ಮೈಸೂರಿನ ಬಹುತೇಕ ಕಟ್ಟಡಗಳಲ್ಲಿರುವುದು ಗೋಪುರವು ಅಲ್ಲ ಗುಮ್ಮಟವೂ ಅಲ್ಲ – ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಅಯ್ಯಂಗಾರ್

| Updated By: ಆಯೇಷಾ ಬಾನು

Updated on: Nov 16, 2022 | 11:01 AM

ಗೋಪುರ ಹಿಂದೂ ದ್ರಾವಿಡ ವೇಸರ ನಾಗರ ಶೈಲಿಯಲ್ಲಿ ನಿರ್ಮಾಣವಾಗಿರುತ್ತದೆ. ಗುಂಬಜ್ ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಾಣವಾಗುತ್ತದೆ. ಗೋಪುರ, ಗುಂಬಜ್ ಎರಡೂ ಬೇರೆ ಬೇರೆ.

ಮೈಸೂರಿನ ಬಹುತೇಕ ಕಟ್ಟಡಗಳಲ್ಲಿರುವುದು ಗೋಪುರವು ಅಲ್ಲ ಗುಮ್ಮಟವೂ ಅಲ್ಲ - ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಅಯ್ಯಂಗಾರ್
ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಅಯ್ಯಂಗಾರ್
Follow us on

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಬಸ್​ ನಿಲ್ದಾಣದ ಮೇಲೆ ಕಟ್ಟಲಾದಂತಹ ಗುಂಬಜ್ ಭಾರೀ ಚರ್ಚೆಗೆ ಕಾರಣವಾಗಿದೆ. ನಿಲ್ದಾಣದ ಮೇಲೆ ಕಟ್ಟಿರುವ ಗುಮ್ಮಟದ ರೀತಿಯ ಆಕೃತಿ ಇಸ್ಲಾಂ ಶೈಲಿ ಅಂತಾ ಆರೋಪಿಸಲಾಗ್ತಿದೆ. ಅಷ್ಟೇ ಅಲ್ಲದೆ ಮೈಸೂರು ಸಂಸದ ಪ್ರತಾಪ್‌ ಸಿಂಹ, ಗುಮ್ಮಟ ತೆರವು ಮಾಡಿ ಇಲ್ಲದಿದ್ದರೆ ನಾನೇ ಜೆಸಿಬಿ ತರ್ತೀನಿ ಎಂದು ಎಚ್ಚರಿಕೆ ನೀಡಿದ್ದರು. ಸದ್ಯ ಈಗ ಈ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಅಯ್ಯಂಗಾರ್ ಕೆಲ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.

ಗೋಪುರ, ಗುಂಬಜ್ ಎರಡೂ ಬೇರೆ ಬೇರೆ. ನೋಡಲು ಒಂದೇ ರೀತಿ ಕಾಣಿಸಿದರು ಎರಡು ಬೇರೆ ಬೇರೆ ಶೈಲಿ ಹೊಂದಿರುತ್ತದೆ ಎಂದು ಟಿವಿ9ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಅಯ್ಯಂಗಾರ್ ಮಾಹಿತಿ ನೀಡಿದ್ದಾರೆ. ಗೋಪುರ ಹಿಂದೂ ದ್ರಾವಿಡ ವೇಸರ ನಾಗರ ಶೈಲಿಯಲ್ಲಿ ನಿರ್ಮಾಣವಾಗಿರುತ್ತದೆ. ಕೆಳಗಡೆ ಅಷ್ಠಕೋನವಿರುತ್ತದೆ ಮೇಲ್ಭಾಗದಲ್ಲಿ ವೃತ್ತಾಕಾರ ಇರುತ್ತದೆ. ಹಾಗೂ ಗುಂಬಜ್ ಸಂಪೂರ್ಣ ವೃತ್ತಾಕಾರವಾಗಿರುತ್ತದೆ. ಗುಂಬಜ್ ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಾಣವಾಗುತ್ತದೆ. ಎರಡನ್ನೂ ಅವರ ಧಾರ್ಮಿಕ ಕೇಂದ್ರಗಳ ಮೇಲೆ ಪ್ರತಿಷ್ಠಾಪನೆ ಮಾಡಲಾಗುತ್ತೆ. ಅಲ್ಲದೆ ಅವುಗಳನ್ನು ಅವರ ಧಾರ್ಮಿಕ ನೀತಿ ನಿಯಮಗಳಿಗನುಗುಣವಾಗಿ ರಚನೆ ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ಎಲ್ಲದರ ಮಿಶ್ರಣದ ಗೋಪುರ ಗುಂಬಜ್‌ಗಳಿವೆ. ಮೈಸೂರಿನಲ್ಲಿರುವುದು ಇಂಡೋ ಸಾರ್ಸೆನಿಕ್ ಹಾಗೂ ಗೋಥಿಕ್ ಶೈಲಿಯ ಮಿಶ್ರಣ. ಅರಮನೆ ಸೇರಿದಂತೆ ಮೈಸೂರಿನ ಬಹುತೇಕ ಕಟ್ಟಡಗಳಲ್ಲಿರುವುದು ಗೋಪುರವು ಅಲ್ಲ ಗುಮ್ಮಟವೂ ಅಲ್ಲ. ಅದು ಎಲ್ಲದರ ಮಿಶ್ರಣದ ನಿಯೋ ಕ್ಲಾಸಿಕಲ್ ಶೈಲಿಯ ಕಟ್ಟಡಗಳು. ಸಾಮಾನ್ಯವಾಗಿ ಮೂರು ವಿಧಾನದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತೆ. ಧಾರ್ಮಿಕ ಕಟ್ಟಡ, ರಕ್ಷಣಾ ಕಟ್ಟಡ ಮತ್ತು ಸಾಮಾಜಿಕ ಕಟ್ಟಡ. ಪ್ರತಿ ವಿಧಾನದಲ್ಲೂ ಅದರದ್ದೇ ಆದ ಶೈಲಿಯ ಅನುಸರಣೆ ಮಾಡಲಾಗುತ್ತದೆ. ಗುಂಬಜ್ ಹಾಗೂ ಗೋಪುರ ನಿರ್ಮಾಣ ಮಾಡುವಾಗ ಧಾರ್ಮಿಕ ಆಚರಣೆ ಮೂಲಕ ಪ್ರತಿಷ್ಠಾಪನೆ ಮಾಡಲಾಗುತ್ತೆ ಎಂದು ಡಾ.ಶೆಲ್ವಪಿಳೈ ಅಯ್ಯಂಗಾರ್ ವಿವರಿಸಿದ್ದಾರೆ.

ಮೈಸೂರು ಗುಂಬಜ್‌ ಗುದ್ದಾಟ: ವಾರದೊಳಗೆ ಬಸ್​ ನಿಲ್ದಾಣ ತೆರವುಗೊಳಿಸುವಂತೆ ಪಾಲಿಕೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೋಟಿಸ್​​

ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಬಸ್‌ ಶೆಲ್ಟರ್‌ ವಿವಾದಕ್ಕೆ ಕಾರಣವಾಗಿದೆ. ಶೆಲ್ಟರ್‌ ಮೇಲಿರೋ ಗುಮ್ಮಟದ ಆಕೃತಿಯನ್ನು ತೆರವು ಮಾಡಲು ಅಧಿಕಾರಿಗಳಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ(Pratap Simha,)ಸೂಚನೆ ನೀಡಿದ್ದಾರೆ. ಇದರ ಜೊತೆಗೆ ಈಗ ಮೈಸೂರು ಪಾಲಿಕೆಗೆ(Mysore City Corporation) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(National Highways Authority) ನೋಟಿಸ್ ನೀಡಿದೆ. ಮೈಸೂರಿನ JSS ಕಾಲೇಜು​ ಬಳಿಯ ಬಸ್ ಶೆಲ್ಟರ್​ ತೆರವಿಗೆ ಸೂಚಿಸಿದೆ. ಅನಧಿಕೃತವಾಗಿ ಕಟ್ಟಿರುವ ಬಸ್ ನಿಲ್ದಾಣದ ಶೆಲ್ಟರ್ ತೆರವುಗೊಳಿಸುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ನೋಟಿಸ್ ನೀಡಿದ್ದಾರೆ.

Published On - 11:00 am, Wed, 16 November 22