ಐದು ರೂಪಾಯಿ ನಾಣ್ಯ ನುಂಗಿದ್ದ 4 ವರ್ಷದ ಬಾಲಕಿ ಸಾವು

ಹಿರಿಕ್ಯಾತನಹಳ್ಳಿಯ ಅಜ್ಜಿ ಮನೆಯಲ್ಲಿದ್ದ ಖುಷಿ ಶುಕ್ರವಾರ ನಾಣ್ಯದೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನಾಣ್ಯವನ್ನು ನುಂಗಿದ್ದಳು. ಘಟನೆ ಬಳಿಕ ತಕ್ಷಣವೇ ಪೋಷಕರು ಮಗುವಿಗೆ ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ರು.

ಐದು ರೂಪಾಯಿ ನಾಣ್ಯ ನುಂಗಿದ್ದ 4 ವರ್ಷದ ಬಾಲಕಿ ಸಾವು
ಖುಷಿ(4) ಮೃತ ಬಾಲಕಿ
Updated By: ಆಯೇಷಾ ಬಾನು

Updated on: Sep 06, 2021 | 9:01 AM

ಮೈಸೂರು: ಐದು ರೂಪಾಯಿ ನಾಣ್ಯ ನುಂಗಿದ್ದ 4 ವರ್ಷದ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಆಯರಹಳ್ಳಿ ಗ್ರಾಮದಲ್ಲಿ ನಡೆದಿದೆ. ಖುಷಿ(4) ಮೃತ ಬಾಲಕಿ.

ಹಿರಿಕ್ಯಾತನಹಳ್ಳಿಯ ಅಜ್ಜಿ ಮನೆಯಲ್ಲಿದ್ದ ಖುಷಿ ಶುಕ್ರವಾರ ನಾಣ್ಯದೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನಾಣ್ಯವನ್ನು ನುಂಗಿದ್ದಳು. ಘಟನೆ ಬಳಿಕ ತಕ್ಷಣವೇ ಪೋಷಕರು ಮಗುವಿಗೆ ಮೊದಲು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಗು ಮೃತಪಟ್ಟಿದೆ.

ಇದನ್ನೂ ಓದಿ:

Crime News: ನೀರಿನಲ್ಲಿ ಆಟ ಆಡುತ್ತಿದ್ದಕ್ಕೆ ಕೋಪಗೊಂಡು ಮಗುವಿಗೆ ಥಳಿಸಿದ ಹೆತ್ತ ತಾಯಿ; ಗಂಭೀರ ಸ್ಥಿತಿಯಿಂದ 2 ವರ್ಷದ ಮಗು ಸಾವು

ಲಸಿಕೆ ಪಡೆದ ಬಳಿಕ ಮೂರು ತಿಂಗಳ ಮಗು ಸಾವು; ಆರೋಗ್ಯ ಅಧಿಕಾರಿಗಳ ಎಡವಟ್ಟು ಕಾರಣ ಎಂದು ಗ್ರಾಮಸ್ಥರ ಆರೋಪ, ಪ್ರತಿಭಟನೆ