ದಸರಾ ಆನೆ ಅಭಿಮನ್ಯುವಿನ ಮಾವುತ ವಸಂತಗೆ ಮುಖ್ಯಮಂತ್ರಿ ಪದಕ

| Updated By: ವಿವೇಕ ಬಿರಾದಾರ

Updated on: Sep 04, 2024 | 12:05 PM

ಅರಣ್ಯ ಇಲಾಖೆಯಲ್ಲಿ ಗಣನೀಯ ಸೇವೆಯನ್ನು ಗುರುತಿಸಿ ದಸರಾ ಆನೆ ಅಭಿಮನ್ಯುವಿನ ಮಾವುತ ಜೆ.ಎಸ್​ ವಸಂತ ಅವರಿಗೆ 2022-23ನೇ ಸಾಲಿನ ಮುಖ್ಯಮಂತ್ರಿ ಪದಕ ದೊರೆತಿದೆ. ಜೆ. ಎಸ್​. ವಸಂತ್​ ಅವರು ಸುಮಾರು ವರ್ಷಗಳಿಂದ ಆನೆ ಅಭಿಮನ್ಯುವಿನ ಮಾವುತರಾಗಿದ್ದಾರೆ.

ದಸರಾ ಆನೆ ಅಭಿಮನ್ಯುವಿನ ಮಾವುತ ವಸಂತಗೆ ಮುಖ್ಯಮಂತ್ರಿ ಪದಕ
ಮಾವುತ ವಸಂತ
Follow us on

ಮೈಸೂರು, ಆಗಸ್ಟ್​​ 04: ಅರಣ್ಯ ಇಲಾಖೆಯಲ್ಲಿ (Forest Department) ಗಣನೀಯ ಸೇವೆಯನ್ನು ಗುರುತಿಸಿ ದಸರಾ (Dasara) ಆನೆ ಅಭಿಮನ್ಯುವಿನ (Abhimanyu) ಮಾವುತ ಜೆ.ಎಸ್​ ವಸಂತ ಅವರಿಗೆ 2022-23ನೇ ಸಾಲಿನ ಮುಖ್ಯಮಂತ್ರಿ ಪದಕ (CM Medal) ದೊರೆತಿದೆ. ಜೆ.ಎಸ್​. ವಸಂತ್​ (Mavutha Vasantha) ಅವರು ಸುಮಾರು ವರ್ಷಗಳಿಂದ ಆನೆ ಅಭಿಮನ್ಯುವಿನ ಮಾವುತರಾಗಿದ್ದಾರೆ. ಕ್ಯಾಪ್ಟನ್ ಅಭಿಮನ್ಯು ಸತತ ನಾಲ್ಕು ಬಾರಿ ಅಂಬಾರಿ ಹೊತ್ತಿದ್ದು, ಐದನೇ ಬಾರಿಗೆ ಅಂಬಾರಿ ಹೊರಲು ಸಿದ್ದನಾಗಿದ್ದಾನೆ.

ದಸರಾ ಮಹೋತ್ಸವದ ಚಿನ್ನದ ಅಂಬಾರಿಯನ್ನು ಹೊರುವ ಕ್ಯಾಪ್ಟನ್​ ಅಭಿಮನ್ಯುವಿನ ಮಾವುತ ಜೆ.ಎಸ್​ ವಂಸತ ಅವರು ಮುಖ್ಯಮಂತ್ರಿ ಪದಕ ಪಡೆದಿದ್ದಾರೆ. ಜೆ.ಎಸ್​ ವಂಸತ ಅವರು 100ಕ್ಕೂ ಹೆಚ್ಚು ಕಾಡಾನೆ ಹಾಗೂ ಹುಲಿ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. 2017ರಲ್ಲಿ ಇಂಡೋನೇಷ್ಯಾ ದೇಶಕ್ಕೆ ಹೋಗಿ ಅಲ್ಲಿಯ ಆನೆಗಳಿಗೆ ಕೂಡ ತರಬೇತಿಯನ್ನು ಪಡೆಯಲು ಹಾಗೂ ರಾಜ್ಯದಲ್ಲಿ ಹಾಗೂ ಶಿಬಿರಗಳಲ್ಲಿ ನೀಡುವ ತರಬೇತಿಯನ್ನು ನೀಡಿದ್ದಾರೆ.

ಇದನ್ನೂ ಓದಿ: ಗಜಪಡೆಗಳು ಮೈಸೂರು ರಾಜಬೀದಿಗೆ ಎಂಟ್ರಿ: ಅಭಿಮನ್ಯು ನೇತೃತ್ವದಲ್ಲಿ ದಸರಾ ತಾಲೀಮು, ಫೋಟೋಸ್​

2020 ಮತ್ತು 21ನೇ ಸಾಲಿನಲ್ಲಿ ಎರಡು ವರ್ಷಗಳ ಕಾಲ ಮೈಸೂರು ದಸರಾ ನಾಡಹಬ್ಬದಲ್ಲಿ ಅಂಬಾರಿಯನ್ನು ಹೊರಿಸುವ ಮೂಲಕ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಮಾನವ-ವನ್ಯಪ್ರಾಣಿ ಸಂಘರ್ಷದ ನಿಯಂತ್ರಣದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಜೆ.ಎಸ್​ ವಸಂತ ಅವರ ಈ ಎಲ್ಲ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ ಮುಖ್ಯಮಂತ್ರಿ ಪದಕ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ