
ಮೈಸೂರು: ಬೆಂಗಳೂರು ಮೈಸೂರು ಹೈವೇ( (Bengaluru-Mysuru Expressway) ಉದ್ಘಾಟನೆ ವಿಚಾರ ‘ದಶಪಥ ಹೆದ್ದಾರಿ ಸಿದ್ದರಾಮಯ್ಯ, ಹೆಚ್.ಸಿ.ಮಹದೇವಪ್ಪನವರ ಕನಸು. ಅದಕ್ಕೆ ಆಸ್ಕರ್ ಫರ್ನಾಂಡೀಸ್, ಕೇಂದ್ರ ಸರ್ಕಾರ ನೆರವು ನೀಡಿತ್ತು. ಈಗ ಸಿ.ಟಿ.ರವಿ, ಪ್ರತಾಪ್ ಸಿಂಹ ಏನೇನೋ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ. ಸಿದ್ದಲಿಂಗಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಕೆಲಸ ಮಾಡದೆ ಯೋಜನೆ ನಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ. 22 ಕಿಲೋ ಮೀಟರ್ ಹೆದ್ದಾರಿ ಕಾಮಗಾರಿ ಇನ್ನೂ ಮುಗಿದಿಲ್ಲ. ಹೆದ್ದಾರಿ ಕಾಮಗಾರಿ ಮುಗಿದ ಬಳಿಕ ಉದ್ಘಾಟನೆ ಮಾಡಬೇಕಿತ್ತು ಎಂದಿದ್ದಾರೆ.
‘ಅಭಿವೃದ್ಧಿ ಯಾರದ್ದೋ ಸ್ವತ್ತಲ್ಲ, ಸಾಂವಿಧಾನಿಕ ಜವಾಬ್ದಾರಿ ಸಾರ್ವಜನಿಕರ ತೆರಿಗೆ ಹಣದಲ್ಲಿ ರಸ್ತೆ ಮಾಡಿದ್ದಾರೆ. 2021ರಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿಧಾನ ಪರಿಷತ್ತಿನಲ್ಲಿ ಹೇಳಿದ್ದಾರೆ. ಇರುವ 118 ಕಿ.ಮೀ ನಲ್ಲಿ 22 ಕಿ.ಮೀ. ಹೆದ್ದಾರಿ ಇನ್ನೂ ಕಾಮಗಾರಿ ಆಗಿಲ್ಲ. ಕಾಮಗಾರಿ ಮುಗಿಸಿ ಬಳಿಕ ಪ್ರಧಾನಿ ಉದ್ಘಾಟನೆ ಮಾಡಬೇಕಿತ್ತು. ನಾಗನಹಳ್ಳಿಯ ಜನ ಗಲಾಟೆ ಮಾಡಿದ ಮೇಲೆ ಪೂಜಾರಿ ಫಿಶ್ ಲ್ಯಾಂಡ್ ಹೋಟೆಲ್‌ಗೆ ನೇರವಾಗಿ ಅಂಡರ್‌ಪಾಸ್ ಕೊಟ್ಟಿದ್ದಾರೆ. ನರಿ ಬುದ್ದಿ ಮಾಡಬೇಡಿ ರಾಜಕೀಯ ಭಾಷೆ ಸರಿಯಾಗಿ ಬಳಸಿ, ಬೆಲೆ ಏರಿಕೆಯಿಂದ ಜನ ಸಾಯುತ್ತಿದ್ದಾರೆ. ರಚನಾತ್ಮಕವಾಗಿ ಟೀಕೆ ಮಾಡಿ, ಮಾತನಾಡುವ ದಾಟಿ ಏನು? ಮತ್ತೆ ರಾಜಕೀಯ ಲಾಭದ ಮಾತನಾಡಬೇಡಿ. ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:Bengaluru Mysuru Expressway: ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಬಗ್ಗೆ ತಿಳಿಯಲೇಬೇಕಾದ ಮಾಹಿತಿ
ಮಾ.12ರಂದು ಬೆಂಗಳೂರು ಮೈಸೂರು ಹೈವೇ ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ
ನೂತನವಾಗಿ ನಿರ್ಮಾಣವಾಗಿರುವ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಮಾ.12) ಮಂಡ್ಯದ ಮದ್ದೂರು ತಾಲೂಕಿನಲ್ಲಿ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಹಿನ್ನೆಲೆ ದಶಪಥ ಹೆದ್ದಾರಿಯನ್ನು ಅರ್ಧಕ್ಕರ್ಧ ಬಂದ್ ಮಾಡಲಾಗಿದ್ದು, ಒಂದೊಮ್ಮೆ ಎಸ್ಪಿಜಿ (SPG) ಅನುಮತಿ ಕೊಟ್ಟರೆ ಇದೇ ಹೈವೇಯಲ್ಲಿ ಮೋದಿ ರೋಡ್ ಶೋ ಕೂಡ ನಡೆಯಲಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:17 pm, Fri, 10 March 23