ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಸಾಹಿತಿ ಎಸ್ ಎಲ್ ಭೈರಪ್ಪ ಹೇಳಿದ್ದೇನು?
ಪ್ರತಾಪ್ ಗಢ್ದ ಸ್ಟೋರಿ ಬಿಚ್ಚಿಟ್ಟ ಎಸ್ ಎಲ್ ಭೈರಪ್ಪ, ಶಿವಾಜಿ ಕಾಲದ ಘಟನೆಯನ್ನು ವಿವರಿಸಿದರು. ಬಿಜಾಪುರ ಸುಲ್ತಾನರ ಸೇನಾಧಿಪತಿ ಅಫಜಲ್ ಖಾನ್ ಹಾಗೂ ಶಿವಾಜಿ ನಡುವಿನ ಘಟನೆ ಬಗ್ಗೆ ಮಾತನಾಡಿದರು. ಸಂಧಾನದ ನೆಪದಲ್ಲಿ ಶಿವಾಜಿ ಹತ್ಯೆಗೆ ಸಂಚು ರೂಪಿಸಲಾಗಿತ್ತು.
ಮೈಸೂರು: ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ವಾದ ವಿವಾದಗಳು ನಡೆಯುತ್ತಿವೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರ (Rohith Chakrathirtha) ವಿರುದ್ಧ ಕ್ರಮಕೈಗೊಳ್ಳಬೇಕೆಂದು ಹಲವರು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಎಲ್ಲದರ ಬಗ್ಗೆ ಸಾಹಿತಿ ಎಸ್ ಎಲ್ ಭೈರಪ್ಪ (SL Bhyrappa) ಸುದ್ದಿಗೋಷ್ಟಿ ನಡೆಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಿದ್ಯಾಭ್ಯಾಸದಲ್ಲಿ ಸತ್ಯ ಇರಬೇಕು. ಯಾವುದೇ ಐಡಿಯಾಲಜಿ ಇರಬಾರದು. ವಾಜಪೇಯಿ ಬಂದಾಗ ತಿದ್ದಲು ಮುಂದಾದರು. ಆದರೆ ಗಲಾಟೆ ಆರಂಭಿಸಿದರು. ಅವರು ತಿದ್ದುವುದನ್ನು ನಿಲ್ಲಿಸಿದರು ಎಂದು ಸಾಹಿತಿ ಎಸ್ ಎಲ್ ಭೈರಪ್ಪ ತಿಳಿಸಿದರು.
ಪ್ರತಾಪ್ ಗಢ್ದ ಸ್ಟೋರಿ ಬಿಚ್ಚಿಟ್ಟ ಎಸ್ ಎಲ್ ಭೈರಪ್ಪ, ಶಿವಾಜಿ ಕಾಲದ ಘಟನೆಯನ್ನು ವಿವರಿಸಿದರು. ಬಿಜಾಪುರ ಸುಲ್ತಾನರ ಸೇನಾಧಿಪತಿ ಅಫಜಲ್ ಖಾನ್ ಹಾಗೂ ಶಿವಾಜಿ ನಡುವಿನ ಘಟನೆ ಬಗ್ಗೆ ಮಾತನಾಡಿದರು. ಸಂಧಾನದ ನೆಪದಲ್ಲಿ ಶಿವಾಜಿ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಈ ವೇಳೆ ಶಿವಾಜಿ ಬುದ್ಧಿವಂತಿಕೆ ಪ್ರದರ್ಶಿಸಿದರು ಎಂದು ತಾವು ಚಿಕ್ಕವರಾಗಿದ್ದಾಗ ಓದಿದನ್ನು ವಿವರಿಸಿದ ಭೈರಪ್ಪ ವಿವರಿಸಿದರು.
ರಂಗಾಯಣದಲ್ಲಿ ನಡೆದ ಪ್ರತಿಭಟನೆಯ ಪ್ರಸ್ತಾಪ ಮಾಡಿದ ಸಾಹಿತಿ ಎಸ್ ಎಲ್ ಭೈರಪ್ಪ, ಟಿಪ್ಪು ಕೊಡಗಿನಲ್ಲಿ ಏನು ಮಾಡಿದ ಅನ್ನೋದು ಅಡ್ಡಂಡ ಕಾರ್ಯಪ್ಪಗೆ ಗೊತ್ತಿದೆ. ಅವರು ಸಹಾ ಕೊಡಗಿನವರು. ಟಿಪ್ಪು ಎಷ್ಟು ಜನ ಕೊಡಗರನ್ನು ಸಾಯಿಸಿದ ಮತಾಂತರ ಮಾಡಿದ ಅವರಿಗೆ ಗೊತ್ತಿತ್ತು. ಅದನ್ನೇ ಅವರು ಒಮ್ಮೆ ಭಾಷಣ ಮಾಡಿದರು. ಅದನ್ನೇ ಹಿಂದಿನ ನಿರ್ದೇಶಕರು ಸಹಿಸಲಿಲ್ಲ. ಅವರ ವಿರುದ್ಧವೇ ತಿರುಗಿ ಬಿದ್ದರು. ಇದು ನಾಟಕ ಅನ್ನೋದು ಕಲೆ ಅಲ್ಲ ಚಳುವಳಿ ಮಾಡುವುದಕ್ಕೆ ಅಂತಾ ಬಿಂಬಿಸಲು ಹೊರಟಿದ್ದರು. ನಾಟಕವೂ ರಸಾನುಭವ ಆದರೆ ನಾಟಕವನ್ನು ಚಳುವಳಿ ಮಾಡಿದರು. ಅಡ್ಡಂಡ ಕಾರ್ಯಪ್ಪರನ್ನು ತೆಗೆಯಲು ತುಂಬಾ ಯತ್ನಿಸಿದರು. ಆದರೆ ಸರ್ಕಾರ ಗಟ್ಟಿ ಇದ್ದ ಕಾರಣ ಆಗಲಿಲ್ಲ ಎಂದರು.
ಇದನ್ನೂ ಓದಿ: ‘ಆರ್ಯನ್ RSS’ ಸವಾಲನ್ನು ಮತ್ತೆ ಮುನ್ನೆಲೆಗೆ ತಂದ ಸಿದ್ದರಾಮಯ್ಯ; RSS’ ಭಯೋತ್ಪಾದಕ ಸಂಘಟನೆ ಎಂಬರ್ಥದಲ್ಲಿ ಸರಣಿ ಟ್ವೀಟ್
ಟಿಪ್ಪು ಎಕ್ಸ್ಪ್ರೆಸ್ ಅಂತಾ ಟ್ರೈನ್ ಇದೆ. ಅದಕ್ಕೆ ಟಿಪ್ಪು ಹೆಸರು ಏಕೆ ಇಡಬೇಕಾಗಿತ್ತು? ಪ್ರತಾಪಸಿಂಹ ಮಹಾರಾಜರ ಹೆಸರು ಇಡಬೇಕು ಅಂದರು. ಆದರೆ ಅದಕ್ಕೂ ವಿರೋಧ ವ್ಯಕ್ತವಾಗಿತ್ತು. ಟಿಪ್ಪುವಿನ ನಿಜ ಸ್ವರೂಪ ಅಂತಾ ಪುಸ್ತಕ ಇದೆ. ಅದು 16 ಆವೃತ್ತಿ ಕಂಡಿದೆ ಅದನ್ನು ಯಾರು ಉಲ್ಲೇಖ ಮಾಡಲ್ಲ. ಶೃಂಗೇರಿಗೆ ಅನುದಾನ ಏಕೆ ಕೊಟ್ಟ ಅಂತಾ ಬರೆದಿದ್ದಾರೆ. ಬ್ರಿಟಿಷರು ನಷ್ಟವನ್ನು ಕಟ್ಟಿಕೊಡುವಂತೆ ಹೇಳಿದ್ದರು. ಹಣ ಇಲ್ಲದ ಕಾರಣಕ್ಕಾಗಿ ಮಕ್ಕಳನ್ನು ಒತ್ತೆಯಿಟ್ಟ ಎಂದು ಸಾಹಿತಿ ಮೇಲುಕೋಟೆ ಹತ್ಯಾಕಾಂಡ, ಕೊಡಗಿನ ಹತ್ಯಾಕಾಂಡವನ್ನು ವಿವರಿಸಿದರು.
ಇನ್ನು ಇದೇ ವೇಳೆ ಶಿಕ್ಷಣ ಸಚಿವ ನಾಗೇಶ್ ಮನೆ ಮೇಲೆ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪೊಲೀಸ್ ಇಲ್ಲದಿದ್ದರೆ ನಾಗೇಶ್ ಮನೆ ಸುಟ್ಟು ಹೋಗುತಿತ್ತು. ಸುಮ್ಮನೆ ಯಾರೋ ಹುಡುಗರು ಇದನ್ನು ಮಾಡುವುದಿಲ್ಲ. ಇದನ್ನು ಯಾರೋ ಮಾಡಿಸುತ್ತಿದ್ದಾರೆ ಎಂದರು.
ಇನ್ನಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Thu, 2 June 22