
ಮೈಸೂರು: ಕರ್ನಾಟಕಕ್ಕೆ ಇದು ಕೇಡಿನ ಲಕ್ಷಣ. ಈ ಹಿಂದೆ ತಮಗೆ ನನ್ನ ಪಠ್ಯವನ್ನು ಕೈಬಿಡುವಂತೆ ಪತ್ರ ಬರೆದಿದ್ದೆ. ಆದರೆ ನೀವು ಪರಿಷ್ಕೃತ ಮುದ್ರಣವೇ ಜಾರಿ ಎಂದು ಹೇಳಿದ್ದೀರಿ. ಕ್ಷಮಿಸಿ ನಿಮ್ಮ ಈ ಧೋರಣೆಯು ನನಗೆ ದಬ್ಬಾಳಿಕೆ ಅನಿಸಿತು ಎಂದು ರಾಜ್ಯದಲ್ಲಿ ನೂತನ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ವಿಚಾರವಾಗಿ ಶಿಕ್ಷಣ ಸಚಿವ ನಾಗೇಶ್‌ಗೆ ಸಾಹಿತಿ ದೇವನೂರು ಮಹದೇವ (Devanur Mahadeva) ಮತ್ತೊಂದು ಪತ್ರ ಬರೆದಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ವಿರುದ್ಧ ಕಿಡಿಕಾರಿದ್ದು, ಕುವೆಂಪು, ಅಂಬೇಡ್ಕರ್ರನ್ನು ಗೇಲಿ ಮಾಡುವ ಮನಸ್ಥಿತಿಯ ಅಧ್ಯಕ್ಷ ಎಂದು ಹೇಳಿದ್ದಾರೆ. ಬಸವಣ್ಣನವರ ಪಾಠದ ಕತ್ತು ಹಿಸುಕಲಾಗಿದೆ. ನಾಡಧ್ವಜದ ಬೇಡಿಕೆ ವೇಳೆ ಲಂಗೋಟಿಗೆ ಹೋಲಿಸಿದ್ದ ಚಕ್ರತೀರ್ಥ, ಪಠ್ಯಪುಸ್ತಕ ಪರಿಷ್ಕರಣೆ ಬೇಡವೆಂದು ಹಲವು ಸಾಹಿತಿಗಳಿಂದ ಮನವಿ ಮಾಡಲಾಗಿದೆ. ನಮ್ಮ ಮನವಿಯನ್ನು ಕಾಲ ಕಸ ಮಾಡಿದ್ದೀರಿ ಇದು ನಾಡಿಗೆ ಕೇಡು. ಇದು ಮುಂದುವರಿಯಬಾರದು ದಯವಿಟ್ಟು ಮುಂದುವರಿಯಬಾರದು ಎಂದು ಸಚಿವರಿಗೆ ಎರಡನೇ ಪತ್ರದಲ್ಲಿ ದೇವನೂರು ಮಹದೇವ ಚಾಟಿ ಬೀಸಿದ್ದಾರೆ.
ದೇವನೂರು ಮಹಾದೇವ ಅವರ ಬರಹವನ್ನು ಕೈಬಿಡಲು ಸಾಧ್ಯವಿಲ್ಲ
ಕರ್ನಾಟಕದ ವಿದ್ಯಾರ್ಥಿಗಳಿಗೆ ವಿತರಿಸುವ ಪಠ್ಯಪುಸ್ತಕಗಳ ಮುದ್ರಣ (Text Book Printing) ಈಗಾಗಲೇ ಪೂರ್ಣಗೊಂಡಿದೆ. ಈ ಹಂತದಲ್ಲಿ ದೇವನೂರು ಮಹಾದೇವ ಅವರ ಬರಹವನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (BC Nagesh) ಹೇಳಿದ್ದಾರೆ. ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತನ್ನ ಪಾಠ ತೆಗೆಯುವಂತೆ ಸಾಹಿತಿ ದೇವನೂರು ಹೇಳಿಕೆ ನೀಡಿದ್ದಾರೆ. ಅವರು ಮೊದಲೇ ಹೀಗೆ ಹೇಳಿದ್ದರೆ ಚರ್ಚಿಸಬಹುದಿತ್ತು. ಆದರೆ ಈಗಾಗಲೇ ಪಠ್ಯಪುಸ್ತಕಗಳ ಮುದ್ರಣ ಕಾರ್ಯ ಪೂರ್ಣಗೊಂಡಿದೆ. ಇನ್ನೇನು ಅದು ಮಕ್ಕಳ ಕೈಸೇರಲಿದೆ. ಈ ಹಂತದಲ್ಲಿ ಪಠ್ಯ ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ; ಕಾಶ್ಮೀರದಲ್ಲಿ ಹೆಚ್ಚಿದ ಟಾರ್ಗೆಟ್ ಹತ್ಯೆ; ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಇಂದು ಮಹತ್ವದ ಸಭೆ
ಈ ಅಂಶವನ್ನು ದೇವನೂರು ಮಹದೇವ ಅವರಿಗೂ ಮನವರಿಕೆ ಮಾಡಿಕೊಡುತ್ತೇನೆ. ದೇವನೂರು ಮಹದೇವಗೆ ತಾತ್ವಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ ನಮಗೆ ಇಲ್ಲ. ಈ ವಿಚಾರದ ಬಗ್ಗೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೇವನೂರು ಮಹದೇವ ಹೇಳುತ್ತಿರುವುದು ಸತ್ಯದ ಮಾತು. ನಾವು ಎಲ್ಲವನ್ನೂ ಬದಲಾವಣೆ ಮಾಡಿದ್ದೇವೆ. ಹಿಂದಿನಿಂದಲೂ ಬ್ರಿಟಿಷರು ತಯಾರಿಸಿದ ಪಠ್ಯವೇ ಇತ್ತು. ನಾವು ಬಂದ ಮೇಲೆ ರಾಷ್ಟ್ರೀಯತೆಯನ್ನು ಪಠ್ಯದಲ್ಲಿ ಸೇರಿಸಿದ್ದೇವೆ. ಈ ಹಿಂದೆ ಎಲ್ಲವೂ ಅಮೆರಿಕ ಹೇಳಿದಂತೆ ನಡೆಯುತ್ತಿತ್ತು. ವಾಜಪೇಯಿ ಪ್ರಧಾನಿಯಾದ ಮೇಲೆ ಎಲ್ಲವೂ ಬದಲಾಯಿತು. ಪರಿವರ್ತನೆ ಅನ್ನೋದು ಜಗದ ನಿಯಮ ಎಂದು ತಿಳಿಸಿದರು.
ಕಾಂಗ್ರೆಸ್ಸಿನವರಂತೆ ನಾವು ಕಂಡಕಂಡವರ ಹಿತಕ್ಕಾಗಿ ರಾಜಕಾರಣ ಮಾಡಿಲ್ಲ. ನಾವು ಜನರ ಹಿತಕ್ಕಾಗಿ, ಜನಪರವಾಗಿ ರಾಜಕಾರಣ ಮಾಡಿದ್ದೇವೆ. ನಮ್ಮ ದೇಶದ ಜನರಿಗೆ ಯಾವುದು ಒಳ್ಳೆಯದೋ ಅದನ್ನು ಮಾಡಿದ್ದೇವೆ. ಎಲ್ಲಾ ವಾದ ಮುಗಿದ ಬಳಿಕ ಈಗ ಚಾತುರ್ವರ್ಣ ಬಂದಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.