ರೈಲು ತಡವಾಗಿ ಬಂದಿದ್ದಕ್ಕೆ ಆಸ್ಟ್ರಿಯ ರೈಲ್ವೆ ಇಲಾಖೆಯಿಂದ ಪರಿಹಾರ ಪಡೆದ ಮೈಸೂರಿನ ಗ್ರಾಹಕರ ಹಕ್ಕುಗಳ ಕಾರ್ಯಕರ್ತ

ಮೈಸೂರಿನ ಗ್ರಾಹಕರ ಹಕ್ಕುಗಳ ಕಾರ್ಯಕರ್ತ ಶೇಖರ್ ಎಸ್. ಅಯ್ಯರ್ ಅವರು ಪ್ರಯಾಣಿಸಬೇಕಿದ್ದ ರೈಲು ತಡವಾಗಿದ್ದು ಆಸ್ಟ್ರಿಯ ರಾಷ್ಟ್ರೀಯ ರೈಲ್ವೆ ಕಂಪನಿಯಿಂದ ಪರಿಹಾರವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರೈಲು ತಡವಾಗಿ ಬಂದಿದ್ದಕ್ಕೆ ಆಸ್ಟ್ರಿಯ ರೈಲ್ವೆ ಇಲಾಖೆಯಿಂದ ಪರಿಹಾರ ಪಡೆದ ಮೈಸೂರಿನ ಗ್ರಾಹಕರ ಹಕ್ಕುಗಳ ಕಾರ್ಯಕರ್ತ
ಆಸ್ಟ್ರಿಯ ರೈಲು
Follow us
ಆಯೇಷಾ ಬಾನು
| Updated By: Digi Tech Desk

Updated on:Mar 16, 2023 | 3:44 PM

ಮೈಸೂರು: ಮೈಸೂರಿನ ಗ್ರಾಹಕರ ಹಕ್ಕುಗಳ ಕಾರ್ಯಕರ್ತ ಶೇಖರ್ ಎಸ್. ಅಯ್ಯರ್ ಅವರು ಇತ್ತೀಚೆಗೆ ಆಸ್ಟ್ರಿಯಗೆ ಭೇಟಿ ನೀಡಿದ್ದರು. ಈ ವೇಳೆ ಅವರು ತೆರಳಬೇಕಿದ್ದ ರೈಲು ತಡವಾಗಿ ಬಂದಿದ್ದು ಈ ಸಂಬಂಧ ಆಸ್ಟ್ರಿಯ ರಾಷ್ಟ್ರೀಯ ರೈಲ್ವೆ ಕಂಪನಿಯಿಂದ ಪರಿಹಾರವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ಗ್ರಹಕರ ಪರಿಷತ್ತಿನ (ಎಂಜಿಪಿ) ಸಂಚಾಲಕರೂ ಆಗಿರುವ ಅಯ್ಯರ್ ಅವರು ಮತ್ತು ಅವರ ಪತ್ನಿ ಡಿಸೆಂಬರ್ 13 ರಂದು ಆಸ್ಟ್ರಿಯದ ವಿಯೆನ್ನಾದಿಂದ ಇಟಲಿಯ ರೋಮ್‌ಗೆ ಪ್ರಯಾಣ ಬೆಳೆಸಲಿದ್ದ ರೈಲು ಎರಡು ಗಂಟೆಗಳ ಕಾಲ ತಡವಾಗಿತ್ತು. ರೈಲಿಗಾಗಿ ಕಾದು ಕುಳಿತ ಅಯ್ಯರ್ ರೈಲ್ವೆ ಇಲಾಖೆಯ ವಿರುದ್ಧ ಸಿಡಿದೆದಿದ್ದಾರೆ. ರೈಲು ತಡ ಮಾಡಿದಕ್ಕಾಗಿ, ಸಮಯ ಹರಣ ಮಾಡಿದಕ್ಕಾಗಿ ರೈಲ್ವೆ ಇಲಾಖೆಯ ಸೇವೆಯ ವಿರುದ್ಧ ಇಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ: Train Cancelled: ಮಾರ್ಚ್​ 16 ರಂದು ಹಲವು ರೈಲುಗಳ ಸಂಚಾರ ರದ್ದುಪಡಿಸಿದ ಭಾರತೀಯ ರೈಲ್ವೆ

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಯ್ಯರ್ ಅವರು, ಆಸ್ಟ್ರಿಯ ರಾಷ್ಟ್ರೀಯ ರೈಲ್ವೆ ಕಂಪನಿಯಿಂದ ಪರಿಹಾರವನ್ನು ಪಡೆಯಲು ಮೂರು ಇಮೇಲ್​ಗಳು ಮತ್ತು ಒಂದು ತಿಂಗಳು ಕಾಯಬೇಕಾಯ್ತು. ಆದರೆ ಪರಿಹಾರ ಸಿಕ್ತು. ಜನರಿಗೆ ತಮ್ಮ ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಇರಬೇಕು. ತಮ್ಮ ಹಕ್ಕುಗಳನ್ನು ಬಳಸಿಕೊಳ್ಳಬೇಕು ಎಂದರು. ಇನ್ನು ಆಸ್ಟ್ರಿಯದ ರಾಷ್ಟ್ರೀಯ ರೈಲ್ವೆ ಕಂಪನಿ – OBB ಯಲ್ಲಿ ಮಧ್ಯಸ್ಥಿಕೆ ಪ್ರಾಧಿಕಾರದ ಬಗ್ಗೆ ವಿಚಾರಿಸಿರುವುದಾಗಿ ಹೇಳಿದರು. ಮಧ್ಯಸ್ಥಿಕೆ ಪ್ರಾಧಿಕಾರಕ್ಕೆ ಇಮೇಲ್ ದೂರನ್ನು ಸಲ್ಲಿಸಿ ಅವರು ಭಾರತಕ್ಕೆ ಮರಳಿದ ನಂತರ ಸುಮಾರು ಒಂದು ತಿಂಗಳ ಬಳಿಕ ಪರಿಹಾರದ ಮೊತ್ತವನ್ನು ಪಡೆದರು.

ಯುರೋಗಳಲ್ಲಿ ನೀಡಲಾದ ಪರಿಹಾರದ ಮೊತ್ತವು ಸುಮಾರು ₹ 11,000 ರೂ ಆಗಿದೆ. ಅಯ್ಯರ್ ಅವರು ಬುಧವಾರ ಮೈಸೂರಿನಲ್ಲಿ ಎಂಜಿಪಿ ಮತ್ತು ಬಹದ್ದೂರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸೈನ್ಸಸ್ (ಬಿಐಎಂಎಸ್) ಆಯೋಜಿಸಿದ್ದ ವಿಶ್ವ ಗ್ರಾಹಕ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗಿಯಾಗಿದ್ದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:04 am, Thu, 16 March 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ