ದಸರಾ ಗೋಲ್ಡ್​ ಕಾರ್ಡ್​ ಬಿಡುಗಡೆ; ಒಂದೇ ತಾಸಿಗೆ ಮಾರಾಟವಾದ ಟಿಕೆಟ್​ ಎಷ್ಟು ಗೊತ್ತಾ?

ಅ. 24 ರಂದು ನಡೆಯುವ ಜಂಬೂಸವಾರಿ ಮತ್ತು ಪಂಜಿನ ಕವಾಯಿತು ವೀಕ್ಷಣೆಗೂ ಇಂದು ಬೆಳಗ್ಗೆ 10 ಗಂಟೆಗೆ ಟಿಕೆಟ್‌ ಖರೀದಿಗೆ ಆನ್‌ಲೈನ್ ಮೂಲಕ ಅವಕಾಶ ನೀಡಲಾಗಿದ್ದು, ಅರಮನೆ ಆವರಣದೊಳಗೆ ದಸರಾ ಜಂಬೂಸವಾರಿ ವೀಕ್ಷಣೆಗೆ ಪ್ರತಿ ಟಿಕೆಟ್ ಬೆಲೆ ರೂ 3 ಸಾವಿರ ಮತ್ತು ರೂ. 2 ಸಾವಿರ ನಿಗದಿ ಮಾಡಲಾಗಿತ್ತು.

ದಸರಾ ಗೋಲ್ಡ್​ ಕಾರ್ಡ್​ ಬಿಡುಗಡೆ; ಒಂದೇ ತಾಸಿಗೆ ಮಾರಾಟವಾದ ಟಿಕೆಟ್​ ಎಷ್ಟು ಗೊತ್ತಾ?
ದಸರಾ ಗೋಲ್ಡ್​ ಕಾರ್ಡ್​ ಮಾರಾಟ
Updated By: ಕಿರಣ್ ಹನುಮಂತ್​ ಮಾದಾರ್

Updated on: Oct 18, 2023 | 6:17 PM

ಮೈಸೂರು, ಅ.18: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಈಗಾಗಲೇ ಅದ್ದೂರಿ ಆಗಿ ಚಾಲನೆ ಸಿಕ್ಕಿದೆ. ಅದರಂತೆ ವಿಶ್ವವಿಖ್ಯಾತ ಜಂಬೂ ಸವಾರಿ(Jambu savari) ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಅವಕಾಶ ನೀಡುವುದಕ್ಕಾಗಿ ಜಿಲ್ಲಾಡಳಿತ, ಇಂದು(ಅ.18) ದಸರಾ ಗೋಲ್ಡ್​ ಕಾರ್ಡ್ (Dasara Gold Card)​ ಬಿಡುಗಡೆ ಮಾಡಿದ್ದು, ಒಂದು ಗೋಲ್ಡ್‌ಕಾರ್ಡ್​ಗೆ ಬರೊಬ್ಬರಿ 6 ಸಾವಿರ ರೂಪಾಯಿಯನ್ನು ನಿಗದಿ ಮಾಡಲಾಗಿತ್ತು. ಇದೀಗ ಎಷ್ಟು ಟಿಕೆಟ್​ ಹಾಗೂ ಗೋಲ್ಡ್ ಕಾರ್ಡ್​ ಮಾರಾಟವಾಗಿದೆ ಎಂಬುದರ ಮಾಹಿತಿಯನ್ನು ಜಿಲ್ಲಾಡಳಿತ ನೀಡಿದೆ.

ದಸರಾ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಮಾರಾಟ ಮಾಹಿತಿ ನೀಡಿದ ಜಿಲ್ಲಾಡಳಿತ

ಹೌದು, ಜಂಬೂಸವಾರಿ ಮತ್ತು ಪಂಜಿನ ಕವಾಯಿತು ವೀಕ್ಷಣೆಗೆ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ನಿಗದಿ ಪಡಿಸಲಾಗಿತ್ತು. ಕೇವಲ ಒಂದು ತಾಸಿನ ಅವಧಿಯೊಳಗೆ ಆನ್‌ಲೈನ್ ಮೂಲಕ ಮಾರಾಟ ಮಾಡಲಾಗಿದ್ದು, ಒಟ್ಟು 1 ಸಾವಿರ ಗೋಲ್ಡ್ ಕಾರ್ಡ್ ಮಾರಾಟವಾದರೆ, ಜಂಬೂಸವಾರಿ ಮತ್ತು ಪಂಜಿನ ಕವಾಯಿತು ಪ್ರದರ್ಶನದ ತಲಾ 2 ಸಾವಿರ ಟಿಕೆಟ್‌ಗಳು, ಅರಮನೆ ಆವರಣದೊಳಗೆ ದಸರಾ ಮೆರವಣಿಗೆ ವೀಕ್ಷಣೆಯ  3 ಸಾವಿರ ರೂ ಮುಖಬೆಲೆಯ ಒಟ್ಟು 400 ಟಿಕೆಟ್,  2 ಸಾವಿರ ಬೆಲೆಯ 600 ಟಿಕೆಟ್ ಮತ್ತು ಬನ್ನಿಮಂಟಪದಲ್ಲಿ ಪಂಜಿನ ಕವಾಯಿತು ಮೈದಾನದ 500 ರೂಪಾಯಿಯ ಒಟ್ಟು 1000 ಟಿಕೆಟುಗಳು ಮಾರಾಟವಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಕೆ.ವಿ ರಾಜೇಂದ್ರ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ನಾಗರಬಾವಿಯಲ್ಲಿ ನವರಾತ್ರಿ: ಮೈಸೂರು ದಸರಾ ರೀತಿಯಲ್ಲಿ ತೆರಿಗೆ ಅಧಿಕಾರಿ ಮನೆಯಲ್ಲಿ ಗೊಂಬೆಗಳ ಕಲರವ, ನೀವೂ ನೋಡ ಬನ್ನಿ

ಇನ್ನು ಅ. 24 ರಂದು ನಡೆಯುವ ಜಂಬೂಸವಾರಿ ಮತ್ತು ಪಂಜಿನ ಕವಾಯಿತು ವೀಕ್ಷಣೆಗೂ ಇಂದು ಬೆಳಗ್ಗೆ 10 ಗಂಟೆಗೆ ಟಿಕೆಟ್‌ ಖರೀದಿಗೆ ಆನ್‌ಲೈನ್ ಮೂಲಕ ಅವಕಾಶ ನೀಡಲಾಗಿದ್ದು, ಅರಮನೆ ಆವರಣದೊಳಗೆ ದಸರಾ ಜಂಬೂಸವಾರಿ ವೀಕ್ಷಣೆಗೆ ಪ್ರತಿ ಟಿಕೆಟ್ ಬೆಲೆ ರೂ 3 ಸಾವಿರ
ಮತ್ತು ರೂ. 2 ಸಾವಿರ ನಿಗದಿ ಮಾಡಲಾಗಿತ್ತು. ಜೊತೆಗೆ ಬನ್ನಿಮಂಟಪದಲ್ಲಿ ಪಂಜಿನ ಕವಾಯಿತು ವೀಕ್ಷಣೆಗೆ ಪ್ರತಿ ಟಿಕೆಟಿನ ಬೆಲೆ ರೂ.500 ನಿಗದಿಸಲಾಗಿದ್ದು, ಈ  ಟಿಕೆಟ್ ಮತ್ತು ಗೋಲ್ಡ್‌ಕಾರ್ಡ್ ಖರೀದಿಗಾಗಿ mysoredasara.gov.in ವೆಬ್‌ಸೈಟ್‌ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿತ್ತು.

ಹೀಗೆ ಆನ್‌ಲೈನ್ ಮೂಲಕ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಖರೀದಿಸಿದವರಿಗೆ ಗೋಲ್ಡ್ ಕಾರ್ಡ್ ಟಿಕೆಟ್ ಸ್ವೀಕರಿಸಲು ಸ್ಥಳ, ದಿನಾಂಕ ಹಾಗೂ ಸಮಯ ತಿಳಿಸಲಾಗುತ್ತದೆ. ಅವರ ಮೊಬೈಲ್​ಗೆ ಎಸ್​ಎಂಎಸ್ ಮೂಲಕ ಮತ್ತು ಇ-ಮೇಲ್ ಐಡಿಗೆ ಮಾಹಿತಿ ಬರಲಿದೆ. ಅದಕ್ಕನುಸಾರವಾಗಿ ಖರೀದಿಸಿದವರು ಅವರ ಭಾವಚಿತ್ರವಿರುವ ಯಾವುದಾದರೂ ಒಂದು ಪೋಟೋ, ಐಡಿ ಹಾಜರುಪಡಿಸಿ ಗೋಲ್ಡ್ ಕಾರ್ಡ್ ಅಥವಾ ಟಿಕೆಟ್ ಪಡೆದುಕೊಳ್ಳಬಹುದು. ಆನ್‌ಲೈನ್ ಹೊರತುಪಡಿಸಿ ಇತರೆ ಕಡೆ ಯಾವುದೇ ರೀತಿಯಲ್ಲಿ ಗೋಲ್ಡ್‌ಕಾರ್ಡ್ ಮತ್ತು ಟಿಕೆಟ್ ಮಾರಾಟ ಇಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಮಾಹಿತಿ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ