ಮೈಸೂರು: ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟ ಬೋನಿಗೆ ಹೆಣ್ಣು ಚಿರತೆಯೊಂದು ಸೆರೆ ಸಿಕ್ಕಿದೆ. ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕಾರ್ಗಳ್ಳಿ ಗ್ರಾಮದಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ. ಹಲವು ದಿನಗಳಿಂದ ಗ್ರಾಮದ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ, ಮೇಕೆ ಮರಿಗಳನ್ನು ಕೊಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ರೈತ ಜನಾರ್ಧನ್ ಅವರ ಜಮೀನಿನಲ್ಲಿ ಅರಣ್ಯ ಅಧಿಕಾರಿಗಳು ಬೋನು ಇಟ್ಟಿದ್ದರು. ಸದ್ಯ ಬೋನಿಗೆ ಚಿರತೆ ಬಿದ್ದಿದ್ದು, ಚಿರತೆಯನ್ನು ಅರಣ್ಯಾಧಿಕಾರಿಗಳು ಮತ್ತೆ ಕಾಡಿಗೆ ಬಿಟ್ಟಿದ್ದಾರೆ.
ಚಾಮರಾಜನಗರ: ಕಾಡಾನೆ ದಾಳಿ; ಆನೆಯನ್ನು ಕಾಡಿಗಟ್ಟುವಂತೆ ಗ್ರಾಮಸ್ಥರಿಂದ ಒತ್ತಾಯ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೊರಮನ ಕತ್ರಿ ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿದೆ. ಕಾಡಾನೆ ಉಪಟಳದಿಂದ ರೈತರು ಬೆಳೆದ ಬೆಳೆಗೆ ಹಾನಿಯಾಗಿದೆ. ಹೀಗಾಗಿ ನೊಂದ ಗ್ರಾಮಸ್ಥರು ಆನೆಯನ್ನು ಕಾಡಿಗಟ್ಟುವಂತೆ ಒತ್ತಾಯಿಸಿದ್ದಾರೆ. ಆನೆ ಕಾಡಿಗಟ್ಟಲು ಯುವಕರು ಮತ್ತು ಮಲೆಮಾದೇಶ್ವರ ವನ್ಯಜೀವಿ ವಿಭಾಗದ ಪಿಜಿ ಪಾಳ್ಯ ಅರಣ್ಯ ಇಲಾಖೆ ಸಿಬ್ಬಂದಿಗಳು ಹರ ಸಾಹಸ ಪಟ್ಟಿದ್ದಾರೆ.
ರಾತ್ರಿ ಇಡೀ ಜೋಳ, ರಾಗಿ, ಆಲೂಗಡ್ಡೆ ಸೇರಿದಂತೆ ಹಲವು ಬೆಳೆ ತಿಂದು ಕಾಡಾನೆಗಳು ಹಾಳು ಮಾಡಿವೆ. ಹೀಗಾಗಿ ಪದೇ ಪದೇ ಜಮೀನಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ರಾಜಕಾಲುವೆ ನೀರು ನುಗ್ಗಿ 10ಕ್ಕೂ ಹೆಚ್ಚು ಜಾನುವಾರು ಸಾವು
ಬೆಂಗಳೂರಿನಲ್ಲಿ ರಾತ್ರಿ ಸುರಿದ ಭಾರಿ ಮಳೆಯ ಅವಾಂತರದಿಂದ ರಾಜಕಾಲುವೆಗೆ ನೀರು ನುಗ್ಗಿ 10ಕ್ಕೂ ಹೆಚ್ಚು ಜಾನುವಾರು ಸಾವನ್ನಪ್ಪಿವೆ. ಮನೆ, ಕೊಟ್ಟಿಗೆಗೆ ಏಕಾಏಕಿ ನೀರು ನುಗ್ಗಿ ಜಾನುವಾರು ಮೃತಪಟ್ಟಿವೆ. ಅಂದಾನಪ್ಪ ಎಂಬುವವರಿಗೆ ಸೇರಿದ 5 ಹಸು, 6 ಮೇಕೆ ಸಾವೀಗಿಡಾಗಿದೆ. ಜಾನುವಾರುಗಳಿಗೆ ಸಂಗ್ರಹಿಸಿಟ್ಟಿದ್ದ ಮೇವು ಕೂಡ ನೀರುಪಾಲಾಗಿದೆ. ರೈತನ ಮನೆಯಲ್ಲಿದ್ದ ಸುಮಾರು 30 ಮೂಟೆ ಇಂಡಿ ಬೂಸ ಮಳೆಗೆ ಸಂಪೂರ್ಣ ಹಾನಿಯಾಗಿದೆ.
ಇದನ್ನೂ ಓದಿ:
ಚಾಮರಾಜನಗರ: ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಆತಂಕ ಮೂಡಿಸಿದ್ದ ಚಿರತೆ ಸೆರೆ, ನಿಟ್ಟುಸಿರುಬಿಟ್ಟ ಜನ
ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳಲು ವಾಕಿಂಗ್ ಸ್ಟಿಕ್ನೊಂದಿಗೆ ಹೋರಾಡಿದ ಮಹಿಳೆ; ಭಯಾನಕ ದೃಶ್ಯವಿದು
Published On - 9:56 am, Mon, 4 October 21