪುರದ ಮಿನಿ ವಿಧಾನಸೌಧದ ಕರೆಂಟ್ ಕಟ್ ಮಾಡಿದೆ.

ಹೌದು….ಸಮಾಜ ಕಲ್ಯಾಣ ಸಚಿವ ಹೆಚ್​ಸಿ ಮಹದೇವಪ್ಪ ಅವರ ಕ್ಷೇತ್ರ ಟಿ.ನರಸೀಪುರದಲ್ಲಿರುವ ಮಿನಿ ವಿಧಾನಸೌಧದ ವಿದ್ಯುತ್​ ಕಡಿತಗೊಳಿಸಲಾಗಿದೆ. ತಾಲೂಕು ಆಡಳಿತ ಚೆಸ್ಕಾಂಗೆ 2,45,000 ಬಾಕಿ ಬಿಲ್ ಉಳಿಸಿಕೊಂಡಿದೆ. ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಚೆಸ್ಕಾಂ, ಮಿನಿ ವಿಧಾನಸೌಧದ ವಿದ್ಯುತ್ ಕಡಿತಗೊಳಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್​ ಇಲ್ಲದೇ ಮಿನಿ ವಿಧಾನಸೌಧದಲ್ಲಿ ಸರ್ಕಾರಿ ಕೆಲಸಗಳು ಸ್ಥಗಿತಗೊಂಡಿವೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಒಂದೆಡೆ ವಿದ್ಯುತ್​ ಬೇಡಿಕೆ ಹೆಚ್ಚಳ, ಮತ್ತೊಂದೆಡೆ ಉತ್ಪಾದನೆಯಲ್ಲಿ ಕುಸಿತ: ಇಲ್ಲಿದೆ ಅಂಕಿ-ಅಂಶ

ನರಸೀಪುರ ಮಾತ್ರ ಒಂದೇ ಅಲ್ಲ ರಾಜ್ಯದಲ್ಲಿ ಸರ್ಕಾರಿ ಕಚೇರಿಗಳು ವಿದ್ಯುತ್​ ಬಿಲ್ ಪಾವತಿಸಿದೇ ಬಾಕಿ ಉಳಿಸಿಕೊಂಡಿವೆ. ಇದರಿಂದ ಇಂಧನ ಇಲಾಖೆಗೆ ಬಾಕಿ ಬಿಲ್​ ಕೋಟಿಗಟ್ಟಲೇ ಬರಬೇಕಿದೆ.

ರಾಜ್ಯದಲ್ಲಿ ಶುರುವಾಯ್ತು ಲೋಡ್​ ಶೆಡ್ಡಿಂಗ್

ರೈತರ ಪಂಪ್‌ಸೆಟ್‌ಗಳಿಗೆ ನಿತ್ಯ 7 ತಾಸು ತ್ರೀಪೇಸ್‌ ಕರೆಂಟ್‌ ನೀಡುತ್ತಿದ್ದ ಸರ್ಕಾರ ಅದನ್ನ ಎರಡು ತಾಸಿಗೆ ಇಳಿಸಿದೆ. ಇದ್ರಿಂದ ರೈತರಂತೂ ಕೆರಳಿದ್ದಾರೆ. ಕೆಲವರು ಸಮಸ್ಯೆ ಸುಳಿಗೆ ಸಿಲುಕಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್‌ನ ಶಾಸಕ ಡಾ.ರಂಗನಾಥ್​ಗೂ ಲೋಡ್​ಶೆಡ್ಡಿಂಗ್ ಬಿಸಿ ತಟ್ಟಿತ್ತು. ಆಡಳಿತ ಪಕ್ಷದ ಶಾಕರೇ ಆಗಿರೋ ರಂಗನಾಥ್‌, ಅಮೃತ ಯೋಜನೆ ಬಗ್ಗೆ ಪುರಸಭೆ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ರು. ಈ ವೇಳೆ ಕರೆಂಟ್ ಕೈಕೊಟ್ಟಿದ್ದರಿಂದ ಮೊಬೈಲ್ ಟಾರ್ಚ್​ ಬೆಳಕಿನಲ್ಲಿ ಶಾಸಕರು ಸಭೆ ಮಾಡಿದ್ದರು. ಇನ್ನು ತುಮಕೂರಿನಲ್ಲಿ ಕೋರ್ಟ್​ ಕಲಾಪಕ್ಕೂ ಲೋಡ್​ ಶೆಡ್ಡಿಂಗ್ ಬಿಸಿ ತಟ್ಟಿತ್ತು. ಇದರಿಂದ ನ್ಯಾಯಾಧೀಕರು ಮೊಬೈಲ್​ ಟಾರ್ಚ್​ನಲ್ಲೇ ಪ್ರಕರಣದ ವಿಚಾರಣೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:47 am, Thu, 12 October 23