ಚಾಮರಾಜನಗರ: ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಆತಂಕ ಮೂಡಿಸಿದ್ದ ಚಿರತೆ ಸೆರೆ, ನಿಟ್ಟುಸಿರುಬಿಟ್ಟ ಜನ

TV9 Digital Desk

| Edited By: Ayesha Banu

Updated on: Sep 26, 2021 | 11:11 AM

ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಜನರನ್ನು ಆತಂಕಕ್ಕೆ ತಳ್ಳಿದ್ದ ಚಿರತೆಯನ್ನು ಬೋನಿನ ಸಹಾಯದಿಂದ ಸೆರೆ ಹಿಡಿದಿದ್ದು ಚಿರತೆ ಕಾಟದಿಂದ ರೋಸಿಹೋಗಿದ್ದ ವೀರನಪುರ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಚಾಮರಾಜನಗರ: ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಆತಂಕ ಮೂಡಿಸಿದ್ದ ಚಿರತೆ ಸೆರೆ, ನಿಟ್ಟುಸಿರುಬಿಟ್ಟ ಜನ
ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಆತಂಕ ಮೂಡಿಸಿದ್ದ ಚಿರತೆ ಸೆರೆ

Follow us on

ಚಾಮರಾಜನಗರ: ಕಳೆದ ಹಲವು ದಿನಗಳಿಂದ ದನ, ಕುರಿ ಕೊಂದು ಜನರನ್ನು ಆತಂಕಕ್ಕೆ ನೂಕಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬೋನಿಗೆ ಬೀಳಿಸಿದ್ದಾರೆ. ಚಾಮರಾಜನಗರ ತಾಲೂಕಿನ ವೀರನಪುರ ಬಳಿ ಚಿರತೆ ಸೆರೆಯಾಗಿದೆ.

ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಜನರನ್ನು ಆತಂಕಕ್ಕೆ ತಳ್ಳಿದ್ದ ಚಿರತೆಯನ್ನು ಬೋನಿನ ಸಹಾಯದಿಂದ ಸೆರೆ ಹಿಡಿದಿದ್ದು ಚಿರತೆ ಕಾಟದಿಂದ ರೋಸಿಹೋಗಿದ್ದ ವೀರನಪುರ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಹಿಂದೆ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಸಿಬ್ಬಂದಿಗೆ ಸ್ಥಳೀಯರು ಆಗ್ರಹಿಸಿದ್ದರು. ಅಲ್ಲದೆ ಪ್ರತಿಭಟನೆ ಕೂಡ ಮಾಡಿದ್ದರು. ಬಳಿಕ 4 ದಿನಗಳ ಹಿಂದೆ ಅಧಿಕಾರಿಗಳು ಬೋನ್ ಇರಿಸಿ ನಾಯಿ ಕಟ್ಟಿಹಾಕಿದ್ದರು. ಸದ್ಯ ಚಿರತೆ ಬೋನಿಗೆ ಬಿದ್ದಿದ್ದು ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.

ರಾಗಿಮುದ್ದನಹಳ್ಳಿಯಲ್ಲಿ ಚಿರತೆ ದಾಳಿಗೆ 8 ಕುರಿಗಳು ಬಲಿ ಇನ್ನು ಮತ್ತೊಂದೆಡೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿಯಲ್ಲಿ ಚಿರತೆ ದಾಳಿಗೆ 8 ಕುರಿಗಳು ಬಲಿಯಾಗಿವೆ. ರೈತ ಮಹಿಳೆ ಅಕ್ಕಯ್ಯಮ್ಮಗೆ ಸೇರಿದ 8 ಕುರಿಗಳ ಮೇಲೆ ಚಿರತೆ ದಾಳಿ ಮಾಡಿದೆ. ಸುಮಾರು 1.5 ಲಕ್ಷ ರೂ ನಷ್ಟವಾಗಿದೆ ಎಂದು ಅಕ್ಕಮ್ಮ ಅಳಲು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಮಣ್ಣು ತುಂಬಿ ರಸ್ತೆಯಲ್ಲಿದ್ದ ಗುಂಡಿ ಮುಚ್ಚಿದ ಕಾನ್ಸ್‌ಟೇಬಲ್; ಸಂಚಾರಿ ಠಾಣೆ ಪಿಸಿ ಚಂದ್ರಕಾಂತ್ ಕೆಲಸಕ್ಕೆ ಸಾರ್ವಜನಿಕರ ಮೆಚ್ಚುಗೆ

ರಾಂಗ್ ರೂಟ್​ನಲ್ಲಿ ಬಂದ ಕಾರಿಗೆ ಮತ್ತೊಂದು ಕಾರು ಡಿಕ್ಕಿ; ಇಬ್ಬರು ದುರ್ಮರಣ

ತಾಜಾ ಸುದ್ದಿ

Related Stories

Click on your DTH Provider to Add TV9 Kannada