AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಹೆಚ್​ಡಿ ಕೋಟೆ ತಾಲೂಕಿನಲ್ಲಿ ಹುಲಿ ಚಿರತೆ ದಾಳಿಗೆ ಹಸು, ಕರು ಮೇಕೆಗಳು ಬಲಿ

ಮೈಸೂರು ಜಿಲ್ಲೆಯಲ್ಲಿ ಚಿರತೆ, ಹುಲಿ ಹಾವಳಿ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಹೆಚ್​ಡಿ ಕೋಟೆ ತಾಲೂಕಿನಲ್ಲಿ ಜನರು ನಿತ್ಯ ಆತಂಕದಲ್ಲೇ ಜೀವನ ಕಳೆಯುತ್ತಿದ್ದಾರೆ. ಈ ನಡುವೆ ತಾಲೂಕಿನ ಸುಣಕಲ್ ಮಂಟಿ ಗ್ರಾಮದಲ್ಲಿ ಚಿರತೆ ದಾಳಿಗೆ ಕರು, ಮೇಕೆಗಳು ಬಲಿಯಾಗಿದ್ದು, ಇತ್ತ ಇದೇ ತಾಲೂಕಿನ ಹೊಸ ಹೊಳಲು ಗ್ರಾಮದಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ಹುಲಿ ದಾಳಿ ನಡೆಸಿದೆ.

ಮೈಸೂರು: ಹೆಚ್​ಡಿ ಕೋಟೆ ತಾಲೂಕಿನಲ್ಲಿ ಹುಲಿ ಚಿರತೆ ದಾಳಿಗೆ ಹಸು, ಕರು ಮೇಕೆಗಳು ಬಲಿ
ಮೈಸೂರಿನ ಹೆಚ್​ಡಿ ಕೋಟೆ ತಾಲೂಕಿನಲ್ಲಿ ಚಿರತೆ, ಹುಲಿ ಹಾವಳಿ (ಸಾಂದರ್ಭಿಕ ಚಿತ್ರ)Image Credit source: IANS
Follow us
ದಿಲೀಪ್​, ಚೌಡಹಳ್ಳಿ
| Updated By: Rakesh Nayak Manchi

Updated on: Sep 17, 2023 | 9:05 AM

ಮೈಸೂರು, ಸೆ.17: ಜಿಲ್ಲೆಯಲ್ಲಿ ಚಿರತೆ, ಹುಲಿ ಹಾವಳಿ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಹೆಚ್​ಡಿ ಕೋಟೆ ತಾಲೂಕಿನಲ್ಲಿ (HD Kote) ಜನರು ನಿತ್ಯ ಆತಂಕದಲ್ಲೇ ಜೀವನ ಕಳೆಯುತ್ತಿದ್ದಾರೆ. ಈ ನಡುವೆ ತಾಲೂಕಿನ ಸುಣಕಲ್ ಮಂಟಿ ಗ್ರಾಮದಲ್ಲಿ ಚಿರತೆ ದಾಳಿಗೆ (Leopard Attack) ಕರು, ಮೇಕೆಗಳು ಬಲಿಯಾಗಿದ್ದು, ಇತ್ತ ಇದೇ ತಾಲೂಕಿನ ಹೊಸ ಹೊಳಲು ಗ್ರಾಮದಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ಹುಲಿ ದಾಳಿ (Tiger Attack) ನಡೆದಿದೆ.

ಹೆಚ್​ಡಿ ಕೋಟೆ ತಾಲೂಕಿನ ನೇರಳೆ ಗಣೇಶನ ಗುಡಿ ಗ್ರಾಮ ಸುಣಕಲ್ ಮಂಟಿ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿದೆ. ರೈತರಾದ ವೆಂಕಟಸ್ವಾಮಿ, ಚಿಕ್ಕಯ್ಯ ಮತ್ತು ಸಿದ್ದೇಗೌಡ ಅವರಿಗೆ ಸೇರಿದ ತಲಾ ಒಂದೊಂದು ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ರೈತ ನಾಗೇಗೌಡ ಅವರಿಗೆ ಸೇರಿದ ಕರು ಕೂಡ ಚಿರತೆ ದಾಳಿಗೆ ಬಲಿಯಾಗಿದೆ.

ಇದನ್ನೂ ಓದಿ: ದಾವಣಗೆರೆ: ಜನರ ನೆಮ್ಮದಿ ಹಾಳು ಮಾಡಿದ್ದ ‌ಚಿರತೆ ಕೊನೆಗೂ ಸೆರೆ

ಚಿರತೆ ದಾಳಿಯಿಂದ ಗ್ರಾಮದ ಜನರು ಭಯಬೀತರಾಗಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಸಿಬ್ಬಂದಿ ಗ್ರಾಮದ ಹೊರವಲಯದಲ್ಲಿ ಬೋನು ಇರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಂಜೆ ನಂತರ ಎಚ್ಚರಿಕೆಯಿಂದ ಓಡಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಹಸುಗಳ ಮೇಲೆ ಹುಲಿ ದಾಳಿ

ಹೆಚ್​ಡಿ ಕೋಟೆ ತಾಲೂಕಿನ ಹೊಸ ಹೊಳಲು ಗ್ರಾಮದ ಜನರು ಹುಲಿ ದಾಳಿಯ ಭೀತಿ ಎದುರಿಸುತ್ತಿದ್ದಾರೆ. ಎಚ್.ಎಸ್.ಲಿಂಗರಾಜು ಅವರಿಗೆ ಸೇರಿದ ಎರಡು ಹಸುಗಳು ಜಮೀನಿನಲ್ಲಿ ಮೇಯುತ್ತಿದ್ದವು. ಈ ವೇಳೆ ದಾಳಿ ನಡೆಸಿದ ಹುಲಿ ಒಂದು ಹಸುವನ್ನು ಕೊಂದು ಹಾಕಿದ್ದು, ಮತ್ತೊಂದು ಹಸು ಗಂಭೀರವಾಗಿ ಗಾಯಗೊಂಡಿದೆ.

ಹಸುಗಳನ್ನು ಲಿಂಗರಾಜು ಅವರ ಪುತ್ರ ವಿಕಾಸ್ ಮೇಯಿಸುತ್ತಿರುವಾಗ ಹುಲಿ ದಾಳಿ ನಡೆಸಿದೆ. ಸ್ಥಳಕ್ಕೆ ದಮ್ಮನಕಟ್ಟೆ ವಲಯ ಅರಣ್ಯಾಧಿಕಾರಿ ಭರತ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ