ರಾಜರ ಬಾಯಿಂದ ರಾಜರ ಕಥೆಗಳು ಕಾರ್ಯಕ್ರಮ ನಿಲ್ಲಿಸುವಂತೆ ಯದುವೀರ್ ಒಡೆಯರ್ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

| Updated By: ಆಯೇಷಾ ಬಾನು

Updated on: Mar 26, 2024 | 10:52 AM

104.8 ರೇಡಿಯೋ ಮಿರ್ಚಿಯಲ್ಲಿ ಪ್ರಸಾರವಾಗುತ್ತಿರುವ ಯದುವೀರ್ ಒಡೆಯರ್ ಅವರ ರಾಜರ ಬಾಯಿಂದ ರಾಜರ ಕಥೆಗಳು ಹೆಸರಿನ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ಕಾರ್ಯಕ್ರಮದಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದೆ, ಹೀಗಾಗಿ ಕಾರ್ಯಕ್ರಮ ನಿಲ್ಲಿಸಿ ಎಂದು ದೂರು ನೀಡಿದೆ.

ರಾಜರ ಬಾಯಿಂದ ರಾಜರ ಕಥೆಗಳು ಕಾರ್ಯಕ್ರಮ ನಿಲ್ಲಿಸುವಂತೆ ಯದುವೀರ್ ಒಡೆಯರ್ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
Follow us on

ಮೈಸೂರು, ಮಾರ್ಚ್​.26: ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರ ರೇಡಿಯೋ ಕಾರ್ಯಕ್ರಮ ನಿಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ (Congress) ದೂರು ನೀಡಿದೆ. ರಾಜರ ಬಾಯಿಂದ ರಾಜರ ಕಥೆಗಳು ಹೆಸರಿನಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಕ್ಕೆ ನಿರ್ಬಂಧ ವಿಧಿಸುವಂತೆ ಕರ್ನಾಟಕ ಚುನಾವಣಾ ಆಯೋಗಕ್ಕೆ (Election Commission) ಕೆಪಿಸಿಸಿ ವಕ್ತಾರ ಹೆಚ್​.ಎ.ವೆಂಕಟೇಶ್ ದೂರು ನೀಡಿದ್ದಾರೆ.

104.8 ರೇಡಿಯೋ ಮಿರ್ಚಿಯಲ್ಲಿ ಯದುವೀರ್ ಅವರ ರಾಜರ ಬಾಯಿಂದ ರಾಜರ ಕಥೆಗಳು ಹೆಸರಿನಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಯದುವೀರ್ ಮೈಸೂರು ಕೊಡಗು ಬಿಜೆಪಿ ಅಭ್ಯರ್ಥಿ ಹಿನ್ನೆಲೆ ನಿರ್ಬಂಧನೆ ವಿಧಿಸಿ. ರೇಡಿಯೋದಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮದ ಬಗ್ಗೆ ಕ್ಷಣ ಕ್ಷಣಕ್ಕೂ ರೇಡಿಯೋದಲ್ಲಿ ಜಾಹೀರಾತು ಹಾಕಲಾಗುತ್ತಿದೆ. ಒಬ್ಬ ವ್ಯಕ್ತಿಯಾಗಿ ರಾಜರ ಬಗ್ಗೆ ಮಾತನಾಡುವುದರಲ್ಲಿ ತಪ್ಪಿಲ್ಲ. ಆದರೆ ಏಪ್ರಿಲ್ 26ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಯದುವೀರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ. ಯದುವೀರ್ ಅವರ ಮಾತುಗಳು ಮತದಾರರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ಕೂಡಲೇ ರೇಡಿಯೋದಲ್ಲಿ ಕಾರ್ಯಕ್ರಮ ಪ್ರಸಾರವಾಗದಂತೆ ನಿರ್ಬಂಧನೆ ವಿಧಿಸಬೇಕು ಎಂದು ಚುನಾವಣಾ ಆಯುಕ್ತರಿಗೆ ಕೆಪಿಸಿಸಿ ವಕ್ತಾರ ಹೆಚ್​.ಎ.ವೆಂಕಟೇಶ್ ಮನವಿ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಮೈಸೂರು ಯುದ್ಧ ಗೆಲ್ಲೋಕೆ ಸಿದ್ದರಾಮಯ್ಯ ರಣತಂತ್ರ

ನಿನ್ನೆ ಮೈಸೂರು ಜಿಲ್ಲೆಗೆ ಎಂಟ್ರಿ ಕೊಟ್ಟ ಸಿಎಂ ಸಿದ್ದರಾಮಯ್ಯ ಮೈಸೂರು ಗೆಲ್ಲೋಕೆ ಶಾಸಕರು, ಸಚಿವರು, ಮುಖಂಡರ ಸಭೆ ನಡೆಸಿದ್ರು. ಸಭೆ ಬಳಿಕ ರೆಸ್ಟ್ ನೆಪದಲ್ಲಿ ಹೆಚ್.ಡಿ.ಕೋಟೆ ರೆಸಾರ್ಟ್​ಗೆ ತೆರಳಿದ್ದಾರೆ. ಅಲ್ದೇ ಅಲ್ಲೇ ಮೂರು ದಿನ ವಾಸ್ತವ್ಯ ಕೂಡ ಹೂಡಲಿದ್ದಾರೆ.

ಸಭೆಯಲ್ಲಿ ಮಾತನಾಡಿರೋ ಸಿಎಂ ಸಿದ್ದರಾಮಯ್ಯ, ನಾವು ಯದುವೀರ್‌ರನ್ನ ಟಾರ್ಗೆಟ್ ಮಾಡಬಾರದು. ನಮ್ಮ ಟಾರ್ಗೆಟ್ ಏನಿದ್ದರೂ ಬಿಜೆಪಿ ಅಷ್ಟೇ. ಯದುವೀರ್ ವಿರುದ್ಧ ಮನಬಂದಂತೆ ಹೇಳಿಕೆ ಕೊಡದೇ ಎಚ್ಚರಿಕೆ ವಹಿಸಿ. ಎಮೋಷನಲ್ ವಿಚಾರವನ್ನ ತಿರುಗಿಸುವಲ್ಲಿ ಬಿಜೆಪಿಗರು ನಿಸ್ಸೀಮರು ಅಂತಾ ಸಿಎಂ ಕಿವಿಮಾತು ಹೇಳಿದ್ದಾರೆ.

ಇದರ ಜೊತೆಗೆ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸಲು ಕೊಡಗಿನ ಎರಡು ಕ್ಷೇತ್ರದಲ್ಲೂ ನಮ್ಮ ಶಾಸಕರೇ ಇದ್ದು ಒಂದು ಲಕ್ಷ ಲೀಡ್‌ ಬೇಕು ಅಂತಾ ಸಿಎಂ ಹೇಳಿದ್ದಾರೆ. ಜಾಮರಾಜ, ನರಸಿಂಹರಾಜ ಕ್ಷೇತ್ರ ಸೇರಿ 1 ಲಕ್ಷ ಲೀಡ್ ಕೊಡಿ. ಪಿರಿಯಾಪಟ್ಟಣದಲ್ಲಿ 50 ಸಾವಿರ, ಹುಣಸೂರು, ಚಾಮುಂಡೇಶ್ವರಿಯಲ್ಲಿ 60 ಸಾವಿರ ಲೀಡ್ ಬೇಕು ಅಂತಾ ಸಚಿವರು, ಶಾಸಕರಿಗೆ ಟಾರ್ಗೆಟ್ ನೀಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:07 am, Tue, 26 March 24