‘ಭಕ್ತರು ದೇವಸ್ಥಾನಕ್ಕೆ ಮಾಂಸಾಹಾರ ಅಂತಷ್ಟೇ ಅಲ್ಲ; ಸಸ್ಯಾಹಾರವನ್ನೂ ಸೇವಿಸಿ ಹೋಗುವುದಿಲ್ಲ- ಅದು ನಂಬಿಕೆ ಆಚರಣೆಯ ವಿಚಾರ’

| Updated By: ಆಯೇಷಾ ಬಾನು

Updated on: Aug 22, 2022 | 5:18 PM

ಭಕ್ತರು ದೇವಸ್ಥಾನಕ್ಕೆ ಮಾಂಸ ಆಹಾರ ಮಾತ್ರವಲ್ಲ ಸಸ್ಯಾಹಾರವನ್ನು ಸೇವಿಸಿ ಹೋಗುವುದಿಲ್ಲ. ಇದು ನಂಬಿಕೆ ಆಚರಣೆಯ ವಿಚಾರ ಎಂದು ಡಾ ಶೆಲ್ವ ಪಿಳ್ಳೈ ಅಯ್ಯಂಗಾರ್ ತಿಳಿಸಿದರು. ದೇವರ ಆಹಾರ ಪೂಜಾ ಪದ್ಧತಿಯಲ್ಲಿ ಮೂರು ವಿಧಗಳಿವೆ.

‘ಭಕ್ತರು ದೇವಸ್ಥಾನಕ್ಕೆ ಮಾಂಸಾಹಾರ ಅಂತಷ್ಟೇ ಅಲ್ಲ; ಸಸ್ಯಾಹಾರವನ್ನೂ ಸೇವಿಸಿ ಹೋಗುವುದಿಲ್ಲ- ಅದು ನಂಬಿಕೆ ಆಚರಣೆಯ ವಿಚಾರ’
ಡಾ ಶೆಲ್ವ ಪಿಳ್ಳೈ ಅಯ್ಯಂಗಾರ್
Follow us on

ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಕಾರಿಗೆ ಮೊಟ್ಟೆ ಹೊಡೆದಾಗಿನಿಂದ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ವಿವಾದ, ಸೃಷ್ಟಿಯಾಗ್ತಿದೆ. ಕೊಡಗಿಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಮಾಂಸದೂಟ ಮಾಡಿ ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ರು ಅಂತಾ ಬಿಜೆಪಿ ಅವರು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಅಂತಾ ಸಮರ ಸಾರಿದ್ದಾರೆ. ಸದ್ಯ ಈ ವಿಷಯ ಭಾರೀ ಚರ್ಚೆಯಾಗುತ್ತಿದೆ. ಹೀಗಾಗಿ ಧಾರ್ಮಿಕ ತಪಸ್ವಿ ಡಾ ಶೆಲ್ವ ಪಿಳ್ಳೈ ಅಯ್ಯಂಗಾರ್(Dr Shalva Pillai Iyengar) ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಭಕ್ತರು ದೇವಸ್ಥಾನಕ್ಕೆ ಮಾಂಸ ಆಹಾರ ಮಾತ್ರವಲ್ಲ ಸಸ್ಯಾಹಾರವನ್ನು ಸೇವಿಸಿ ಹೋಗುವುದಿಲ್ಲ. ಇದು ನಂಬಿಕೆ ಆಚರಣೆಯ ವಿಚಾರ ಎಂದು ಡಾ ಶೆಲ್ವಪಿಳ್ಳೈ ಅಯ್ಯಂಗಾರ್ ತಿಳಿಸಿದರು. ದೇವರ ಆಹಾರ ಪೂಜಾ ಪದ್ಧತಿಯಲ್ಲಿ ಮೂರು ವಿಧಗಳಿವೆ. ಒಂದು ಸಂಪೂರ್ಣ ಸಾತ್ವಿಕ ಆಹಾರದ ದೇವರು. ಮತ್ತೊಂದು ರಾಜಸ ಅಂದರೆ ಎರಡು ಆಹಾರ. ಮೂರನೇಯದೇ ತಾಮಸ ಅಂದರೆ ಸಂಪೂರ್ಣ ಮಾಂಸ ಹಾಗೂ ಮದ್ಯ. ಆದರೆ ಮಾಂಸ ಮದ್ಯದ ದೇವರಲ್ಲೂ‌ ಮಾಂಸ ತಿಂದ ನಂತರ ಭಕ್ತರು ದೇವಸ್ಥಾನಕ್ಕೆ ಹೋಗುವುದಿಲ್ಲ. ಈ ಬಗ್ಗೆ ಅನೇಕ ಶಾಸ್ತ್ರ ಧರ್ಮದಲ್ಲಿ ಉಲ್ಲೇಖಗಳಿವೆ. ಪೂಜಾ ವಿಧಿ ವಿಧಾನಗಳ ಬಗ್ಗೆ ಹಿರಿಯರು ಒಂದಷ್ಟು ಮಾರ್ಗಸೂಚಿ ಮಾಡಿದ್ದಾರೆ. ಅದನ್ನು ಪಾಲಿಸುವುದು ನಂಬಿಕೆಯ ವಿಚಾರ. ದೇವರು ಎಲ್ಲೂ ಆಹಾರದ ಬಗ್ಗೆ ಪೂಜೆ ಬಗ್ಗೆ ಹೇಳಿಲ್ಲ. ಈ ರೀತಿ ಹೇಳುವುದು ಸತ್ಯವಾದರೂ ಶೂನ್ಯ ವಾದವಾಗುತ್ತದೆ ಎಂದು ಡಾ ಶೆಲ್ವ ಪಿಳ್ಳೈ ಅಯ್ಯಂಗಾರ್ ಅವರು ದೇವರ ಪೂಜಾ ವಿದಾನ ಹಾಗೂ ಮಾಂಸ ಸೇವನೆ ಬಳಿಕ ದೇವರ ದರ್ಶನದ ಬಗ್ಗೆ ವಿವರ ನೀಡಿದ್ದಾರೆ.

ಇನ್ನು ಸಿದ್ದರಾಮಯ್ಯ ಮಾಂಸಾಹಾರ ಸ್ವೀಕರಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅವರು ಸಾರ್ವಜನಿಕ ಜೀವನದ ಒತ್ತಡದಲ್ಲಿ ನಿಯಮ ಪಾಲಿಸಲು ಆಗಿಲ್ಲದೆ ಇರಬಹದು ಎಂದರು. ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ವಿಚಾರಕ್ಕೆ ಸಂಬಂಧಿಸಿ ಅದನ್ನು ಸಿದ್ದರಾಮಯ್ಯ ಎಲ್ಲೂ ಹೇಳಿಲ್ಲ. ವೈಯಕ್ತಿಕ ಆಚರಣೆಗಳು ಬೇರೆ ಸಾರ್ವಜನಿಕವಾಗಿ ಆಚರಿಸುವ ವಿಚಾರವೇ ಬೇರೆ. ಸಾರ್ವಜನಿಕ ಜೀವನದಲ್ಲಿ ಈ ರೀತಿ ಆದಾಗ ಕೆಲವರ ಭಾವನೆಗೆ ಧಕ್ಕೆಯಾಗುತ್ತದೆ. ಯಾರ ಧಾರ್ಮಿಕ ಭಾವನೆಗೆ ಧಕ್ಕೆ ತರಬಾರದು ಎಂಬುದೇ ಸಂವಿಧಾನದ ಆಶಯ. ಆದರೆ ನಾನು ಮಾಡಿದ್ದು ಸರಿ ಅನ್ನುವ ಭಾವ ಸಮಂಜಸವಲ್ಲ ಎಂದು ತಿಳಿಸಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:18 pm, Mon, 22 August 22